ಧೋನಿ ಬಹಿರಂಗ ಪಡಿಸಿದ್ರು ನಾಯಕತ್ವ ತ್ಯಜಿಸಿದ ಕಾರಣ!

Published : Sep 13, 2018, 07:54 PM ISTUpdated : Sep 19, 2018, 09:25 AM IST
ಧೋನಿ ಬಹಿರಂಗ ಪಡಿಸಿದ್ರು ನಾಯಕತ್ವ ತ್ಯಜಿಸಿದ ಕಾರಣ!

ಸಾರಾಂಶ

ಟೀಂ ಇಂಡಿಯಾ ಯಶಸ್ವಿ ನಾಯಕ ಎಂ ಎಸ್ ಧೋನಿ 2017ರಲ್ಲಿ ಏಕದಿನ ಹಾಗೂ ಟಿ20 ನಾಯಕತ್ವಕ್ಕೆ ಗುಡ್ ಬೈ ಹೇಳಿದರು. ಸರಿಸುಮಾರು 2 ವರ್ಷಗಳ ಬಳಿಕ ಧೋನಿ ನಾಯಕತ್ವ ತ್ಯಜಿಸಿದ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.

ರಾಂಚಿ(ಸೆ.13): ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ನಾಯಕ ಎಂ ಎಸ್ ಧೋನಿ. 2007ರ ಟಿ20 ವಿಶ್ವಕಪ್, 2011ರ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ಧೋನಿ ಹಲವು ದಾಖಲೆ ಬರೆದಿದ್ದಾರೆ.

2017ರಲ್ಲಿ ಎಂ ಎಸ್ ಧೋನಿ ಏಕದಿನ ಹಾಗೂ ಟಿ20 ನಾಯಕತ್ವಕ್ಕೆ ದಿಢೀರ್ ರಾಜಿನಾಮೆ ನೀಡಿ ಅಚ್ಚರಿ ನೀಡಿದ್ದರು. ಧೋನಿ ರಾಜಿನಾಮೆ ಬಳಿಕ ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡರು. ಸರಿ ಸುಮಾರು 2 ವರ್ಷಗಳ ಬಳಿಕ ಧೋನಿ ದಿಢೀರ್ ರಾಜಿನಾಮೆ ನೀಡಿದ ಕಾರಣ ಬಹಿರಂಗ ಪಡಿಸಿದ್ದಾರೆ.

ತಂಡದ ನಾಯಕತ್ವ ವಹಿಸಿಕೊಳ್ಳೋ ನಾಯಕನಿಗೆ ಹೆಚ್ಚಿನ ಕಾಲಾವಕಾಶ ಬೇಕಿದೆ. ಅದರಲ್ಲೂ 2019ರ ವಿಶ್ವಕಪ್ ಟೂರ್ನಿಗೆ ಸಜ್ಜಾಗಲು ನೂತನ ನಾಯಕ ಹಾಗೂ ತಂಡಕ್ಕೆ ಸಮಯ ಅತ್ಯವಶ್ಯಕ. ಹೀಗಾಗಿ ನಾನು 2017ರಲ್ಲಿ ನಾಯಕತ್ವಕ್ಕೆ ವಿದಾಯ ಹೇಳಿದೆ ಎಂದು ಧೋನಿ ಹೇಳಿದ್ದಾರೆ.

ಅದೆಷ್ಟೇ ಬಲಿಷ್ಠ ತಂಡವನ್ನ ಆಯ್ಕೆ ಮಾಡಿದರೂ, ದಿಢೀರ್ ಆಯ್ಕೆಯಾದ ಹೊಸ ನಾಯಕ ತಂಡವನ್ನ ಮುನ್ನಡೆಸುವುದು ಕಷ್ಟ. ಹೀಗಾಗಿ ನಾನು ಸರಿಯಾದ ಸಮಯದಲ್ಲಿ ನಾಯಕತ್ವಕ್ಕೆ ಗುಡ್ ಬೈ ಹೇಳಿದೆ ಎಂದು ಧೋನಿ ಕಾರಣ ಹೇಳಿದ್ದಾರೆ.

ಧೋನಿ 199 ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದಾರೆ. ಇದರಲ್ಲಿ 110 ಗೆಲುವು ಹಾಗೂ 74 ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಇನ್ನು 72 ಟಿ20 ಪಂದ್ಯದಲ್ಲಿ ನಾಯಕತ್ವ ನಿಭಾಯಿಸಿದ ಧೋನಿ 48 ಗೆಲುವು, 28 ಸೋಲು ಅನುಭವಿಸಿದ್ದಾರೆ. ಇಷ್ಟೇ ಅಲ್ಲ ಟೆಸ್ಟ್‌ನಲ್ಲಿ 27 ಗೆಲುವು 18 ಸೋಲು ಹಾಗೂ 15 ಡ್ರಾ ಸಾಧಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಹ್ಲಿಗೆ ಗಿಫ್ಟ್ ನೀಡಲು 15 ಲಕ್ಷ ರೂ ಮೌಲ್ಯದ ಚಿನ್ನದ ಐಫೋನ್ ಕವರ್ ತಂದ ಅಭಿಮಾನಿ
ಬೆಂಗಳೂರಿಗೆ ವಿದಾಯ ಹೇಳಿದ ಆರ್‌ಸಿಬಿ, ತವರಿನ ಪಂದ್ಯಗಳಿಗೆ ಛತ್ತೀಸ್‌ಗಢದ ರಾಯ್ಪುರ ಆತಿಥ್ಯ ಖಚಿತಪಡಿಸಿದ ಫ್ರಾಂಚೈಸಿ!