
ನವದೆಹಲಿ(ಅ.01): ಅ.12ರಿಂದ 19ರ ವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ 9ನೇ ಸುಲ್ತಾನ್ ಜೋಹರ್ ಕಪ್ ಹಾಕಿ ಪಂದ್ಯಾವಳಿಗೆ 18 ಸದಸ್ಯರ ಭಾರತ ಕಿರಿಯರ ಹಾಕಿ ತಂಡವನ್ನು ಸೋಮವಾರ ಹಾಕಿ ಇಂಡಿಯಾ ಪ್ರಕಟಿಸಿದೆ. ಯುವ ಡಿಫೆಂಡರ್ ಮನ್‌ದೀಪ್ ಮೋರ್ ಭಾರತ ತಂಡದ ನೇತೃತ್ವ ವಹಿಸಲಿದ್ದಾರೆ.
ಸಂಜಯ್ ಅವರನ್ನು ಉಪನಾಯಕರಾಗಿ ನೇಮಿಸಲಾಗಿದೆ. ಟೂರ್ನಿ ರೌಂಡ್ ರಾಬಿನ್ ಲೀಗ್‌ನಲ್ಲಿ ನಡೆಯಲಿದ್ದು, ಮಲೇಷ್ಯಾ, ನ್ಯೂಜಿಲೆಂಡ್, ಜಪಾನ್, ಆಸ್ಪ್ರೇಲಿಯಾ, ಬ್ರಿಟನ್ ತಂಡಗಳನ್ನು ಭಾರತ ಎದುರಿಸಲಿದೆ.
ತಂಡ: ಪ್ರಶಾಂತ್, ಪವನ್, ಸಂಜಯ್, ದೀನಚಂದ್ರ, ಪ್ರತಾಪ್, ಸುಮನ್, ಮನ್‌ದೀಪ್, ಯಶ್‌ದೀಪ್, ಶಾರದನಂದ, ವಿಷ್ಣುಕಾಂತ್, ರಬಿಚಂದ್ರ, ಮಣೀಂದರ್, ದಿಲ್‌ಪ್ರೀತ್, ಸುದೀಪ್, ಗುರುಸಾಹಿಬ್‌ಜಿತ್, ಉತ್ತಮ್, ರಾಹುಲ್, ಲಾಕ್ರ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.