ಏಷ್ಯಾಕಪ್ 2018: ಟೀಂ ಇಂಡಿಯಾ ಜೊತೆ ಧೋನಿ ದುಬೈ ಪ್ರಯಾಣ!

Published : Sep 13, 2018, 09:19 PM ISTUpdated : Sep 19, 2018, 09:25 AM IST
ಏಷ್ಯಾಕಪ್ 2018: ಟೀಂ ಇಂಡಿಯಾ ಜೊತೆ ಧೋನಿ ದುಬೈ ಪ್ರಯಾಣ!

ಸಾರಾಂಶ

ಏಷ್ಯಾಕಪ್ ಟೂರ್ನಿಗಾಗಿ ಟೀಂ ಇಂಡಿಯಾ ದುಬೈಗೆ ಪ್ರಯಾಣ ಬೆಳೆಸಿದೆ. 2 ಬ್ಯಾಚ್ ಮೂಲಕ ಟೀಂ ಇಂಡಿಯಾ ದುಬೈಗೆ ತೆರಳಲಿದೆ. ಈಗಾಗಲೇ ಎಂ ಎಸ್ ಧೋನಿ ಸೇರಿದಂತೆ ಮೊದಲ ಬ್ಯಾಚ್ ದುಬೈಗೆ ಬಂದಿಳಿದಿದೆ.

ದುಬೈ(ಸೆ.13): ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಮುಗಿಸಿದ ಟೀಂ ಇಂಡಿಯಾ ಇದೀಗ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಸಜ್ಜಾಗುತ್ತಿದೆ. ಸೆಪ್ಟೆಂಬರ್ 15 ರಿಂದ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ.

ಇತ್ತ ಏಕದಿನ ತಂಡದ ಕ್ರಿಕೆಟಿಗರು ಮುಂಬೈನಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಿಗಧಿತ ಓವರ್ ಕ್ರಿಕೆಟ್ ಬಳಿಕ ವಿಶ್ರಾಂತಿಗೆ ಜಾರಿದ್ದ ಎಂ ಎಸ್ ಧೋನಿ ಇದೀಗ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ.

 

 

ಎಂ ಎಸ್ ಧೋನಿ ಜೊತೆ ನಾಯಕ ರೋಹಿತ್ ಶರ್ಮಾ, ಕನ್ನಡಿಗ ಮನೀಶ್ ಪಾಂಡೆ, ಕೇದಾರ್ ಜಾದವ್, ಯುಜುವೇಂದ್ರ ಚೆಹಾಲ್, ಹಾಗೂ ಕುಲ್ದೀಪ್ ಯಾದವ್ ದುಬೈಗೆ ಪ್ರಯಾಣ ಬೆಳೆಸಿದರು.

 

 

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನ ಸೆಪ್ಟೆಂಬರ್ 18ರಂದು  ಹಾಂಕ್ ಕಾಂಗ್ ವಿರುದ್ದ ಆಡಲಿದೆ. ಸೆಪ್ಟೆಂಬರ್ 19 ರಂದು ಭಾರತ ಬದ್ಧವೈರಿ ಪಾಕಿಸ್ತಾನ ತಂಡವನ್ನ ಎದುರಿಸಲಿದೆ.

ಇದನ್ನೂ ಓದಿ: ಧೋನಿ ಬಹಿರಂಗ ಪಡಿಸಿದ್ರು ನಾಯಕತ್ವ ತ್ಯಜಿಸಿದ ಕಾರಣ!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ಹೀರೋ, ಈ ಬಾರಿಯ ಐಪಿಎಲ್‌ನಲ್ಲಿ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಝೀರೋ ಆಗಿದ್ದೇಕೆ?
ಟೂರ್ನಿಯಲ್ಲಿ ಏಳನೇ ಸೋಲು ಕಾಣುತ್ತಿದ್ದಂತೆಯೇ ಅಚ್ಚರಿ ಹೇಳಿಕೆ ಕೊಟ್ಟ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ!