
ದಾವಣಗೆರೆ (ನ.19) : ಚಿತ್ರದುರ್ಗ ಅವಳಿ ಜಿಲ್ಲೆಗಳ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವ ಸಾವಿರಾರು ಕ್ರೀಡಾಪಟುಗಳ ಭವಿಷ್ಯಕ್ಕೆ ಕೊಳ್ಳೆ ಇಟ್ಟ ದಾವಣಗೆರೆ ವಿವಿ ಸಿಂಡಿಕೇಟ್ ಸಭೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗಷ್ಟೆ ದಕ್ಷಿಣ ಭಾರತ, ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲು ಹೊರಟಿರುವ ದಾವಣಗೆರೆ ವಿವಿ. ಕುಲಪತಿಗಳ ತುಘಲಕ್ ದರ್ಬಾರ್‌ಗೆ ಉದಯೋನ್ಮುಖ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದೆ.
ಚಿತ್ರದುರ್ಗ: ಖೋಖೋ ಅಂಕಣ ಅಭಿವೃದ್ಧಿಗೆ ಶಾಸಕ ತಿಪ್ಪಾರೆಡ್ಡಿಗೆ ಕ್ರೀಡಾಪಟುಗಳ ಮನವಿ
ಕ್ರೀಡಾಪಟುಗಳಿಗೆ ಕ್ರೀಡೆಗೆ ಬೇಕಾದ ಪರಿಕರಗಳಾದ ಟ್ರ್ಯಾಕ್ ಸೂಟ್, ಶೂಸ್, ಕ್ರೀಡಾ ಸಮವಸ್ತ್ರ, ಮ್ಯಾಟ್ ಶೂಸ್ ಸೇರಿದಂತೆ ಯಾವುದನ್ನೂ ಕೊಡುತ್ತಿಲ್ಲ. ಕ್ರೀಡಾಪಟುಗಳಿಗೆ 'ಟಿಎ ಡಿಎ ಸಹ ಕೇಳಬೇಡಿ' ಎನ್ನುತ್ತಿರುವ ದಾವಿವಿ. ದಾವಿವಿ ಕುಲಪತಿಗಳ ನಿರ್ಲಕ್ಷ್ಯ,, ತುಘಲಕ್ ದರ್ಬಾರ್‌ನಿಂದ ಕ್ರೀಡಾಪಟುಗಳು ಬೇಸತ್ತಿದ್ದಾರೆ. ಉನ್ನತ ಮಟ್ಟದ ಸಾಧನೆ ಮಾಡಬೇಕೆಂಬ ಅತ್ಯುತ್ಸಾಹದಿಂದ ಇರುವ ಕ್ರೀಡಾಪಟಗಳು ಕ್ರೀಡಾ ಅಭ್ಯಾಸಕ್ಕೆ ಅಗತ್ಯ ಸೌಲಭ್ಯವಿಲ್ಲದೆ, ಪ್ರೋತ್ಸಾಹವಿಲ್ಲದೆ ಆತಂಕದಲ್ಲಿ ದಿನದೂಡುತ್ತಿದ್ದಾರೆ.
ವಿವಿ ಕುಲಪತಿಗಳು ಕ್ರೀಡೆ ಮತ್ತು ಕ್ರೀಡಾಪಟುಗಳ ಬಗ್ಗೆ ನಿರ್ಲಕ್ಷ್ಯ ಎಷ್ಟಿದೆ ಎಂದರೆ ಶೂ, ಮ್ಯಾಟ್ ಸಹ ಕೊಡುವುದಕ್ಕೆ ಮನಸು ಮಾಡಿಲ್ಲ. ಮೊನ್ನೆ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳು ಬರಿಗಾಲಲ್ಲಿ ಆಡಿದರು. ಟಿಎ ಡಿಎ ಹಣ, ಸಾಲ ಮಾಡಿ ಖರೀದಿಸಿ ಹಾಕಿದ ಮ್ಯಾಟ್ ಹಾಕಿದ್ದ ಕ್ರೀಡಾಪಟುಗಳು.
ದೇಶದ ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ಒಡ್ಡುವಂತೆ ತರಬೇತುಗೊಳಿಸಿ ಸಿದ್ಧಗೊಳಿಸಬೇಕು. ಅದಕ್ಕೆ ಬೇಕಾದ ಎಲ್ಲ ಕ್ರೀಡಾಪಟುಗಳಿಗೆ ಸಿಗುವಂತಾಗಬೇಕು ಎಂಬ ಕಾರಣಕ್ಕೆ ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ಅದಕ್ಕಾಗಿಯೇ 'ಖೇಲೋ ಇಂಡಿಯಾ' ಅಂತಾ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಆದರೆ ದಾವಿವಿ ಕುಲಪತಿ ಪ್ರೊ. ಕುಂಬಾರ ಅವರ ವರ್ತನೆ. ಕ್ರೀಡಾ ವಿರೋಧಿ ನೀತಿ ನೋಡಿದರೆ ಖೇಲ್ ಖತಂ ಅನ್ನೋ ಹಾದಿ ತುಳಿದಂತಿದೆ.
National Games 2022 ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಹೆಕ್ಕಿದ ಅಶ್ವಿನ್-ಪ್ರತೀಕ್ ಜೋಡಿ.!
ದಾವಣಗೆರೆ ವಿವಿಯಲ್ಲಿ ಕ್ರೀಡಾಪಟುಗಳಿಗೆ ಯಾವುದೇ ಸೌಲಭ್ಯವಿಲ್ಲ. ಪ್ರೋತ್ಸಾಹವಂತೂ ದೂರದ ಮಾತು. ಈ ಬಗ್ಗೆ ಸರ್ಕಾರ ಗಮನಹರಿಸಿ ಕ್ರೀಡಾಪಟುಗಳು ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.