David Warner: ರಾಕಿ ಬಾಯ್​​ ಯಶ್​ ಅವತಾರದಲ್ಲಿ ಧೂಳೆಬ್ಬಿಸಿದ ವಾರ್ನರ್​​​

By Govindaraj S  |  First Published Apr 17, 2022, 2:57 PM IST

ಸ್ಯಾಂಡಲ್​ವುಡ್​​ನಿಂದ ಹಿಡಿದು ಪ್ರಪಂಚದಾದ್ಯಂತ ಬ್ಲಾಕ್​​ ಬಸ್ಟರ್​ KGF​​ ಚಾಪ್ಟರ್​​​​-2 ನದ್ದೇ ಹವಾ ಸ್ಪೋಟಕ ಬ್ಯಾಟರ್ ಡೇವಿಡ್​​ ವಾರ್ನರ್​ ಕೂಡ ಕ್ಲೀನ್​ ಬೋಲ್ಡ್ ಆಗಿದ್ದು, ಈ ಚಿತ್ರದ ಫೇಮಸ್ ಡೈಲಾಗ್ ಹೇಳಿ ಭಾರೀ ಸುದ್ದಿಯಲ್ಲಿದ್ದಾರೆ.


ಬೆಂಗಳೂರು (ಏ.17): KGF.. KGF.. KGF.. ಸ್ಯಾಂಡಲ್​ವುಡ್​​ನಿಂದ ಹಿಡಿದು ಪ್ರಪಂಚದಾದ್ಯಂತ ಬ್ಲಾಕ್​​ ಬಸ್ಟರ್​ KGF​​ ಚಾಪ್ಟರ್​​​​-2 ನದ್ದೇ ಹವಾ. ಚಿತ್ರ ಗಳಿಕೆಯಲ್ಲಿ ಹಿಂದಿನ ಎಲ್ಲಾ ರೆಕಾರ್ಡ್ಸ್ ಪುಡಿಗಟ್ಟಿದೆ. KGF​​​​​-1 ಮೀರಿಸಿದ ಮೂವಿಗೆ ಸಿನಿಪ್ರಿಯರು ಜೈಕಾರ ಕೂಗುತ್ತಿದ್ದಾರೆ. ಹೀಗೆ ಸಿನಿಲೋಕದಲ್ಲಿ ಧೂಳೆಬ್ಬಿಸಿರೋ ಈ ಚಿತ್ರಕ್ಕೆ ಸ್ಪೋಟಕ ಬ್ಯಾಟರ್ ಡೇವಿಡ್​​ ವಾರ್ನರ್​ (David Warner) ಕೂಡ ಕ್ಲೀನ್​ ಬೋಲ್ಡ್ ಆಗಿದ್ದು, ಈ ಚಿತ್ರದ ಫೇಮಸ್ ಡೈಲಾಗ್ ಹೇಳಿ ಭಾರೀ ಸುದ್ದಿಯಲ್ಲಿದ್ದಾರೆ.

ವಾರ್ನರ್​ ಬಾಯಲ್ಲಿ ಕೆಜಿಎಫ್ - 2 ಡೈಲಾಗ್​: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸ್ಟಾರ್​​ ಪ್ಲೇಯರ್​ ಡೇವಿಡ್ ವಾರ್ನರ್​ ​​​ಸೋಷಿಯಲ್​​ ಮೀಡಿಯಾದಲ್ಲಿ ಸದಾ ಆಕ್ಟೀವ್. ಇವರಿಗೆ ಸೌತ್ ಇಂಡಿಯನ್​​ ಮೂವಿಗಳಂದ್ರೆ ಎಲ್ಲಿಲ್ಲದ ಪ್ರೀತಿ. ಸೂಪರ್​ ಹಿಟ್ ಮೂವಿಗಳಿಗೆ ರೀಲ್ಸ್ (Reels)​​​  ಮಾಡಿ ರಿಯಲ್ಸ್ ಲೈಫ್​​ನಲ್ಲಿ ಕ್ರಿಕೆಟ್ ಪ್ರಿಯರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಸದ್ಯ ಕ್ರಿಕೆಟ್​ ಅಂಗಳದ ಈ ಹೀರೋ ಬಾಯಲ್ಲಿ KGF-2 ಚಿತ್ರದ ಫೇಮಸ್ ಡೈಲಾಗ್​​​​ ಕೇಳಿ ಫ್ಯಾನ್ಸ್​ ಸಖತ್ ಥ್ರಿಲ್​ ಆಗಿದ್ದಾರೆ. 

Tap to resize

Latest Videos

undefined

KGF Chapter 2: ರಾಕಿ ಡೋಂಟ್ ಲೈಕ್ ರೆಕಾರ್ಡ್: ರೆಕಾರ್ಡ್ ಲೈಕ್ಸ್ ರಾಕಿ!

ಅಬ್ಬಬ್ಬಾ, ಏನ್​ ನಟನೆಯಲ್ವಾ?: KGF​​​​​-2 ಚಿತ್ರದ ಫೇಮಸ್​​​ ವೈಲೆನ್ಸ್ ವೈಲೆನ್ಸ್ ಡೈಲಾಗ್​​ಗೆ ವಾರ್ನರ್​ ರೀಲ್ಸ್​​ ಮಾಡಿದ್ದಾರೆ. ಮೈದಾನದಲ್ಲಿ ಬ್ಯಾಟ್​​​ ಹಿಡಿದು, ಮ್ಯೂಸಿಕ್​​ಗೆ ತಕ್ಕಂತೆ ಎಡಿಟ್​ ಮಾಡಿದ್ದು ವಿಡಿಯೋ ಬೊಂಬಾಟ್ ಆಗಿ ಮೂಡಿ ಬಂದಿದೆ. ಈ ವಿಡಿಯೋ ಸಖತ್​​ ವೈರಲ್ ಆಗಿದ್ದು, ಆರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇನ್ನು ವಾರ್ನರ್​ ಈ ಹಿಂದೆಯೂ KGF​​​​​ ಚಿತ್ರದ ರೀಲ್ಸ್  ಮಾಡಿದ್ರು. ಅದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಒಟ್ಟಿನಲ್ಲಿ ಪವರ್​ ಹಿಟ್ಟರ್​ ವಾರ್ನರ್​ ಬಾಯಲ್ಲಿ KGF-2ನ ವೈಲೆನ್ಸ್​​, ವೈಲೆನ್ಸ್​ ಡೈಲಾಗ್ಸ್​ ಕೇಳಲು ಸಖತ್​ ಮಜವಾಗಿದೆ. ಸ್ಟೋರಿ ಮುಗಿಸೋಕು ಮುನ್ನ ಮತ್ತೊಮ್ಮೆ ನೋಡಿ ಎಂಜಾಯ್​ ಮಾಡಿ.

3ನೇ ದಿನವೂ ಹಿಂದಿಯಲ್ಲಿ ದಾಖಲೆ ಬರೆದ ರಾಕಿ ಭಾಯ್: ಬಾಲಿವುಡ್ ನಲ್ಲಿ ಯಶ್(Yash) ನಟನೆಯ ಕೆಜಿಎಫ್-2 (KGF 2)ಸಿನಿಮಾ ಸುನಾಮಿ ಎಬ್ಬಸಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿದೆ. ಕೆಜಿಎಫ್-2 ಬಿಡುಗಡೆಯಾಗಿ ಎರಡೇ ದಿನಕ್ಕೆ ಹಿಂದಿಯಲ್ಲಿ 100 ಕೋಟಿ ಕ್ಲಬ್(KGF2 Cross 100 Crore Club) ಸೇರುವ ಮೂಲಕ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿತ್ತು. ಈ ಮೂಲಕ ಬಾಲಿವುಡ್ ನ ಘಟಾನುಘಟಿ ಸ್ಟಾರ್ ಗಳ ದಾಖಲೆ ಕಲೆಕ್ಷನ್ ಯಶ್, ಕೆಜಿಎಫ್-2 ಸಿನಿಮಾ ಧೂಳಿಪಟ ಮಾಡಿದೆ. 

ಇದೀಗ ಚಿತ್ರದ ಮೂರನೇ ದಿನದ ಕಲೆಕ್ಷನ್ ವರದಿ ಬಹಿರಂಗವಾಗಿದ್ದು ಸಿನಿಮಾ ಬಿಡುಗಡೆಯಾಗಿ ಮೂರನೇ ದಿನವೂ ಭರ್ಜರಿ ಕಮಾಯಿ ಮಾಡಿದೆ. ಕೆಜಿಎಫ್-2 ಹಿಂದಿ ಭಾಗದ ಕಲೆಕ್ಷನ್ ವರದಿಯನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದೆ. ಈ ಬಗ್ಗೆ ತರಣ್ ಆದರ್ಶ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಕೆಜಿಎಫ್-2 ಸಿನಿಮಾ 3ನೇ ದಿನ 42.90 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಹಿಂದಿಯಲ್ಲಿ ಕೆಜಿಎಫ್-2 143.64 ಕೋಟಿ ರೂ. ಬಾಚಿಕೊಂಡಿದೆ.

KGF 2 ಎದುರು ಹೀನಾಯ ಸೋತು OTTಯಲ್ಲಿ ಬರ್ತಿದೆ ವಿಜಯ್ 'ಬೀಸ್ಟ್'

'ಹಿಂದಿಯಲ್ಲಿ ಕೆಜಿಎಫ್-2 ರೆಕಾರ್ಡ್ ಮಾಡಿದೆ. ವಾರಾಂತ್ಯಕ್ಕೆ ಎಲ್ಲಾ ದಾಖಲೆ ಬ್ರೇಕ್ ಮಾಡಲು ಸಿದ್ಧವಾಗಿದೆ. 3ನೇ ದಿನವೂ ಸೂಪರ್ ಕಲೆಕ್ಷನ್. ಗುರುವಾರ 53.95 ಕಟಿ ರೂ. ಶುಕ್ರವಾರ 46.79 ಕೋಟಿ ರೂ. ಮತ್ತು ಶನಿವಾರ 42.90 ಕೋಟಿ ರೂ. ಒಟ್ಟು 143.64 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ' ಎಂದು ಟ್ವೀಟ್ ಮಾಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 3ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.
 

click me!