ಇಂದು, ನಾಳೆ ಕೊಡವ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿ

By Kannadaprabha News  |  First Published Nov 26, 2022, 9:17 AM IST

ಕೊಡವ ಸ್ಪೋಟ್ಸ್‌ರ್‍ ಅಸೋಸಿಯೇಷನ್‌ ವತಿಯಿಂದ ನ.26 ಮತ್ತು 27ರಂದು ಮಡಿಕೇರಿಯ ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡವ ಪ್ರೀಮಿಯರ್‌ ಲೀಗ್‌ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯಲಿದೆ.


ಮಡಿಕೇರಿ (ನ.26) : ಕೊಡವ ಸ್ಪೋಟ್ಸ್‌ರ್‍ ಅಸೋಸಿಯೇಷನ್‌ ವತಿಯಿಂದ ನ.26 ಮತ್ತು 27ರಂದು ಮಡಿಕೇರಿಯ ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡವ ಪ್ರೀಮಿಯರ್‌ ಲೀಗ್‌ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯಲಿದೆ.

ನ.26ರಂದು ಬೆಳಗ್ಗೆ 8.15ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಸ್ಪೋಟ್ಸ್‌ರ್‍ ಅಸೋಸಿಯೇಷನ್‌ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೈಕೋರ್ಚ್‌ನ ಮಾಜಿ ಹೆಚ್ಚುವರಿ ಅಡ್ವೊಕೇಟ್‌ ಅಜ್ಜಿಕುಟ್ಟಿರ ಎಸ್‌. ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌, ರನ್‌ಜಿಟ್‌ ಟೆಕ್ನಾಲಜೀಸ್‌ ಪ್ರೈ.ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿರ ಬಿ. ತಿಮ್ಮಯ್ಯ, ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಯಾ.ಮಲ್ಚೀರ ಎ.ಅಯ್ಯಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಪಾಲ್ಗೊಳ್ಳಲಿದ್ದಾರೆ.

Tap to resize

Latest Videos

undefined

ಮಹತ್ವ ಅರಿತು ಹಬ್ಬಗಳ ಆಚರಣೆಯಿಂದ ಸಂಸ್ಕೃತಿ ರಕ್ಷಣೆ: ಕಾಳಿಮಾಡ ಮೋಟಯ್ಯ

ಸಮಾರೋಪ: ನ.27ರಂದು ಸಂಜೆ 4.30ಕ್ಕೆ ಕುಟ್ಟಂಡ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಜ್ಜಿಕುಟ್ಟಿರ ಎಸ್‌.ಪೊನ್ನಣ್ಣ, ಕಾಂಗ್ರೆಸ್‌ ಯುವ ಮುಖಂಡ ಡಾ.ಮಂಥರ್‌ ಗೌಡ, ರನ್‌ಜಿಟ್‌ ಟೆಕ್ನಾಲಜೀಸ್‌ ಪ್ರೈ.ಲಿ ನ ನಂದಿರ ಬಿ.ತಿಮ್ಮಯ್ಯ, ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್‌ ಪೊನ್ನಣ್ಣ, ರಾಜ್ಯ ಪಶ್ಚಿಮಘಟ್ಟಸಂರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್‌ ನಾಣಯ್ಯ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ತಂಡಗಳು: 10 ಫ್ರಾಂಚೈಸಿಗಳ ಐಪಿಎಲ್‌ ಮಾದರಿ ಬಿಡ್ಡಿಂಗ್‌ ನಡೆದಿದ್ದು, ಬೆಂಗಳೂರು ಬಂಬಂಗ, ಮೈಸೂರು ಮಕ್ಕ, ಕೊಡವ ಬೀರಂಗ, ಎಲ್‌ಸಿಎಂ ಟಸ್ಕರ್ಸ್‌ 97, ಟೀಮ್‌ ಕೈಮಡ 2025, ಕೆಎ12 ವಾರಿಯರ್ಸ್‌, ಅಂಜಿಕೇರಿ ನಾಡ್‌ಕೂಟ, ಟೀಮ್‌ ಭಗವತಿ, ಎಂಪಿಬಿ ರಾಯಲ್ಸ್‌ ಹಾಗೂ ಪಿ.ಜಿ. ನಾಲ್ನಾಡ್‌ ನರಿಯ ತಂಡಗಳು ಸೆಣಸಾಡಲು ಸಜ್ಜಾಗಿವೆ. ಮೊದಲ ಬಹುಮಾನ ಆಕರ್ಷಕ ಟ್ರೋಫಿ ಸೇರಿ 2 ಲಕ್ಷ ರು., ದ್ವಿತೀಯ ಟ್ರೋಫಿ ಸೇರಿ 1 ಲಕ್ಷ ರುಪಾಯಿ ಹಾಗೂ ತೃತೀಯ ಬಹುಮಾನ 40 ಸಾವಿರ ರು. ನೀಡಲಾಗುತ್ತದೆ. ಮಧ್ಯಾಹ್ನ 3.30ಕ್ಕೆ Wಉ T್ಕಐಆಉಖ WಐTಏ POಖಐTಐ್ಖಉ ್ಖಐಆಉಖ ನ ಲೇಲುಳ್ಳಿ..ಲೇ..ಲೇ ಆಲ್ಬಮ್‌ ಸಾಂಗ್‌ ಬಿಡುಗಡೆಯಾಗಲಿದ್ದು, ಸಂಜೆ 6.30 ಗಂಟೆಗೆ ಲೈವ್‌ ಡಿಜೆ ಕಾರ್ಯಕ್ರಮ ನಡೆಯಲಿದೆ. BIG 3: 4 ವರ್ಷ ಕಳೆದರೂ ಕೊಡಗು ಪ್ರವಾಹ ಸಂತ್ರಸ್ತರಿಗೆ ಸಿಕ್ಕಿಲ್ಲ ಸೂರು!

click me!