ಆ್ಯಷಸ್‌ ಕದನ: ಡ್ರಾನತ್ತ ಅಂತಿಮ ಟೆಸ್ಟ್

Published : Sep 15, 2019, 12:23 PM IST
ಆ್ಯಷಸ್‌ ಕದನ: ಡ್ರಾನತ್ತ ಅಂತಿಮ ಟೆಸ್ಟ್

ಸಾರಾಂಶ

ಆ್ಯಷಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ 327 ರನ್‌ಗಳ ಮುನ್ನಡೆ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಲಂಡನ್‌(ಸೆ.15): ಆ್ಯಷಸ್‌ ಸರಣಿ ಬಹು​ತೇಕ 2-2ರಲ್ಲಿ ಡ್ರಾಗೊಳ್ಳು​ವತ್ತ ಸಾಗಿದೆ. 5ನೇ ಹಾಗೂ ಅಂತಿಮ ಪಂದ್ಯ​ದ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಬೃಹತ್‌ ಮುನ್ನಡೆಯತ್ತ ಹೆಜ್ಜೆ ಹಾಕಿದೆ. 

ಆ್ಯಷಸ್‌ ಕದನ: ಆಸೀಸ್‌ ಮೇಲೆ ಆರ್ಚರ್‌ ಸವಾ​ರಿ

ಪಂದ್ಯದ 3ನೇ ದಿನ​ವಾದ ಶನಿ​ವಾರ ವಿಕೆಟ್‌ ನಷ್ಟ​ವಿ​ಲ್ಲದೆ 9 ರನ್‌ಗಳಿಂದ ಆಟ ಮುಂದು​ವ​ರಿ​ಸಿದ ಇಂಗ್ಲೆಂಡ್‌, ಜೋ ಡೆನ್ಲಿ (94) ಹಾಗೂ ಬೆನ್‌ ಸ್ಟೋಕ್ಸ್‌ರ ಅರ್ಧ​ಶ​ತಕಗಳ ನೆರ​ವಿ​ನಿಂದ ಉತ್ತಮ ಸ್ಥಿತಿ ತಲು​ಪಿತು. ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು 313 ರನ್ ಬಾರಿಸಿದ್ದು, ಒಟ್ಟಾರೆ 382 ರನ್’ಗಳ ಮನ್ನಡೆ ಸಾಧಿಸಿದೆ.

ಆಸ್ಪ್ರೇ​ಲಿಯಾ ಸರ​ಣಿ​ಯಲ್ಲಿ 2-1 ಮುನ್ನಡೆ ಹೊಂದಿದ್ದು, ಪಂದ್ಯ ಗೆಲ್ಲ​ಬೇ​ಕಿ​ದ್ದರೆ ಬೃಹತ್‌ ಮೊತ್ತ ಬೆನ್ನ​ತ್ತ​ ಬೇ​ಕಿದೆ. ಈ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಆಸ್ಟ್ರೇಲಿಯಾ ಆ್ಯಷಸ್ ಸರಣಿ ಕೈವಶ ಮಾಡಿಕೊಳ್ಳಲಿದೆ. 

ಸ್ಕೋರ್‌: ಇಂಗ್ಲೆಂಡ್‌ 294 ಹಾಗೂ 258/5 (75 ಓವ​ರ​ಲ್ಲಿ),

ಆಸ್ಪ್ರೇ​ಲಿಯಾ 225

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?