ಚೆಸ್‌ನಲ್ಲಿ ಅಕ್ಕ-ತಮ್ಮ ಪಾರಮ್ಯ; ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮಿಂಚಿದ ಪುಟಾಣಿಗಳು

By Kannadaprabha NewsFirst Published Sep 22, 2022, 11:34 AM IST
Highlights
  • ಚೆಸ್‌ನಲ್ಲಿ ಅಕ್ಕ-ತಮ್ಮ ಪಾರಮ್ಯ
  • ಚೆಸ್‌ ಕಲಿಯಲು ನೆರವಾದ ಲಾಕ್‌ಡೌನ್‌
  • ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮಿಂಚಿದ ಪುಟಾಣಿಗಳು

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ (ಸೆ.22) ; ಲಾಕ್‌ಡೌನ್‌ ಅವಧಿಯನ್ನು ಸದ್ಬಳಕೆ ಮಾಡಿಕೊಂಡ ಅಕ್ಕ-ತಮ್ಮಂದಿರು ಚೆಸ್‌ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆಗೈದು ಚದುರಂಗದಾಟದ ಗ್ರ್ಯಾಂಡ್‌ ಮಾಸ್ಟರ್‌ಗಳಿಂದ ಶಹಬ್ಬಾಸಗಿರಿ ಪಡೆದಿದ್ದಾರೆ. ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನ, ಸದ್ಯ ಕುಂದಗೋಳ ತಾಲೂಕಿನ ಶ್ರೀ ಹರಭಟ್ಟಸಂಯುಕ್ತ ಪದವಿ ಮಹಾವಿದ್ಯಾಲಯದ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣ ಜಂಗಳಿ ಅವರ ಮಕ್ಕಳಾದ ಸುಭೀಕ್ಷಾ ಹಾಗೂ ದಿಂಗಾಲೇಶ ಇಂತಹದೊಂದು ಸಾಧನೆ ಮಾಡಿದ್ದಾರೆ.

Vijayapura: ಪುಟಾಣಿಗಳ ಸಾಧನೆಗೆ ಹುಬ್ಬೇರಿಸಿದ ಗುಮ್ಮಟನಗರಿ ಜನತೆ..!

9 ವರ್ಷದ ಸುಭೀಕ್ಷಾ ಲಕ್ಷ್ಮೇಶ್ವರದ ಲಿಟಲ್‌ ಹಾಟ್ಸ್‌ರ್‍ ಇಂಟರ್‌ನ್ಯಾಷನಲ್‌ ಸ್ಕೂಲ್‌, 7 ವರ್ಷದ ದಿಂಗಾಲೇಶ ಕುಂದಗೋಳ ತಾಲೂಕಿನ ಶ್ರೀ ಹರಭಟ್ಟಸಂಯುಕ್ತ ಪದವಿ ಮಹಾವಿದ್ಯಾಲಯದ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾನೆ. 2021ರ ಮೇ ನಲ್ಲಿ ಕೊರೋನಾ 2ನೇ ಅಲೆ ಹಿನ್ನೆಲೆ ಲಾಕ್‌ಡೌನ್‌ ಘೋಷಣೆಯಾದಾಗ ಈ ಇಬ್ಬರು ತಂದೆಗೆ ಯಾವುದಾದರು ಒಂದು ಆಟ ಕಲಿಸುವಂತೆ ಕೇಳಿದ್ದಾರೆ. ತಂದೆಗೆ ಅಲ್ಪಸ್ವಲ್ಪ ತಿಳಿದಿದ್ದ ಚೆಸ್‌ ಕಲಿಸಿದ್ದಾರೆ. ಇದನ್ನು ನಿತ್ಯದ ಭಾಗವನ್ನಾಗಿ ಮಾಡಿಕೊಂಡ ಅವರು ಇಂದು ತಂದೆಯಷ್ಟೆಅಲ್ಲದೆ ಗ್ರ್ಯಾಂಡ್‌ ಮಾಸ್ಟರ್‌ಗಳನ್ನು ಎದುರಿಸುವಷ್ಟರ ಮಟ್ಟಿಗೆ ಆಟದಲ್ಲಿ ಪರಿಣಿತರಾಗಿದ್ದಾರೆ.

2022ರ ಮೇ 21, 22ರಂದು ಮೈಸೂರಿನಲ್ಲಿ ನಡೆದ ಆಲ್‌ ಇಂಡಿಯಾ ಓಪನ್‌ ರಾರ‍ಯಪಿಡ್‌ ಫಿಡೆ ರೇಟಿಂಗ್‌ ಚೆಸ್‌ ಟೂರ್ನಾಮೆಂಟ್‌ನಲ್ಲಿ ಸುಭೀಕ್ಷಾ 4ನೇ ಸ್ಥಾನ ಪಡೆದು ಫಸ್ಟ್‌ ಯಂಗೆಸ್ಟ್‌ ಗಲ್‌ರ್‍ ಬೆಸ್ಟ್‌ ಪ್ಲೇಯರ್‌ ಗೌರವ, ದಿಂಗಾಲೇಶ 3ನೇ ಸ್ಥಾನ ಪಡೆದು ಫಸ್ಟ್‌ ಯಂಗೆಸ್ಟ್‌ ಬೆಸ್ಟ್‌ ಪ್ಲೇಯರ್‌, ಬಾಯ್‌ ಗೌರವಕ್ಕೆ ಭಾಜನಳಾಗಿದ್ದಾಳೆ.

ಬೆಂಗಳೂರಿನಲ್ಲಿ ಆ. 21,22ರಂದು ಡೆಕಥ್ಲಾನ್‌ ಸ್ಪೋರ್ಚ್‌್ಸ ಅಕಾಡೆಮಿಯಿಂದ ನಡೆದ ಅಂತಾರಾಷ್ಟ್ರೀಯ ಚೆಸ್‌ ಟೂರ್ನಾಮೆಂಟ್‌ನಲ್ಲಿ ಅಮೆರಿಕ, ಇಂಗ್ಲೆಂಡ್‌, ನೆದರ್‌ಲ್ಯಾಂಡ್‌, ಸ್ಕಾಟ್ಲೆಂಡ್‌ ಸೇರಿ ವಿವಿಧ ಭಾಗದಿಂದ ಭಾಗವಹಿಸಿದ್ದ 455 ಸ್ಪರ್ಧಾಳುಗಳಲ್ಲಿ ಮೊದಲ 25 ಸ್ಥಾನದಲ್ಲಿ ಇಬ್ಬರು ಏಳನೇ ಸ್ಥಾನ ಹಂಚಿಕೊಂಡಿದ್ದಾನೆ.

ಹುಬ್ಬಳ್ಳಿ-ಧಾರವಾಡ, ಬೆಂಗಳೂರು, ಮೈಸೂರು, ರಾಣಿಬೆನ್ನೂರು ವಿವಿಧೆಡೆ ನಡೆದಿದ್ದ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಮುಕ್ತ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಾಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿಯೂ ಜಿಲ್ಲಾ ಮಟ್ಟಕ್ಕೆ ಸಹೋದರ-ಸಹೋದರಿಯರಿಬ್ಬರು ಆಯ್ಕೆಯಾಗಿದ್ದಾರೆ.

ಹುಬ್ಬಳಿಯ ಚೆಸ್‌ ಅಕಾಡೆಮಿ ಹಾಗೂ ರಾಮಕೃಷ್ಣ ಆಶ್ರಮದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ, ದ್ವಿತೀಯ ಸ್ಥಾನ ಗಳಿಸಿ ಸುಭೀಕ್ಷಾ ಹಾಗೂ ದಿಂಗಾಲೇಶ ಮಿಂಚಿದ್ದಾರೆ. ಯಾವುದೇ ವಿಶೇಷ ತರಬೇತಿ ಪಡೆಯದೆ ಚದುರಂಗದ ಕ್ಲಾಸಿಕಲ್‌, ಬ್ಲಿಟ್‌್ಜ, ರಾರ‍ಯಪಿಡ್‌ ಮೂರು ವಿಭಾಗದಲ್ಲಿಯೂ ಇಬ್ಬರು ಪರಿಣಿತಿ ಪಡೆದಿದ್ದಾರೆ. ಕರ್ನಾಟಕದ ಗ್ರ್ಯಾಂಡ್‌ ಮಾಸ್ಟರ್‌ ತೇಜಕುಮಾರ ಹಾಗೂ ಆಂಧ್ರದ ಬಾಲಕೃಷ್ಣನ್‌ ಜೊತೆ ಆಟವಾಡಿ ಅವರಿಂದ ಶಹಬ್ಬಾಸ್‌ಗಿರಿ ಪಡೆದಿದ್ದಾರೆ. ಇವರ ಪ್ರತಿಭೆ ಮೆಚ್ಚಿ ಲಕ್ಷ್ಮೇಶ್ವರ ತಾಲೂಕಾಡಳಿತ, ಕುಂದಗೋಳ, ಲಕ್ಷ್ಮೇಶ್ವರ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಬಾಲೆಹೊಸೂರ ಗ್ರಾಪಂ ಅಭಿನಂದನಾ ಪ್ರಮಾಣಪತ್ರ ನೀಡಿದೆ.

ಮಾಯಮುಡಿಯಲ್ಲಿ ರಾಜ್ಯಮಟ್ಟದ ಶೂಟಿಂಗ್‌ ಸ್ಪರ್ಧೆ-2022

ಲಾಕ್‌ಡೌನ್‌ ವೇಳೆ ಟಿವಿ ನೋಡಿ ಬೇಜಾರಾಗಿತ್ತು. ಹೊರಗೆ ಓಡಾಡಲು ಆಗುತ್ತಿರಲಿಲ್ಲ. ಆಗ ತಂದೆಯಿಂದ ಚೆಸ್‌ ಕಲಿತೆವು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ್ನ ಹೆಚ್ಚಿನ ಸಾಧನೆ ಮಾಡುವ ಹಂಬಲವಿದೆ.

ಸುಭೀಕ್ಷಾ ಜಂಗಳಿ

ತಂದೆ-ತಾಯಿ, ಶಾಲೆಯಲ್ಲಿ ಎಲ್ಲರ ಪ್ರೋತ್ಸಾಹದಿಂದ ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಹೀಗೆ ಹಲವು ಸ್ಪರ್ಧೆಯಲ್ಲಿ ಭಾಗಹಿಸಿದ್ದೇವೆ. ಮುಂದೆ ಚೆಸ್‌ ಚಾಂಪಿಯನ್‌ ಆಗುವ ಆಸೆ ಇದೆ.

ದಿಂಗಾಲೇಶ ಜಂಗಳಿ

click me!