ಟಿ20 ಲೀಗ್; ಹೊಸ ತಂಡ ಸೇರಿಕೊಂಡ ಎಬಿ ಡಿವಿಲಿಯರ್ಸ್!

By Web DeskFirst Published Oct 1, 2019, 1:31 PM IST
Highlights

ಸೌತ್ ಆಫ್ರಿಕಾ ಮಾಜಿ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಇದೀಗ BBL ಟಿ20 ಲೀಗ್ ಟೂರ್ನಿಗೆ ಕಾಲಿಡುತ್ತಿದ್ದಾರೆ. ಎಬಿಡಿ ಸೇರಿಕೊಳ್ಳುತ್ತಿರುವ ಹೊಸ ತಂಡ ಯಾವುದು? ಇಲ್ಲಿದೆ ವಿವರ.

ಸಿಡ್ನಿ(ಅ.01): ಸೌತ್ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಲೀಗ್ ಟೂರ್ನಿಗಳಲ್ಲಿ ಸಕ್ರಿಯರಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೀ ಪ್ಲೇಯರ್ ಆಗಿರುವ ಡಿವಿಲಿಯರ್ಸ್ ಇದೀಗ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: ಎಬಿಡಿ ನಿವೃತ್ತಿ ವಾಪಾಸ್ ವಿಚಾರ: ಕೊನೆಗೂ ಮೌನ ಮುರಿದ ಮಿ.360

ಐಪಿಎಲ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಗಳಲ್ಲಿ ಮಿಂಚಿದ ಎಬಿಡಿ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಿಂದ ದೂರ ಉಳಿದಿದ್ದರು. ಇದೀಗ ಆಸ್ಟ್ರೇಲಿಯಾದ ಪ್ರತಿಷ್ಠಿತ ಟೂರ್ನಿಗೂ ಕಾಲಿಟ್ಟಿದ್ದಾರೆ. ಬ್ರಿಸ್ಬೇನ್ ಹೀಟ್ ತಂಡದ ಪರ ಒಪ್ಪಂದ ಮಾಡಿಕೊಂಡಿರುವ ಡಿವಿಲಿಯರ್ಸ್ ಆರಂಭಿಕ ಕೆಲ ಪಂದ್ಯಗಳಿದಗೆ ಲಭ್ಯವಿಲ್ಲ. 

ಇದನ್ನೂ ಓದಿ: ಕೊಹ್ಲಿ ಜೊತೆ ಮಾತನಾಡಲು ಭಯವಾಗುತ್ತೆ; ಎಬಿ ಡಿವಿಲಿಯರ್ಸ್!

ಬಿಬಿಎಲ್ ಟೂರ್ನಿಯ ಸೆಕೆಂಡ್ ಹಾಫ್‌ ಪಂದ್ಯಗಳಿಗೆ ಡಿವಿಲಿಯರ್ಸ್ ಬ್ರಿಸ್ಬೇನ್ ತಂಡ ಸೇರಿಕೊಳ್ಳಲಿದ್ದಾರೆ. ಬ್ರಿಸ್ಬೇನ್ ತಂಡ ಸೇರಿಕೊಳ್ಳುತ್ತಿರುವುದು ಸಂತಸ ತಂದಿದೆ. ಬ್ರಿಸ್ಬೇನ್ ವಾತಾವರಣ ಹಾಗೂ ನನ್ನ ತವರೂರಾದ ಪ್ರೆಟೋರಿಯಾದ ವಾತಾವರಣ ಕೂಡ ಒಂದೇ ರೀತಿಯಾಗಿದೆ. ಈ ಹಿಂದೆ ಬ್ರಿಸ್ಬೇನ್ ನಗರದಲ್ಲಿ ತಂಗಿದ್ದೇನೆ. ಅತ್ಯುತ್ತಮ ಹಾಗು ಸುಂದರ ನಗರ. ಇನ್ನು ಬ್ರಿಸ್ಬೇನ್ ಕ್ರಿಕೆಟ್ ತಂಡ ಕೂಡ ಆಕ್ರಮಣಕಾರಿ ಆಟವಾಡುತ್ತಿದೆ. ಇದೀಗ ನಾನು ಬ್ರಿಸ್ಬೇನ್ ತಂಡದ ಭಾಗವಾಗಿರುವುದು ಸಂತಸ ತಂದಿದೆ ಎಂದಿದ್ದಾರೆ.

 

Very pleased to have signed for Brisbane Heat in the Big Bash. Great team, great city pic.twitter.com/DDQOxlS0tZ

— AB de Villiers (@ABdeVilliers17)

ಇದನ್ನೂ ಓದಿ: ಮತ್ತೊಮ್ಮೆ ಕನ್ನಡ ಮಾತಾಡಿದ ಎಬಿಡಿ..! ಹಾಡಂತೂ ಸೂಪರ್

ಮೇ 23, 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಎಬಿಡಿ, ಸೌತ್ ಆಫ್ರಿಕಾ ಪರ  114 ಟೆಸ್ಟ್, 228 ಏಕದಿನ ಹಾಗೂ  78 ಟಿ20 ಪಂದ್ಯ ಆಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 154ರ ಸ್ರ್ಟೈಕ್ ರೇಟ್‌ನಲ್ಲಿ 442 ರನ್ ಸಿಡಿಸಿದ್ದಾರೆ.
 

click me!