Delta Plus variant: ಒಮಿಕ್ರೋನ್ ಅಲ್ಲ, ಗಂಗೂಲಿಯನ್ನು ಕಾಡಿದ್ದು ಡೆಲ್ಟಾಪ್ಲಸ್‌

By Kannadaprabha News  |  First Published Jan 2, 2022, 2:30 AM IST
  • ಗಂಗೂಲಿ ಅವರಲ್ಲಿ ಪತ್ತೆಯಾಗಿದ್ದು ಕೋವಿಡ್‌ ರೂಪಾಂತರಿ
  • ಗಂಗೂಲಿಯ ಡೆಲ್ಟಾಪ್ಲಸ್‌ ಸೋಂಕಿನ ಪರೀಕ್ಷಾ ವರದಿ ಪಾಸಿಟಿವ್‌

ಕೋಲ್ಕತಾ(ಜ.02): ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರಲ್ಲಿ ಪತ್ತೆಯಾಗಿದ್ದು ಕೋವಿಡ್‌ ರೂಪಾಂತರಿ ಡೆಲ್ಟಾಪ್ಲಸ್‌ ವೈರಸ್‌ ಎಂದು ವೈದ್ಯರು ಶನಿವಾರ ಮಾಹಿತಿ ನೀಡಿದ್ದಾರೆ. ‘ಗಂಗೂಲಿಯ ಡೆಲ್ಟಾಪ್ಲಸ್‌ ಸೋಂಕಿನ ಪರೀಕ್ಷಾ ವರದಿ ಪಾಸಿಟಿವ್‌ ಬಂದಿದೆ. ಆದರೆ ಸೋಂಕು ತೀವ್ರವಾಗಿಲ್ಲದ ಕಾರಣ ಸದ್ಯ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದಿದ್ದಾರೆ. ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗಂಗೂಲಿ, ಶುಕ್ರವಾರ ಮನೆಗೆ ಮರಳಿದ್ದರು. ಇದೇ ವೇಳೆ ಅವರಿಗೆ ಕೋವಿಡ್‌ ರೂಪಾಂತರಿ ಒಮಿಕ್ರೋನ್‌ ವೈರಸ್‌ ತಗುಲಿಲ್ಲ ಎಂದು ದೃಢಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.

ಭಾರತ ಕ್ರಿಕೆಟ್‌ ತಂಡದ (Team India) ಮಾಜಿ ನಾಯಕ ಮತ್ತು ಬಿಸಿಸಿಐನ ಪ್ರಸ್ತುತ ಅಧ್ಯಕ್ಷ ಸೌರವ್ ಗಂಗೂಲಿಗೆ (Sourav Ganguly)  ಡಿ.28ರಂದು ಕೋವಿಡ್ -19 ದೃಡಪಟ್ಟಿತ್ತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿದ್ದವು. ಕೋವಿಡ್ ವೈರಸ್‌ನ ಲಕ್ಷಣಗಳು ಕಾಣಿಸಿಕೊಂಡಿದ್ದ ಬೆನ್ನಲ್ಲೇ ಸೌರವ್ ಗಂಗೂಲಿ ಕೋವಿಡ್‌ 19 ಪರೀಕ್ಷೆಗೆ ಒಳಪಟ್ಟಿದ್ದರು. ಭಾರತ ತಂಡದ ಮಾಜಿ ನಾಯಕ ಸೌಮ್ಯ ರೋಗಲಕ್ಷಣಗಳೊಂದಿಗೆ ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಲ್ಲಿ (Woodlands hospital) ದಾಖಲಾಗಿದ್ದರು ಎಂದು ತಿಳಿದು ಬಂದಿದೆ.

Tap to resize

Latest Videos

undefined

ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕೋವಿಡ್ -19 ಗೆ  ಪರೀಕ್ಷೆ ನಡೆಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಪಿಟಿಐ (PTI) ವರದಿ ಮಾಡಿದೆ. ಈ ವರ್ಷ ಜನವರಿಯ ನಂತರ ಗಂಗೂಲಿ ಅವರು ಎದೆಯ ಅಸ್ವಸ್ಥತೆಯಿಂದ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದು ಇದು ಮೂರನೇ ಬಾರಿಯಾಗಿದೆ. ಗಂಗೂಲಿ ಅವರು ತಮ್ಮ ಕೋಲ್ಕತ್ತಾದ ಮನೆಯಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ (Heart Attack) ಒಳಗಾಗಿದ್ದರು ಮತ್ತು ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು.

ಆಸ್ಪತ್ರೆಗೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಗೆ (Sourav Ganguly) ಮುನ್ನೆಚ್ಚರಿಕೆ ಕ್ರಮವಾಗಿ ‘ಮೊನೊಕ್ಲೊನಲ್‌ ಆ್ಯಂಟಿಬಾಡಿ ಕಾಕ್‌ಟೇಲ್‌ ಥೆರಪಿ’ ಚಿಕಿತ್ಸೆ ನೀಡಲಾಗಿತ್ತು. ಬಿಸಿಸಿಐ(BCCI) ಅಧ್ಯಕ್ಷ ಸೌರವ್ ಗಂಗೂಲಿ, ಎರಡೂ ಡೋಸ್‌ ಕೋವಿಡ್ ಲಸಿಕೆ (Corona Vaccine) ಪಡೆದುಕೊಂಡಿದ್ದರು. ಹೀಗಿದ್ದರೂ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ದೇಶದ ಹಲವು ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಅವರಿಗೆ ಸೋಂಕು ತಗುಲಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ವರ್ಷಾರಂಭದಲ್ಲೇ ಗಂಗೂಲಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ದಾದಾಗೆ ಎರಡು ಸ್ಟಂಟ್ಸ್‌ಗಳನ್ನು ಅಳವಡಿಸಲಾಗಿತ್ತು.

ಏನಿದು ಕಾಕ್‌ಟೇಲ್‌ ಚಿಕಿತ್ಸೆ?: ಕೋವಿಡ್‌ ಸೋಂಕಿತರಿಗೆ ತಲಾ 10 ಎಂಎಲ್‌ ಕ್ಯಾಸಿರಿವಿಮ್ಯಾಬ್‌ ಮತ್ತು ಇಮ್ಡಿವಿಮ್ಯಾಬ್‌ ಎನ್ನುವ ಔಷಧಗಳ ಮಿಶ್ರಣವನ್ನು ದ್ರವ ರೂಪದಲ್ಲಿ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ಈ ಔಷಧವು ವೈರಸ್‌ ಶ್ವಾಸಕೋಶಕ್ಕೆ ತಲುಪುವುದನ್ನು ನಿಯಂತ್ರಿಸುತ್ತದೆ. ರೂಪಾಂತರಿ ವೈರಸ್‌ ವಿರುದ್ಧವೂ ಇದು ಪರಿಣಾಮಕಾರಿ ಎನ್ನಲಾಗಿದೆ. ಈ ಕಾಕ್‌ಟೇಲ್‌ ಔಷಧಕ್ಕೆ ಪ್ರತಿ ಡೋಸ್‌ಗೆ ಅಂದಾಜು 60,000 ರುಪಾಯಿ ಆಗಲಿದೆ.

41 ದಿನ ಹೋಂ ಐಸೊಲೇಷನ್:

ಕೋವಿಡ್ ಚಿಕಿತ್ಸೆ ಪಡೆದು, ಡಿ.31ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಕೆಲದಿನಗಳ ಹಿಂದಷ್ಟೇ ಸೌರವ್ ಗಂಗೂಲಿಗೆ ಕೋವಿಡ್ 19 (COVID 19) ಸೋಂಕು ತಗುಲುತ್ತಿದ್ದಂತೆಯೇ ಮುನ್ನೆಚ್ಚರಿಕಾ ಕ್ರಮವಾಗಿ ಕೋಲ್ಕತಾದ ವುಡ್‌ಲ್ಯಾಂಡ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೂ ಸಹಾ, ಮನೆಯಲ್ಲಿಯೇ 14 ದಿನಗಳ ಕಾಲ ಐಸೋಲೇಷನ್‌ನಲ್ಲಿರಬೇಕಾಗಿದೆ. ಮೂಲಗಳ ಪ್ರಕಾರ ಸೌರವ್ ಗಂಗೂಲಿ ಅವರ ಕೊರೋನಾ ಟೆಸ್ಟ್ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಪಿಟಿಐ ವರದಿಯ ಪ್ರಕಾರ ಸೌರವ್ ಗಂಗೂಲಿ ಅವರಿಗೆ ಕೊರೋನಾ ರೂಪಾಂತರ ತಳಿಯಾದ ಒಮಿಕ್ರೋನ್‌ ಸೋಂಕು ತಗುಲಿಲ್ಲ ಎನ್ನಲಾಗಿತ್ತು.

click me!