ವಿಶ್ವಕಪ್ 2019: ಭಾರತ ಲೀಗ್‌ನಿಂದಲೇ ಹೊರಬೀಳಲಿದೆ-ನಟ KRK ಟೀಕೆ!

By Web Desk  |  First Published May 26, 2019, 11:47 AM IST

ವಿಶ್ವಕಪ್ ಟೂರ್ನಿಯ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಸೋಲಿನ ಬಳಿಕ ಬಾಲಿವುಡ್ ನಟ ಟೀಂ ಇಂಡಿಯಾ ಪ್ರದರ್ಶನವನ್ನು ಟೀಕಿಸಿ ಸುದ್ದಿಯಾಗಿದ್ದಾರೆ.


ಮುಂಬೈ(ಮೇ.26): ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿರುವ ಟೀಂ  ಇಂಡಿಯಾ ಸದ್ಯ ಅಭ್ಯಾಸ ಪಂದ್ಯದಲ್ಲಿ ತೊಡಗಿಸಿಕೊಂಡಿದೆ. ಈ ಬಾರಿಯ ವಿಶ್ವಕಪ್ ಪ್ರಶಸ್ತಿ ರೇಸ್‌ನಲ್ಲಿ ಟೀಂ ಇಂಡಿಯಾ ಕೂಡ ಕಾಣಿಸಿಕೊಂಡಿದೆ. ಆದರೆ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ದ ಸೋಲು ಕಂಡಿತ್ತು. ಈ ಸೋಲಿನ ಬಳಿಕ ನಟ ನಟ ಕಮಲ್ ಖಾನ್ ರಶೀದ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಪಾಕ್ ವಿರುದ್ಧದ ಗೆಲುವಿಗೆ ಸಂಭ್ರಮಾಚರಣೆ - ಅಫ್ಘಾನಿಸ್ತಾನದಲ್ಲಿ 86 ಮಂದಿ ಅರೆಸ್ಟ್!

Tap to resize

Latest Videos

ನ್ಯೂಜಿಲೆಂಡ್ ವಿರುದ್ಧ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಟೀಂ ಇಂಡಿಯಾ ಕೇವಲ 179 ರನ್‌ಗೆ ಆಲೌಟ್ ಆಗಿದೆ. ನ್ಯೂಜಿಲೆಂಡ್ 77 ಎಸೆತ ಬಾಕಿ ಇರುವಂತೆ 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಇದು ಟ್ರೈಲರ್, ಪಿಕ್ಚರ್ ಇನ್ನೂ ಬಾಕಿ ಇದೆ ಎಂದು ಟೀಂ ಇಂಡಿಯಾ ಪ್ರದರ್ಶನವನ್ನು ವ್ಯಂಗ್ಯವಾಡಿದ್ದಾರೆ.  

 

New Zealand beat India by 6 wickets with 77 balls to spare in the warm-up game. Ye Toh Sirf trailer hai, Film Abhi Baaki hai. won’t reach to semi final of !

— KRK (@kamaalrkhan)

 

ಇದನ್ನೂ ಓದಿ: ಬಾಲ್ ಟ್ಯಾಂಪರಿಂಗ್ - ಇಂಗ್ಲೆಂಡ್ ಕಹಿ ಸತ್ಯ ಬಹಿರಂಗ!

ಇತ್ತೀಚೆಗೆ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿತ್ತು. 4ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್ ವಿರುದ್ದ ಕಮಲ್ ರಶೀದ್ ಖಾನ್ ವಿವಾದಿತ ಟ್ವೀಟ್ ಮಾಡಿದ್ದರು. ಅಂಬಾನಿ ಹಣದಿಂದ ಮುಂಬೈ  ಇಂಡಿಯನ್ಸ್ ಗೆದ್ದಿದೆ ಎಂದು ಟ್ವೀಟ್ ಮಾಡಿದ್ದರು. ಇದೀಗ ಟೀಂ ಇಂಡಿಯಾ ವಿರುದ್ಧ ಟ್ವೀಟ್ ಮಾಡಿದ್ದಾರೆ.

click me!