ಭಾರತದ ಸ್ಟಾರ್ ಅಥ್ಲೀಟ್‌ಗಳಾದ ಹಿಮ ದಾಸ್ ಹಾಗೂ ಮೊಹಮ್ಮದ್ ಅನಾಸ್ ಚೆಕ್ ಗಣರಾಜ್ಯದಲ್ಲಿ ನಡೆದ 300 ಮೀಟರ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಆ.19): ಭಾರತದ ತಾರಾ ಅಥ್ಲೀಟ್ ಹಿಮಾ ದಾಸ್ ಚಿನ್ನದ ಓಟವನ್ನು ಮುಂದುವರೆಸಿದ್ದು, ಕೇವಲ 45 ದಿನಗಳ ಅಂತರದಲ್ಲಿ 6ನೇ ಚಿನ್ನದ ಪದಕ ಬಾಚಿಕೊಂಡಿದ್ದಾರೆ.
ಭಾರತಕ್ಕೆ ಮತ್ತಷ್ಟು ಪದಕ ಗೆದ್ದುಕೊಡುತ್ತೇನೆ: ಮೋದಿಗೆ ಹಿಮಾ ದಾಸ್ ಭರವಸೆ
ಹೌದು, ಅಥ್ಲೀಟ್‌ಗಳಾದ ಹಿಮಾ ದಾಸ್ ಹಾಗೂ ಮೊಹಮ್ಮದ್ ಅನಾಸ್ ಚೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕಿ ಮಿಟಿಂಕ್ ರೈಟರ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
3 ವಾರದಲ್ಲಿ 5ನೇ ಚಿನ್ನ ಗೆದ್ದ ಹಿಮಾ ದಾಸ್
ವನಿತೆಯರ 300 ಮೀ. ಓಟದಲ್ಲಿ ಹಿಮಾ ಹಾಗೂ ಪುರುಷರ 300 ಮೀ. ಓಟದಲ್ಲಿ ಅನಾಸ್ ಸ್ವರ್ಣಕ್ಕೆ ಮುತ್ತಿಟ್ಟರು. ಜು.2ರಿಂದ ಹಿಮಾ ಗೆಲ್ಲುತ್ತಿರುವ 6ನೇ ಚಿನ್ನದ ಪದಕ ಇದಾಗಿದೆ. ಮುಂದಿನ ತಿಂಗಳು ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅನಾಸ್ ಈಗಾಗಲೇ ಅರ್ಹತೆ ಪಡೆದಿದ್ದು, ಹಿಮಾ ಇನ್ನಷ್ಟೇ ಅರ್ಹತೆ ಪಡೆಯಬೇಕಿದೆ.