ಆ್ಯಷಸ್ ಸರಣಿಯ ಎರಡನೇ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗಿದೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯ ಜಯಿಸಿರುವ ಆಸ್ಟ್ರೇಲಿಯಾ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಲಾರ್ಡ್ಸ್[ಆ.19]: ಆತಿಥೇಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗಿದೆ. ಇದರೊಂದಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
ಬೌನ್ಸರ್ ಎಸೆತಕ್ಕೆ ಗಾಯಗೊಂಡ ಸ್ಮಿತ್ ಪಂದ್ಯದಿಂದ ಔಟ್; ಜೋಫ್ರಾ ವಿರುದ್ಧ ಆಕ್ರೋಶ!
undefined
ಕೊನೆಯ ದಿನ ಗೆಲ್ಲಲು 267 ರನ್’ಗಳ ಗುರಿ ಪಡೆದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಕೇವಲ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾ ಪರ ಮಾರ್ನಸ್[59], ಟ್ರಾವಿಸ್ ಹೆಡ್[42] ರನ್ ಬಾರಿಸಿದರು. ಇನ್ನು ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್, ಜಾಕ್ ಲೀಚ್ ತಲಾ 3 ವಿಕೆಟ್ ಪಡೆದರು.
ಗಾಲೆ ಟೆಸ್ಟ್: ಕಿವೀಸ್ ಮಣಿಸಿ ಇತಿಹಾಸ ಬರೆದ ಶ್ರೀಲಂಕಾ
16 ಟೆಸ್ಟ್ ಪಂದ್ಯಗಳ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಡ್ರಾ ಮಾಡಿಕೊಂಡಿದೆ. 5 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಜಯಿಸಿತ್ತು. ಆ್ಯಷಸ್ ಸರಣಿಯ ಮೂರನೇ ಪಂದ್ಯ ಆಗಸ್ಟ್ 22ರಂದು ಆರಂಭವಾಗಲಿದ್ದು, ಲೀಡ್ಸ್’ನ ಹೆಡಿಂಗ್ಲಿ ಮೈದಾನ ಆತಿಥ್ಯ ವಹಿಸಲಿದೆ.