ಆ್ಯಡಿಡಾಸ್ ಶೂ ಮೇಲೆ ಹಿಮಾದಾಸ್ ಹೆಸರು..!

Published : Sep 21, 2018, 03:20 PM ISTUpdated : Sep 21, 2018, 03:52 PM IST
ಆ್ಯಡಿಡಾಸ್ ಶೂ ಮೇಲೆ ಹಿಮಾದಾಸ್ ಹೆಸರು..!

ಸಾರಾಂಶ

ಅಂಡರ್-20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ 2 ಪದಕ ಗೆದ್ದ ಹಿಮಾಗಾಗಿ ಪ್ರತಿಷ್ಠಿತ ಕ್ರೀಡಾ ಉತ್ಪನ್ನಗಳ ಕಂಪನಿ ಆ್ಯಡಿಡಾಸ್ ವಿಶೇಷ ಶೂ ಸಿದ್ಧಪಡಿಸಿದೆ.

ನವದೆಹಲಿ[ಸೆ.21]: ಅಸ್ಸಾಂನ ರೈತನ ಮಗಳು ಹಿಮಾ ದಾಸ್ ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.

ಅಂಡರ್-20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ 2 ಪದಕ ಗೆದ್ದ ಹಿಮಾಗಾಗಿ ಪ್ರತಿಷ್ಠಿತ ಕ್ರೀಡಾ ಉತ್ಪನ್ನಗಳ ಕಂಪನಿ ಆ್ಯಡಿಡಾಸ್ ವಿಶೇಷ ಶೂ ಸಿದ್ಧಪಡಿಸಿದೆ. ಹಿಮಾಗೆ ನೀಡಿರುವ ಶೂ ಮೇಲೆ ಅವರ ಹೆಸರು ದಾಖಲಿಸಲಾಗಿದ್ದು, ಮತ್ತೊಂದು ಕಡೆಯಲ್ಲಿ ‘ಇತಿಹಾಸ ರಚಿಸಲು ಇಲ್ಲಿದ್ದೇನೆ’ ಎಂಬ ಶೀರ್ಷಿಕೆ ಹಾಕಲಾಗಿದೆ.

ಇದನ್ನು ಓದಿ: ಹಿಮಾ ದಾಸ್ ಬೆಳ್ಳಿ ಗೆದ್ದ ಕ್ಷಣ ನೀವೊಮ್ಮೆ ಕಣ್ತುಂಬಿಕೊಳ್ಳಿ

ಇದನ್ನು ಓದಿ: ಚಿನ್ನ ಗೆದ್ದ ಹಿಮಾ ದಾಸ್’ಗೆ ರೆಡ್ ಕಾರ್ಪೆಟ್ ಸ್ವಾಗತ

ಅಸ್ಸಾಂನ ಕುಗ್ರಾಮವೊಂದರ ಗದ್ದೆಗಳಲ್ಲಿ ಓಡುತ್ತಿದ್ದ ಹಿಮಾ, ಈಗ ಭಾರತಕ್ಕೆ ಒಲಿಂಪಿಕ್ಸ್ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಿಮಾರ ಹೊಸ ಆ್ಯಡಿಡಾಸ್ ಶೂ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಫೋಟೋಗಳು ವೈರಲ್ ಆಗಿವೆ.

ಇದನ್ನು ಓದಿ: ಪದಕ ವಿಜೇತ ಸ್ವಪ್ನ ಬರ್ಮನ್‌ಗೆ 6 ಬೆರಳಿನ ಶೂ ನೀಡಲಿದೆ ಅಡಿಡಾಸ್!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Lionel Messi India visit: ರಾಹುಲ್ ಗಾಂಧಿಗೆ ಟಿ-ಶರ್ಟ್ ಉಡುಗೊರೆ ನೀಡಿದ ಮೆಸ್ಸಿ!
ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?