2ನೇ ಅನ​ಧಿ​ಕೃತ ಟೆಸ್ಟ್‌: ಭಾರತಕ್ಕೆ ದ. ಆ​ಫ್ರಿಕಾ ತಿರು​ಗೇ​ಟು

Published : Sep 20, 2019, 10:26 AM ISTUpdated : Sep 20, 2019, 10:51 AM IST
2ನೇ ಅನ​ಧಿ​ಕೃತ ಟೆಸ್ಟ್‌:  ಭಾರತಕ್ಕೆ ದ. ಆ​ಫ್ರಿಕಾ ತಿರು​ಗೇ​ಟು

ಸಾರಾಂಶ

ದಕ್ಷಿಣ ಆಫ್ರಿಕಾ ’ಎ’ ತಂಡವು ಎರಡನೇ ಅನ​ಧಿ​ಕೃತ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಲು ಯಶಸ್ವಿಯಾಗಿದೆ. ಪಂದ್ಯ ಬಹುತೇಕ ಡ್ರಾನಲ್ಲಿ ಮುಕ್ತಾಯವಾಗುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಮೈಸೂರು[ಸೆ.20]: ಭಾರತ ‘ಎ’ ವಿರುದ್ಧದ 2ನೇ ಅನ​ಧಿ​ಕೃತ ಟೆಸ್ಟ್‌ನಲ್ಲಿ ದ.ಆ​ಫ್ರಿಕಾ ‘ಎ’ ತಂಡ ಭರ್ಜರಿ ಹೋರಾಟ ಪ್ರದ​ರ್ಶಿಸಿ, ದೊಡ್ಡ ಮೊತ್ತದ ಹಿನ್ನಡೆಯಿಂದ ತಪ್ಪಿ​ಸಿ​ಕೊಂಡಿತು. 

2ನೇ ಅನ​ಧಿ​ಕೃತ ಟೆಸ್ಟ್‌: ಭಾರತ ‘ಎ’ ಬೃಹತ್‌ ಮೊತ್ತ

2ನೇ ದಿನ​ದಂತ್ಯಕ್ಕೆ 159 ರನ್‌ಗೆ 5 ವಿಕೆಟ್‌ ಕಳೆ​ದು​ಕೊಂಡಿದ್ದ ದ.ಆ​ಫ್ರಿಕಾ ‘ಎ’, 3ನೇ ದಿನ​ವಾದ ಗುರು​ವಾರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿತು. ನಾಯಕ ಏಡನ್‌ ಮಾರ್ಕ್​ರಮ್‌ 161 ಹಾಗೂ ವಿಯಾನ್‌ ಮಲ್ಡರ್‌ 131 ರನ್‌ ಗಳಿಸಿ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್‌ ಗಳಿ​ಸಲು ನೆರ​ವಾ​ದರು. 417 ರನ್‌ ಗಳಿ​ಸಿದ್ದ ಭಾರತ ‘ಎ’ ಮೊದಲ ಇನ್ನಿಂಗ್ಸ್‌ನಲ್ಲಿ 17 ರನ್‌ಗಳ ಅಲ್ಪ ಮುನ್ನಡೆ ಸಾಧಿ​ಸಿತು. 

2ನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿರುವ ಭಾರತ ‘ಎ’ ದಿನ​ದಂತ್ಯಕ್ಕೆ ವಿಕೆಟ್‌ ನಷ್ಟ​ವಿ​ಲ್ಲದೆ 14 ರನ್‌ ಗಳಿ​ಸಿದ್ದು, ಒಟ್ಟಾರೆ 31 ರನ್‌ ಮುನ್ನಡೆ ಪಡೆ​ದಿದೆ. ಪಂದ್ಯ ಬಹು​ತೇಕ ಡ್ರಾದತ್ತ ಸಾಗಿದೆ. .

ಸ್ಕೋರ್‌: ಭಾರತ ‘ಎ’ 417 ಹಾಗೂ 14/0

ದಕ್ಷಿಣ ಆಫ್ರಿಕಾ ‘ಎ’ 400/10


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 ಏಷ್ಯಾಕಪ್, 150 ರನ್‌ಗೆ ಪಾಕಿಸ್ತಾನ ಆಲೌಟ್ ಮಾಡಿದ ಟೀಂ ಇಂಡಿಯಾಗೆ 90 ರನ್ ಗೆಲುವು
ಬೊಂಡಿ ಬೀಚ್ ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಕ್ರಿಕೆಟಿಗ ವಾನ್, ಭಯಾನಕ ಘಟನೆ