ಕೆನಡ ಟಿ20 ಲೀಗ್‌ನಲ್ಲಿ ಯುವರಾಜ್ ಘರ್ಜನೆ; ಸಿಕ್ಸರ್ ಸುರಿಮಳೆ!

Published : Aug 05, 2019, 04:19 PM IST
ಕೆನಡ ಟಿ20 ಲೀಗ್‌ನಲ್ಲಿ ಯುವರಾಜ್ ಘರ್ಜನೆ; ಸಿಕ್ಸರ್ ಸುರಿಮಳೆ!

ಸಾರಾಂಶ

ಕೆನಡ ಟಿ20 ಲೀಗ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಘರ್ಜಿಸಿದ್ದಾರೆ. 5 ಸಿಕ್ಸರ್ ಮೂಲಕ ಯುವಿ 22 ಎಸೆತದಲ್ಲಿ 51 ರನ್ ಚಚ್ಚಿದ್ದಾರೆ. ಯುವಿ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.  

ಬ್ರಾಂಪ್ಟನ್(ಆ.05): ಟೀಂ ಇಂಡಿಯಾಗೆ ವಿದಾಯ ಹೇಳಿ ಇದೀಗ ಗ್ಲೋಬಲ್ ಕೆನಾಡ ಟಿ20 ಲೀಗ್ ಟೂರ್ನಿ ಆಡುತ್ತಿರುವ ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ. ಟೊರೊಂಟೊ ರಾಯಲ್ಸ್ ತಂಡದ ನಾಯಕ ಯುವಿ ಕೇವಲ 22 ಎಸೆತದಲ್ಲಿ 51 ರನ್ ಸಿಡಿಸಿ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ಕೆನಡಾ ಟಿ20: ಯುವಿ ತಂಡವನ್ನು ಗೆಲ್ಲಿಸಿದ ಮತ್ತೋರ್ವ ಭಾರತೀಯ..!

ಯುವಿ ಬ್ಯಾಟಿಂಗ್ ಇಳಿದರೆ ಸಿಕ್ಸರ್ ಸುರಿಮಳೆ ಖಚಿತ. ಆದರ ಫಿಟ್ನೆಸ್ ಹಾಗೂ ಫಾರ್ಮ್ ಸಮಸ್ಯೆಯಿಂದ ಯುವರಾಜ್ ಸಿಂಗ್ ಟೀಂ ಇಂಡಿಯಾದಿಂದ ದೂರ ಉಳಿದಿದ್ದರು. ಹೀಗಾಗಿ ವಿದಾಯ ಘೋಷಿಸಿ ಕೆನಾಡ ಟಿ20 ಲೀಗ್ ಟೂರ್ನಿ ಸೇರಿಕೊಂಡರು. ಇದೀಗ ಕೆನಾಡ ಲೀಗ್ ಟೂರ್ನಿಯಲ್ಲಿ ಭರ್ಜರಿ 5 ಸಿಕ್ಸರ್ ಸಿಡಿಸಿದ್ದಾರೆ.

 

ಇದನ್ನೂ ಓದಿ: ಪೀಟರ್‌ಸನ್- ಯುವರಾಜ್ ಮತ್ತೆ ಟ್ವಿಟರ್ ಸಮರ!

ಮೊದಲು ಬ್ಯಾಟಿಂಗ್ ಮಾಡಿದ ಬ್ರಾಂಪ್ಟನ್ ವೋಲ್ಸ್ 20 ಓವರ್‌ಗಳಲ್ಲಿ ಬರೋಬ್ಬರಿ 222 ರನ್ ಸಿಡಿಸಿತ್ತು. ಇದಕ್ಕುತ್ತರಾವಿಗೆ ಟೊರೊಂಟೊ ರಾಯಲ್ಸ್ ತಂಡ ದಿಟ್ಟ ಹೋರಾಟ ನೀಡಿತು. ಯುವರಾಜ್ ಸಿಂಗ್ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಟೊರೊಂಟೊ 11 ರನ್ ಸೋಲು ಕಂಡಿತು. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!