ಕೋಟೆನಾಡಿನ ರೇಸ್‌ ಟ್ರ್ಯಾಕ್‌ ದೇಶದಲ್ಲಿಯೇ ಸೂಪರ್: ರೋಮಾಂಚಕರ ದಕ್ಷಿಣ ರೇಸ್‌ಗೆ ವಿದೇಶಿಗರೂ ಆಗಮನ

By Sathish Kumar KH  |  First Published May 31, 2023, 9:31 PM IST

ಬರದನಾಡು ಕೋಟೆನಾಡಿನ ಗುಡ್ಡಗಾಡು ಪ್ರದೇಶದಲ್ಲಿ ಬುಧವಾರ (ಮೇ 31ರಂದು) ನಡೆದ ಬೈಕ್,‌ ಕಾರ್ ರೇಸ್ ಗ್ರಾಮೀಣ ಭಾಗದ ಜನರ ಹುಬ್ಬೇರುವಂತೆ ಮಾಡಿದೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿತ್ರದುರ್ಗ (ಮೇ 31): ದೊಡ್ಡ ದೊಡ್ಡ ಸಿಟಿಗಳಲ್ಲಿ ಬೈಕ್ ರೇಸ್, ಕಾರ್ ರೇಸ್ ನಡೆಯುವುದು ಕಾಮನ್. ಆದ್ರೆ ಬರದನಾಡು ಕೋಟೆನಾಡಿನ ಗುಡ್ಡಗಾಡು ಪ್ರದೇಶದಲ್ಲಿ ಬುಧವಾರ (ಮೇ 31ರಂದು) ನಡೆದ ಬೈಕ್,‌ ಕಾರ್ ರೇಸ್ ಗ್ರಾಮೀಣ ಭಾಗದ ಜನರ ಹುಬ್ಬೇರುವಂತೆ ಮಾಡಿ, ನೆರೆದಿದ್ದ ಜನರಲ್ಲಿ ರೋಮಾಂಚನ ತಂದಿದ್ದು ಇದೇ ಮೊದಲ ಬಾರಿ. ಅಷ್ಟಕ್ಕೂ ಆ ರೇಸ್ ಹೇಗಿತ್ತು ಅನ್ನೋದ್ರ ಕಂಪ್ಲೀಟ್ ಝಲಕ್ ಇಲ್ಲಿದೆ ನೋಡಿ.

Latest Videos

undefined

ದೇಶದ ನಾನಾ ಭಾಗಗಳಿಂದ ಆಗಮಿಸಿ ರೇಸ್ ನಡೆಸಲು ತಯಾರಿ ನಡೆಸ್ತಿರೋ ಕ್ರೀಡಾಪಟುಗಳು, ರೇಸ್ ಗಾಗಿ ಕಾದು ನಿಂತಿರೋ ಬೈಕ್ ಹಾಗೂ ಕಾರು ಸವಾರರ ಸ್ಟಂಟ್‌ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ. ಜೈದಾಸ್ ಮೆನನ್ ಮೋಟರ್ ಸ್ಪೋರ್ಟ್ಸ್ ಕ್ಲಬ್ ಬೆಂಗಳೂರು (Bengaluru Jaidas Menon Motor Sports Club) ಇವರ ವತಿಯಿಂದ ದಕ್ಷಿಣ್ ಡೇರ್ ರೇಸಿಂಗ್ ಕಾಂಪಿಟೇಷನ್ (Dakshin Dare Racing Competition) ರಾಜ್ಯದ ನಾನಾ ಭಾಗಗಳಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಮೊದಲು ಬೆಂಗಳೂರಿನಿಂದ ಶುರುವಾದ ಈ ಸ್ಪರ್ಧೆ ಇಂದು ಚಳ್ಳಕೆರೆಯ ನನ್ನಿವಾಳ ಗ್ರಾಮಕ್ಕೆ ತಲುಪಿದೆ.

ಅನ್ನಭಾಗ್ಯ ಯೋಜನೆಯ 450 ಅಕ್ಕಿ ಮೂಟೆ ತುಂಬಿದ್ದ ಲಾರಿಯೇ ನಾಪತ್ತೆ!

‌44 ಕಿಲೋಮೀಟರ್ ಕ್ರಾಸ್ ಕಂಟ್ರಿ ರೇಸ್ ಚಾಲೆಂಜ್: ಕಳೆದ 15 ವರ್ಷದಿಂದ ಪ್ರತೀ ವರ್ಷ ಈ ಸ್ಪರ್ಧೆಯನ್ನು ಅವರು ಏರ್ಪಡಿಸುತ್ತಾರೆ. ಇಲ್ಲಿ 35 ಟೂ ವೀಲರ್ಸ್ ಹಾಗೂ 10 ಕಾರ್ ಗಳು ರೇಸ್ ನಲ್ಲಿ ಭಾಗವಹಿಸಿವೆ. ಅದ್ರಲ್ಲಿ ವಿದೇಶದಿಂದ ಅಂದ್ರೆ ಶ್ರೀಲಂಕಾ ದಿಂದ ಒಬ್ಬ ಬೈಕ್ ರೇಸ್ ಕ್ರೀಡಾಪಟು ಭಾಗಿಯಾಗಿದ್ದಾರೆ. ಅದಲ್ಲದೇ ನಮ್ಮ ದೇಶದ ದೆಹಲಿ, ಮಹಾರಾಷ್ಟ್ರ,ಹರಿಯಾಣ, ಕೇರಳ, ತಮಿಳುನಾಡು, ಕರ್ನಾಟಕ ಸೇರಿದಂತೆ ನಾನಾ ಭಾಗಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ. ಇದರ ಜೊತೆಗೆ ಮಹಿಳಾ ಬೈಕ್ ರೇಸರ್ಸ್ ಗಳೂ (Lady bike racer) ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರೂ ನ್ಯಾಷನಲ್ ರೇಸರ್ಸ್ (National Racers) ಕೂಡ ಆಗಿದ್ದಾರೆ. ಇಲ್ಲಿ ಸುಮಾರು 44 ಕಿಲೋಮೀಟರ್ ಕ್ರಾಸ್ ಕಂಟ್ರಿ ರೇಸ್ ಚಾಲೆಂಜ್ (Cross country race challenge) ಇರಲಿದೆ. ಬೇರೆ ಕಡೆ ಈ‌ ರೀತಿ ಜಾಗ ಸಿಗಲ್ಲ ಎಂಬ ಕಾರಣಕ್ಕೆ ಹಳ್ಳಿಯ ಗುಡ್ಡಗಾಡು ಪ್ರದೇಶದಲ್ಲಿ ಈ ರೀತಿಯ ಸ್ಪರ್ಧೆ ಏರ್ಪಡಿಸುತ್ತಾರೆ ಅಂತಾರೆ ಆಯೋಜಕರು.

ಚಳ್ಳಕೆರೆಯ ರೇಸ್‌ ಟ್ರ್ಯಾಕ್‌ ಸೂಪರ್:  ಈ ರೇಸ್ ಬಗ್ಗೆ ಭಾಗವಹಿಸಿದ್ದ ಕ್ರೀಡಾಪಟುಗಳನ್ನೇ ವಿಚಾರಿಸಿದ್ರೆ, ಬೇರೆ ಕಡೆಗಿಂತ ಇಲ್ಲಿನ ರೇಸ್ ಟ್ರಾಕ್ ತುಂಬಾ ಚೆನ್ನಾಗಿದೆ. ನಾವು ಬೈಕ್ ರೇಸ್ ಮಾಡುವಾಗ ತುಂಬಾ ಮಜಾ ಬರುತ್ತದೆ. ಇಲ್ಲಿನ ಆಯೋಜಕರು ಉತ್ತಮವಾಗಿ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿಯವರೆಗೂ ಯಾವುದೇ ಸಮಸ್ಯೆ ಆಗಿಲ್ಲ. ಇಲ್ಲಿಗೆ ಬಂದು ರೇಸ್ ನಡೆಸ್ತಿರೋದು ಖುಷಿ ಆಗ್ತಿದೆ ಅಂತಾರೆ ಓರ್ವ ಮಹಿಳಾ ಬೈಕ್ ರೇಸರ್. ಅಲ್ಲದೇ ಒಬ್ಬ ಯುವ ರೇಸರ್ ಕೂಡ, ಇದೊಂದು ದಕ್ಷಣ್ ರೇಡ್ ಕ್ರಾಸ್ ಕಂಟ್ರಿ ರೇಸ್ ಆಗಿದೆ. ಮೊದಲ‌ ರೌಂಡ್ ಹೋಗಿ ಬಂದ್ವಿ ತುಂಬಾ ಚೆನ್ನಾಗಿದೆ. ದೇಶದ ನಾನಾ ಭಾಗಗಳಿಂದ ರೇಸರ್ಸ್ ಬಂದಿದ್ದಾರೆ. ನನ್ನದು ಇದು ನಾಲ್ಲನೇ‌ ರೇಸ್ ತುಂಬಾ ಖುಷಿ ತಂದಿದೆ ಎಂದು ಮಂಗಳೂರು ಮೂಲಕ ಮಹಿಳಾ ಬೈಕ್‌ ರೇಸರ್ ತನಿಹಾ ಹೇಳಿದರು.

ರಾಜ್ಯಾದ್ಯಂತ ಜೂ.15ರವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ

ರಾಷ್ಟ್ರೀಯ ಮಟ್ಟದ ರೇಸರ್‌ಗಳು ಭಾಗಿ: ಒಟ್ಟಾರೆಯಾಗಿ ಗ್ರಾಮೀಣ ಭಾಗದಲ್ಲಿ ಬುಲೆಟ್ ನಂತಹ ಮೋಟಾರ್ ವಾಹನಗಳು ಸದ್ದು ಮಾಡ್ಕೊಂಡ್ ಹೋದ್ರೆ ಸಾಕು ಜನ ನಿಬ್ಬೆರಗಾಗಿ ನೋಡ್ತಾರೆ. ಅಂತದ್ರಲ್ಲಿ ಈ ಬಾರಿ ದೇಶದ ಅನೇಕ ರಾಷ್ಟ್ರೀಯ ಮಟ್ಟದಲ್ಲಿ ಭಾಗಿಯಾಗಿದ್ದ ರೇಸ್ ಕ್ರೀಡಾಪಟುಗಳು ಬಂದು ಭಾಗವಹಿಸಿ ತಮ್ಮ ಬೈಕ್ ರೇಸ್ ನಡೆಸಿದ್ದನ್ನು ಕಂಡು ಚಳ್ಳಕೆರೆ ಭಾಗದ ಜನರು ಫುಲ್‌ಖುಷ್ ಆಗಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ.

click me!