75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಚೆಟ್ಟಿಮಾನಿ ಗೆಳೆಯರ ಬಳಗದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಗೆಳೆಯರ ಬಳಗದ ಪ್ರಮುಖರಾದ ಡಲ್ಲೇಶ್ ಕುಮಾರ್ ಕೀಜನ ಹಾಗೂ ಮನೀಶ್ ಬೋಪಣ್ಣ ಕೊಟ್ಟಂಡ ಮಿನಿ ಮ್ಯಾರಥಾನ್‌ಗೆ ಚಾಲನೆ ನೀಡಿದರು
ಮಡಿಕೇರಿ (ಸೆ.11) : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಚೆಟ್ಟಿಮಾನಿ ಗೆಳೆಯರ ಬಳಗದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಗೆಳೆಯರ ಬಳಗದ ಪ್ರಮುಖರಾದ ಡಲ್ಲೇಶ್ ಕುಮಾರ್ ಕೀಜನ ಹಾಗೂ ಮನೀಶ್ ಬೋಪಣ್ಣ ಕೊಟ್ಟಂಡ ಮಿನಿ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಚೆಟ್ಟಿಮಾನಿಯ ಕದುಪಜೆ ಕುಟುಂಬಸ್ಥರ ಗದ್ದೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸಾಂದೀಪನಿ ವಿದ್ಯಾಪೀಠದ ಮುಖ್ಯ ಶಿಕ್ಷಕಿ ಕುದುಪಜೆ ಕವಿತಾ ಕಿಶೋರ್, ಕುಂದಚೇರಿ ಗ್ರಾ.ಪಂ. ಅಧ್ಯಕ್ಷೆ ಸವಿತಾ ಉದಯ ಕುಮಾರ್, ಉಪಾಧ್ಯಕ್ಷ ವಿಶು ಕೆದಂಬಾಡಿ, ಮಾಜಿ ಸೈನಿಕ ಕೂಡಕಂಡಿ ಪಳಂಗಪ್ಪ, ಕೊಡಗು ರಕ್ಷಣಾ ವೇದಿಕೆಯ ಪ್ರಮುಖ ಚೆದುಕಾರು ವಿನೋದ್ ಕುಮಾರ್ ಉದ್ಘಾಟಿಸಿದರು.
ಕೆಸರುಗದ್ದೆ ಓಟ: ಮೂರು ಬಾರಿ ಬಿದ್ದರೂ ಗುರಿ ಮುಟ್ಟಿದ ಸಚಿವ ರವಿ!
ಕೆಸರುಗದ್ದೆ ಓಟ(Kesarugadde Ota), ಪಾಸಿಂಗ್ ದ ಬಾಲ್(Passing the ball), ಎಣ್ಣೆಕಂಬ(ennekamba) ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ಮಿನಿ ಮ್ಯಾರಥಾನ್ ಪುರುಷರ ವಿಭಾಗದಲ್ಲಿ ಜಿ.ಶ್ರೀಧರ್ ಪ್ರಥಮ, ಧೀರಜ್ ದ್ವಿತೀಯ, ಮೋಹಿತ್ ತೃತೀಯ ಸ್ಥಾನ, ಮಹಿಳೆಯರ ವಿಭಾಗದಲ್ಲಿ ನಂಗಾರು ತೇಜಸ್ವಿನಿ ಪ್ರಥಮ, ಕುಂಬಳಚೇರಿ ಜಿ. ಮೋನಿಷಾ ದ್ವಿತೀಯ, ಪ್ರೇಕ್ಷಾ ಆಮೆಮನೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹಗ್ಗಜಗ್ಗಾಟದಲ್ಲಿ ಪುರುಷರ ವಿಭಾಗದಲ್ಲಿ ಕುದುಪಜೆ ಬಾಯ್‌್ಸ ತಣ್ಣಿಮಾನಿ ಬಿ ತಂಡ ಪ್ರಥಮ, ಟೀಂ ಕಗ್ಗೋಡ್ಲು ಎ ತಂಡ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ನಾಗಶ್ರೀ ಫ್ರೆಂಡ್‌್ಸ ಸುಳ್ಯ ಪ್ರಥಮ, ಸಿಂಗತ್ತೂರು ಗೆಳತಿಯರ ಬಳಗ ಚೆಟ್ಟಿಮಾನಿ ದ್ವಿತೀಯ ಸ್ಥಾನ ಪಡೆದುಕೊಂಡಿತು.
Madikeri: ಅರುವತ್ತೊಕ್ಲು ಗ್ರಾಮದಲ್ಲಿ ಕೆಸರು ಗದ್ದೆ ಕ್ರೀಡಾಕೂಟ
ಗೆಳೆಯರ ಬಳಗದ ಪ್ರಮುಖ ಪರಶುಧರ ಸುಳ್ಯಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವಕರು ಹಾಗೂ ಉದ್ಯಮಿ ಬೆಪ್ಪುರನ ಅವಿನಾಶ್ ಕೇಸರಿ, ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್, ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ, ಕುಂದಚೇರಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಯು. ಹ್ಯಾರಿಸ್, ಸಮಾಜ ಸೇವಕ ಕೋಳಿಬೈಲು ಚಿನ್ನಪ್ಪ ವೆಂಕಟೇಶ್, ಚೆಟ್ಟಿಮಾನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೀರ್ತಿಕುಮಾರ್ ಕೆದಂಬಾಡಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ, ಬಳಗದ ಪದಾಧಿಕಾರಿಗಳಿಗೆ ಹಾಗೂ ಸಮಿತಿ ಸದಸ್ಯರುಗಳಿಗೆ ಗೆಳೆಯರ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.