ಆ್ಯಷಸ್‌ ಕದನ 2019: ಇಂಗ್ಲೆಂಡ್‌ಗೆ ರೂಟ್‌, ಬರ್ನ್ಸ್ ಆಸರೆ

Published : Sep 07, 2019, 01:21 PM IST
ಆ್ಯಷಸ್‌ ಕದನ 2019: ಇಂಗ್ಲೆಂಡ್‌ಗೆ ರೂಟ್‌, ಬರ್ನ್ಸ್ ಆಸರೆ

ಸಾರಾಂಶ

ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾಗೆ ತಿರುಗೇಟು ನೀಡಲು ಇಂಗ್ಲೆಂಡ್ ಅಲ್ಪ ಯಶಸ್ಸು ಕಂಡಿದೆ. ಬರ್ನ್ಸ್, ರೂಟ್ ಆಕರ್ಷಕ ಶತಕದ ಜತೆಯಾಟದ ಹೊರತಾಗಿಯೂ ಜೋಸ್ ಹ್ಯಾಜಲ್‌ವುಡ್ ಮಿಂಚಿನ ದಾಳಿಯ ನೆರವಿನಿಂದ ಆಸೀಸ್ ಕಮ್‌ಬ್ಯಾಕ್ ಮಾಡುವ ಪ್ರಯತ್ನದಲ್ಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಮ್ಯಾಂಚೆಸ್ಟರ್‌[ಸೆ.07]: ನಾಯಕ ಜೋ ರೂಟ್‌ ಹಾಗೂ ಆರಂಭಿಕ ರೋರಿ ಬರ್ನ್ಸ್ ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ಆತಿಥೇಯ ಇಂಗ್ಲೆಂಡ್‌, ಆಸ್ಪ್ರೇಲಿಯಾ ವಿರುದ್ಧ ಇಲ್ಲಿ ನಡೆಯುತ್ತಿರುವ ಆ್ಯಷಸ್‌ ಟೆಸ್ಟ್‌ ಸರಣಿಯ 4ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ತಿರುಗೇಟು ನೀಡುವ ಯತ್ನದಲ್ಲಿದೆ. 

ಆ್ಯಷಸ್ ಟೆಸ್ಟ್: ಸ್ಟೀವ್ ಸ್ಮಿತ್‌ ದಾಖಲೆಯ ದ್ವಿಶ​ತ​ಕ; ಆಸೀಸ್‌ ಬೃಹತ್‌ ಮೊತ್ತ!

3ನೇ ದಿನವಾದ ಶುಕ್ರವಾರ 1 ವಿಕೆಟ್‌ಗೆ 23 ರನ್‌ಗಳಿಂದ ಮೊದಲ ಇನ್ನಿಂಗ್ಸ್‌ ಮುಂದುವರೆಸಿದ ಇಂಗ್ಲೆಂಡ್‌ ಚಹಾ ವಿರಾಮದ ವೇಳೆಗೆ 2 ವಿಕೆಟ್‌ಗೆ 125 ರನ್‌ಗಳಿಸಿತು. ಮಳೆಯಿಂದಾಗಿ ಮೊದಲ ಅವ​ಧಿ​ಯಲ್ಲಿ ಆಟ ನಡೆ​ಯ​ಲಿಲ್ಲ. ಆ ಬಳಿಕ ಬ್ಯಾಟಿಂಗ್ ಮುಂದುವರೆಸಿದ ಇಂಗ್ಲೆಂಡ್ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 200 ರನ್ ಬಾರಿಸಿದೆ. ರೋರಿ ಬರ್ನ್ಸ್ 81 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಜೋ ರೂಟ್ 71 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಆಸೀಸ್ ವೇಗಿ ಜೋಸ್ ಹ್ಯಾಜಲ್’ವುಡ್ 4 ವಿಕೆಟ್ ಪಡೆದು ಮಿಂಚಿದರು.

ಕೆಟ್ಟ ಅಂಪೈರಿಂಗ್‌: ಕ್ರಿಸ್‌, ವಿಲ್ಸನ್‌ ಆ್ಯಷಸ್‌ನಿಂದ ಔಟ್‌!

ಆಸ್ಪ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 497 ರನ್‌ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಸ್ಟೀವ್ ಸ್ಮಿತ್ 211 ರನ್ ಬಾರಿಸುವ ಮೂಲಕ ಮತ್ತೊಮ್ಮೆ ತಂಡದ ಪಾಲಿಗೆ ಹೀರೋ ಎನಿಸಿದರು. 

ಸ್ಕೋರ್‌: ಆಸ್ಪ್ರೇಲಿಯಾ 497/8 ಡಿ. 
ಇಂಗ್ಲೆಂಡ್‌ 200/5
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಮೃತಿ ಮಂಧಾನ-ಪಲಾಶ್ ಪ್ರಪೋಸಲ್ ವಿಡಿಯೋ ಡಿಲೀಟ್, ಫೋಟೋಗಳು ಮಾಯ; ಎಲ್ಲವೂ ಈಗ ಮುಗಿದ ಅಧ್ಯಾಯ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ