ಭಾರತದ ಸ್ಟಾರ್ ಬಿಲಿಯರ್ಡ್ಸ್ ಪಟು ಪಂಕಜ್ ಅಡ್ವಾಣಿ ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ 150 ಅಪ್ ಮಾದರಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಪಂಕಜ್ 22ನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಸಾಧನೆ ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಮ್ಯಾಂಡಲೆ(ಸೆ.16): ಭಾರತದ ತಾರಾ ಬಿಲಿಯರ್ಡ್ಸ್ ಪಟು ಪಂಕಜ್ ಅಡ್ವಾಣಿ, ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ 150 ಅಪ್ ಮಾದರಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಈ ಮಾದರಿಯಲ್ಲಿ ಸತತ 4ನೇ ಬಾರಿ ಪಂಕಜ್ ಫೈನಲ್‌ನಲ್ಲಿ ಜಯಗಳಿಸಿ ಪ್ರಶಸ್ತಿ ಗೆದ್ದಿದ್ದಾರೆ. ಇದರೊಂದಿಗೆ ಪಂಕಜ್ 22ನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟಅಲಂಕರಿಸಿದ ಸಾಧನೆ ಮಾಡಿದ್ದಾರೆ. ಕಳೆದ 6 ವರ್ಷಗಳಲ್ಲಿ ಪಂಕಜ್‌ಗೆ ಇದು 5ನೇ ವಿಶ್ವ ಚಾಂಪಿಯನ್ಶಿಪ್ ಆಗಿದೆ.
ಆ್ಯಷಸ್ ಕದನ: ಇಂಗ್ಲೆಂಡ್’ಗೆ 135 ರನ್ ಗೆಲುವು
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಂಕಜ್, ಸ್ಥಳೀಯ ಆಟಗಾರ ನೇಥಾವೆ ವಿರುದ್ಧ 6-2 ಫ್ರೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕಳೆದ ಆವೃತ್ತಿಯಲ್ಲಿ ಕೂಡ ಪಂಕಜ್, ನೇಥಾವೆ ಎದುರಿನ ಫೈನಲ್‌ನಲ್ಲಿ ಪ್ರಾಬಲ್ಯ ಮೆರೆದು ಟ್ರೋಫಿ ಜಯಿಸಿದ್ದರು. ಮೊದಲಾರ್ಧದಲ್ಲಿ ಪಂಕಜ್ 3-0 ಮುನ್ನಡೆ ಸಾಧಿಸಿದ್ದರು. ನಂತರವೂ ಆಕರ್ಷಕ ಆಟ ಮುಂದುವರಿಸಿ, ಪಂಕಜ್ ಸುಲಭ ಗೆಲುವು ಸಾಧಿಸಿದರು.
ಹರ್ಯಾಣ ಕ್ರೀಡಾ ವಿವಿಗೆ ಕಪಿಲ್ ದೇವ್ ಕುಲಪತಿ!
ಜಾಗತಿಕ ಮಟ್ಟದಲ್ಲಿ 2003ರಿಂದ ಪ್ರಶಸ್ತಿಗಳನ್ನು ಗೆಲ್ಲುತ್ತಿರುವ ಪಂಕಜ್, ಕ್ಯೂ ಸ್ಪೋರ್ಟ್ಸ್ (ಬಿಲಿಯರ್ಡ್ಸ್ ಹಾಗೂ ಸ್ನೂಕರ್)ನಲ್ಲಿ ಅತಿಹೆಚ್ಚು ವಿಶ್ವ ಚಾಂಪಿಯನ್ಶಿಪ್ ಟ್ರೋಫಿಗಳನ್ನು ಗೆದ್ದಿದ್ದಾರೆ.