ಗೆದ್ದ ಪ್ಯಾನ್ ಇಂಡಿಯಾ ಮೂವಿ ಕಲ್ಕಿ, ಸೋತು ಸುಣ್ಣವಾಗಿದ್ದ ಪ್ರಭಾಸ್‌ಗೆ ಗೆಲವು

By Suvarna News  |  First Published Jun 28, 2024, 4:58 PM IST

ಬಾಹುಬಲಿಯಂಥ ಸಿನಿಮಾದ ಅದ್ಭುತ ಯಶಸ್ಸಿನ ನಂತರ ಕಂಟಿನ್ಯೂಸ್ ಆಗಿ ಸೋಲುತ್ತಿದ್ದ ಪ್ರಭಾಸ್ ಅಭಿನಯದ ಕಲ್ಕಿ ಇದೀಗ ಯಶಸ್ಸು ಕಂಡಿದ್ದು, ನಟ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 


‘ಬಾಹುಬಲಿ’ ಬಳಿಕ ಇಡೀ ಜಗತ್ತಿನ ಕಣ್ಣು ಪ್ರಭಾಸ್ ಮೇಲಿದೆ. ಒಂದು ದೊಡ್ಡ ಗೆಲುವಿಗಾಗಿ ಪ್ರಭಾಸ್ ಅಭಿಮಾನಿಗಳು ಬಹಳ ಸಮಯದಿಂದ ಕಾಯುತ್ತಿದ್ದರು. ಅದಕ್ಕೆ ತಕ್ಕಂತೆ ‘ಕಲ್ಕಿ 2898 ಎಡಿ’ ಗೆಲುವಿನ ಭರವಸೆ ಮೂಡಿಸಿದೆ. ಚಿತ್ರಕ್ಕೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ.

ನಾಗ್‌ ಅಶ್ವಿನ್‌ ನಿರ್ದೇಶನದ ಸೈನ್ಸ್ ಫಿಕ್ಷನ್ ಶೈಲಿಯ ಈ ಸಿನಿಮಾ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ರಿಲೀಸ್‌ಗೂ ಮೊದಲೇ ಮೊದಲ ದಿನದ ಬುಕಿಂಗ್‌ನಲ್ಲೇ 20 ಲಕ್ಷಕ್ಕೂ ಅಧಿಕ ಟಿಕೆಟ್‌ ಸೇಲ್‌ ಆಗಿತ್ತು. ಇದೀಗ ಮೊದಲ ದಿನದ ಕಲೆಕ್ಷನ್‌ ದೇಶದಲ್ಲಿ 120 ಕೋಟಿ ರು. ಹಾಗೂ ಹೊರ ರಾಷ್ಟ್ರಗಳಲ್ಲಿ 60 ಕೋಟಿ ರು. ಎಂದು ಅಂದಾಜಿಸಲಾಗಿದೆ. ವಾರಾಂತ್ಯದಲ್ಲಿ ಈ ಮೊತ್ತ 500 ಕೋಟಿ ದಾಟುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Tap to resize

Latest Videos

undefined

ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾಣಿ ಅವರಂಥಾ ಸ್ಟಾರ್ ನಟರ ಜೊತೆಗೆ ವಿಜಯ ದೇವರಕೊಂಡ, ದುಲ್ಖರ್‌ ಸಲ್ಮಾನ್‌, ರಾಜಮೌಳಿ, ರಾಮ್‌ ಗೋಪಾಲ್‌ ವರ್ಮಾರಂಥವರೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಲ್ಕಿ 2898 ಎಡಿ ಸಿನಿಮಾ ಮೊದಲ ದಿನದಗಳಿಕೆಷ್ಟು? ಕಲಿಯುಗದೊಂದಿಗೆ ದ್ವಾಪರ ಯುಗದ ಬೆಸುಗೆ ಈ ‘ಕಲ್ಕಿ’!

ಕಲ್ಕಿ ನಿರ್ಮಾಪಕ ಅಶ್ವಿನ್ ದತ್ ಯಾರು? 
ಅಶ್ವಿನಿ ದತ್ ಅವರು ಟಾಲಿವುಡ್‌ನ ಅತಿ ದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದನ್ನು ಹೊಂದಿದ್ದಾರೆ - ವೈಜಯಂತಿ ಮೂವೀಸ್ - ಇದನ್ನು 1974ರಲ್ಲಿ ಸ್ಥಾಪಿಸಲಾಯಿತು. ಅವರಿಗೆ ಮೂವರು ಪುತ್ರಿಯರಿದ್ದಾರೆ - ಸ್ವಪ್ನಾ, ಪ್ರಿಯಾಂಕಾ, ಶ್ರವಂತಿ . ಕಲ್ಕಿ 2898 ಎಡಿ ಚಿತ್ರವನ್ನು ನಿರ್ದೇಶಿಸಿದ ನಾಗ್, ಅಶ್ವಿನ್ ಅವರ ಎರಡನೇ ಪುತ್ರಿ ಪ್ರಿಯಾಂಕಾರನ್ನು ವಿವಾಹವಾಗಿದ್ದಾರೆ.

ಅಶ್ವಿನಿ ದತ್ ಅವರ ವೃತ್ತಿಜೀವನದಲ್ಲಿ, ಎನ್‌ಟಿಆರ್, ಎಎನ್‌ಆರ್, ಕೃಷ್ಣ, ಸೋಭನ್ ಬಾಬು, ಕೃಷ್ಣಂ ರಾಜು, ಚಿರಂಜೀವಿ, ವೆಂಕಟೇಶ್, ಬಾಲಕೃಷ್ಣ, ನಾಗಾರ್ಜುನ, ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಟಿಸಿದ ಬ್ಲಾಕ್‌ಬಸ್ಟರ್‌ಗಳನ್ನು ಬೆಂಬಲಿಸಿದ್ದಾರೆ. ಚಿರಂಜೀವಿ ಮತ್ತು ಶ್ರೀದೇವಿ ಅಭಿನಯದ 1990ರ ಚಿತ್ರ ಜಗದೇಕ ವೀರುಡು ಅತಿಲೋಕ ಸುಂದರಿ, ವೈಜಯಂತಿ ಮೂವೀಸ್ ನಿರ್ಮಿಸಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಇದು ಅಶ್ವಿನಿ ಅವರ ವೈಯಕ್ತಿಕ ನೆಚ್ಚಿನ ಚಿತ್ರವೂ ಹೌದು.

ವಿಶ್ಚದ ಎಲ್ಲಾ ಧರ್ಮದಲ್ಲೂ ಕಲಿಯುಗದ ಅಂತ್ಯದ ಉಲ್ಲೇಖ, ಬೌದ್ಧಧರ್ಮದಲ್ಲಿ ಕಲ್ಕಿಯ ಜನನ!

ಇತ್ತೀಚಗೆ ಪ್ರಭಾಸ್, ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ ರಿಲೀಸ್‌ಗೂ ಮೊದಲು ಹಮ್ಮಿಕೊಂಡಿದ್ದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಈ ಅಶ್ವಿನ್ ದತ್ ಕಾಲಿಗೆ ನಮಸ್ಕರಿಸಿ, ಇಷ್ಟು ಸರಳ ವ್ಯಕ್ತಿಯನ್ನು ಜೀವನದಲ್ಲಿ ನೋಡಿಯೇ ಇಲ್ಲವೆಂದು ಹೇಳಿದ್ದು ಎಲ್ಲರ ಗಮನ ಸೆಳೆದಿತ್ತು. 

click me!