ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಇದೀಗ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಭಾರತವೇ ಸಂಭ್ರಮಿಸುತ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಈ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ರೈನಾ ಆರ್ಟಿಕಲ್ 370 ರದ್ದು ನಿರ್ಧಾರವನ್ನು ಅತೀವವಾಗಿ ಸಂಭ್ರಮಿಸಲು ಪ್ರಮುಖ ಕಾರಣವಿದೆ.
ಉತ್ತರ ಪ್ರದೇಶ(ಆ.05): ದೇಶದೆಲ್ಲೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಕಾರಣ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿದೆ. ಭಾರತದ ರಾಜಕೀಯ ಇತಿಹಾಸದಲ್ಲೇ ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಲಾಗುತ್ತಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ ಮಾನ ರದ್ದು ಮಾಡಿದ ಬೆನ್ನಲ್ಲೇ ರಾಜಕೀಯ ಮುಖಂಡರು, ತಜ್ಞರು, ಬಾಲಿವುಡ್ ಸೆಲೆಬ್ರೆಟಿಗಳು ಸಂಭ್ರಮ ಆಚರಿಸಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ, ಮೂಲತಃ ಕಾಶ್ಮೀರಿ ಪಂಡಿತ್ ಸುರೇಶ್ ರೈನಾ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: CSK ವಿಸಿಲ್ ಪೋಡು ಸಾಂಗ್ ಹಾಡಿದ ರೈನಾ!
undefined
ಆರ್ಟಿಕಲ್ 370 ರದ್ದು ಮಾಡಿರುವುದು ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರ. ಶಾಂತಿ ಹಾಗೂ ಸಹಬಾಳ್ವೆಯ ಕಾಶ್ಮೀರವನ್ನು ಎದುರುನೋಡುತ್ತಿದ್ದೇನೆ ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.
Landmark move - scrapping of ! Looking forward to smoother, and more inclusive times. 🇮🇳
— Suresh Raina🇮🇳 (@ImRaina)ಕಾಶ್ಮೀರದಲ್ಲಿನ ಪ್ರತಿಯೊಂದು ವಿಚಾರಗಳನ್ನು ಸುರೇಶ್ ರೈನಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಹಲವು ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಹಿಂದೆ ಶ್ರೀನಗರದ ಲಾಲ್ ಚೌಕ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು(ಆಗಸ್ಟ್ 15) ಕಾಶ್ಮೀರಿ ಪಂಡಿತ್ ಮಹಿಳೆ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಭಾರಿ ಸಂಚಲನ ಸೃಷ್ಟಿಸಿದ್ದರು. ಈ ಮಹಿಳೆಗೆ ರೈನಾ ಸಲ್ಯೂಟ್ ಹೊಡೆದಿದ್ದರು.
ಇದನ್ನೂ ಓದಿ: ಬಿಸಿಸಿಐ ವಿರುದ್ಧ ಬೇಸರ ವ್ಯಕ್ತಪಡಿಸಿದ ರೈನಾ..!
ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವನ್ನು ಸುರೇಶ್ ರೈನಾಗೆ ಈ ರೀತಿ ಸಂಭ್ರಮಿಸಲು ಕಾರಣವೂ ಇದೆ. ಸುರೇಶ್ ರೈನಾ ಮೂಲತಃ ಕಾಶ್ಮೀರಿ ಪಂಡಿತ್. ರೈನಾ ತಂದೆ ಕಾಶ್ಮೀರಿದವರಾಗಿದ್ದರೆ, ತಾಯಿ ಹಿಮಾಚಲ ಪ್ರದೇಶ. ಶ್ರೀನಗರ ರೈನಾವಾರಿ ಪ್ರದೇಶದಲ್ಲಿ ಸುರೇಶ್ ರೈನಾ ಪೋಷಕರು ನೆಲೆಸಿದ್ದರು. ಆದರೆ ಕಾಶ್ಮೀರದಲ್ಲಿ ಪಂಡಿತ್ ಮೇಲೆ ಹಿಂಸಾಚಾರ ನಡೆದಾಗ ರೈನಾ ಪೋಷಕರು ಕಾಶ್ಮೀರ ಬಿಟ್ಟು ಉತ್ತರ ಪ್ರದೇಶದದ ಮುರಾದ್ನಗರ್‌ಗೆ ವಲಸೆ ಬಂದರು. ಇದೇ ಕಾರಣಕ್ಕೆ ಸುರೇಶ್ ರೈನಾ ಆರ್ಟಿಕಲ್ 370 ರದ್ದು ನಿರ್ಧಾರವನ್ನು ಅತೀವ ಸಂತಸದಿಂದ ಸ್ವಾಗತಿಸಿದ್ದಾರೆ.