ಕಳಪೆ ಪ್ರದರ್ಶನ ಸಮರ್ಥಿಸಿದ ಕೋಚ್ ರವಿ ಶಾಸ್ತ್ರಿ ವಿರುದ್ಧ ಆಕ್ರೋಶ!

By Web DeskFirst Published Sep 13, 2018, 8:55 PM IST
Highlights

ಇಂಗ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ 1-4 ಅಂತರದ ಸೋಲು ಅನುಭವಿಸಿತ್ತು. ಆದರೆ ಟೀಂ ಇಂಡಿಯಾದ ಕಳಪೆ ಪ್ರದರ್ಶನವನ್ನ ಸಮರ್ಥಿಸಿಕೊಂಡ ಕೋಚ್ ರವಿ ಶಾಸ್ತ್ರಿ ವಿರುದ್ಧ ಮಾಜಿ ಕ್ರಿಕೆಟಿಗರು ಹೇಳಿದ್ದೇನು? ಇಲ್ಲಿದೆ.

ದುಬೈ(ಸೆ.13): ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಸೋತ ಟೀಂ ಇಂಡಿಯಾ ಇದೀಗ ಏಷ್ಯಾಕಪ್ ಸರಣಿಗೆ ತಯಾರಿ ಆರಂಭಿಸಿದೆ. ಆದರೆ ಆಂಗ್ಲರ ವಿರುದ್ಧದ ಸರಣಿ ಸೋಲು ಮಾತ್ರ ಭಾರತೀಯ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

1-4 ಅಂತರದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಸೋಲಿಗೆ ಕಳಪೆ ಬ್ಯಾಟಿಂಗ್ ಪ್ರದರ್ಶನವೇ ಪ್ರಮುಖ ಕಾರಣ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್ ಆಯ್ಕೆ ಸೇರಿದಂತೆ ಹಲವು ಕಾರಣಗಳು ತಂಡಕ್ಕೆ ಹಿನ್ನಡೆಯಾಗಿದೆ. ಆದರೆ ಕೋಚ್ ರವಿ ಶಾಸ್ತ್ರಿ ತಂಡದ ಪ್ರದರ್ಶನವನ್ನ ಸಮರ್ಥಿಸಿಕೊಂಡಿದ್ದಾರೆ.

ಕಳಪೆ ಪ್ರದರ್ಶನವನ್ನ ಸಮರ್ಥಿಸಿಕೊಂಡ ರವಿ ಶಾಸ್ತ್ರಿ ವಿರುದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸ್ತ್ರಿ ಅಪ್ರಬುದ್ಧ ಕೋಚ್ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

1980 ಹಾಗೂ 2007ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆದ್ದಿತ್ತು. ಆದರೆ ಬಲಿಷ್ಠ ಟೀಂ ಇಂಡಿಯಾ 2018ರಲ್ಲಿ ಕಳಪೆ ಪ್ರದರ್ಶನ ನೀಡಿದೆ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ತಂಡ ಪ್ರದರ್ಶನ ಅತ್ಯುತ್ತಮ ತಂಡ ಅನ್ನೋದನ್ನ ಸಾರಿ ಹೇಳಬೇಕೆ ಹೊರತು, ಡ್ರೆಸ್ಸಿಂಗ್ ರೂಂ ಹಾಗೂ ಮಾಧ್ಯಮಗಳಲ್ಲಿನ ಹೇಳಿಕೆಗಳು ಅಲ್ಲ ಎಂದು ಕೋಚ್ ರವಿ ಶಾಸ್ತ್ರಿ ವಿರುದ್ಧ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಕ್ರಿಕೆಟಿಗರ ಜೊತೆ ಹಲವು ಕ್ರಿಕೆಟಿಗರು ಶಾಸ್ತ್ರಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 15 ರಿಂದ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಈಗಲೇ ಒತ್ತಡದಲ್ಲಿರುವ ಕೋಚ್ ಶಾಸ್ತ್ರಿ ಭವಿಷ್ಯ  ಏಷ್ಯಾಕಪ್ ಟೂರ್ನಿ ನಿರ್ಧರಿಸಲಿದೆ.
 

click me!