
ಮುಂಬೈ(ಜು.24): ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾದಲ್ಲಿ ಸಕ್ರಿಯರಾಗಿದ್ದಾರೆ. ಆನಂದ್ ಮಹೀಂದ್ರ ಪ್ರತಿ ಪೋಸ್ಟ್ ಕೂಡ ವೈರಲ್ ಆಗುತ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ವಿಡಿಯೋ ಶೇರ್ ಮಾಡಿದ್ದಾರೆ. ವಿಶೇಷ ಅಂದರೆ 3 ವರ್ಷ ಹಳೆ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರ, ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದ್ದಾರೆ.
ಇದನ್ನೂ ಓದಿ: ಭಾರತೀಯರ ಪಾರ್ಕಿಂಗ್ ಐಡಿಯಾಗೆ ಮನಸೋತ ಆನಂದ್ ಮಹೀಂದ್ರ !
ಮೂರು ವರ್ಷಗಳ ಹಿಂದೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕೊಲೊನೆಲ್ ಗೌರವ್ ಹುದ್ದೆ ಹೊಂದಿರುವ ಧೋನಿ, ಸೇನಾ ಕ್ಯಾಂಪ್‌ಗೆ ಬೇಟಿ ನೀಡಿದ್ದರು. ಸೇನಾ ಸಮವಸ್ತ್ರದಲ್ಲಿ ಧೋನಿ ಶಿಸ್ತಿನ ಸಿಪಿಯಾಯಿಂತೆ ಕಾಣಿಸಿಕೊಂಡಿದ್ದರು. ಈ ವೀಡಿಯೋವನ್ನು ಆನಂದ್ ಮಹೀಂದ್ರ ಶೇರ್ ಮಾಡಿದ್ದಾರೆ. ಬಳಿಕ ಸೇನಾ ಸಮವಸ್ತ್ರದಲ್ಲಿ ಧೋನಿ ಉತ್ತಮವಾಗಿ ಕಾಣುತ್ತಿದ್ದಿರಿ. ಇಷ್ಟೇ ಅಲ್ಲ ಸೇನಾ ಕ್ಯಾಂಪ್‌ಗೆ ತೆರಳಲು ನೀಡಿರುವ ಕಾರಿನಲ್ಲಿ ಧೋನಿ ಮತ್ತಷ್ಟು ಉತ್ತಮವಾಗಿ ಕಾಣುತ್ತಿದ್ದಾರೆ ಎಂದು ಆನಂದ್ರ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬ್ಲೂ ಬಾಯ್ಸ್ ಹಾರೈಸಿದ ಅಜ್ಜಿಗೆ ಆನಂದ್ ಮಹೀಂದ್ರ ಕೊಟ್ರು ಅಚ್ಚರಿಯ ಉಡುಗೊರೆ!
ಧೋನಿಗೆ ಸೇನಾ ಕ್ಯಾಂಪ್‌ಗೆ ತೆರಳಲು ಭಾರತೀಯ ಸೇನೆ ಮಹೀಂದ್ರ XUV500 ಕಾರು ನೀಡಿತ್ತು. ಇದು ಆನಂದ್ ಮಹೀಂದ್ರ ಮಾಲೀಕತ್ವದ ಮಹೀಂದ್ರ ಕಂಪನಿಯ ಕಾರು. ಆನಂದ್ ಮಹೀಂದ್ರ ಧೋನಿ ಹಾಗೂ XUV500 ಕಾರನ್ನು ಹೊಗಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.