ಪ್ರೆಗ್ನೆನ್ಸಿಯಲ್ಲಿ ಹೈ ಹೀಲ್ಸ್‌ ಬಾಲಿವುಡ್‌ನಲ್ಲೀಗ ಟ್ರೆಂಡಿಂಗ್‌

By Kannadaprabha News  |  First Published Jun 28, 2024, 4:53 PM IST

ಇತ್ತೀಚೆಗೆ ಕಲ್ಕಿ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಹೈ ಹೀಲ್ಡ್ ತೊಟ್ಟು, ಬೇಬಿ ಬಂಬ್ ಪ್ರದರ್ಶಿಸಿದ ಬಾಲಿವುಡ್ ದೀಪಿಕಾ ಪಡುಕೋಮೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಆದರೆ, ಪ್ರೆಗ್ನೆನ್ಸಿಯಲ್ಲಿ ಈ ರೀತ್ ಹೈ ಹೀಲ್ಡ್ ತೊಟ್ಟಿದ್ದು ಡಿಪ್ಪಿಯೇ ಮೊದಲಿಗಳಾ?


ಸದ್ಯ ಬಾಲಿವುಡ್‌ನಲ್ಲಿ ಸಖತ್‌ ಟ್ರೆಂಡಿಂಗ್‌ ಆಗ್ತಿರೋದು ಗರ್ಭಿಣಿಯರ ಹೈ ಹೀಲ್ಸ್‌ (High Heels of Pregnancy in Bollywood). ಇದು ಏಕಕಾಲಕ್ಕೆ ಮೆಚ್ಚುಗೆಗೂ ಕಟು ಟೀಕೆಗೂ ಪಾತ್ರವಾಗುತ್ತಿದೆ.

ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳು ಗರ್ಭವತಿಯರಾದಾಗ ಹೀಲ್ಸ್‌ ಧರಿಸೋದು ಹೊಸತೇನೂ ಅಲ್ಲ. ಆದರೆ ಇದೀಗ ಪ್ರೆಗ್ನೆನ್ಸಿಯಲ್ಲಿ ಹೈ ಹೀಲ್ಸ್‌ ಟ್ರೆಂಡಿಂಗ್‌ ಆಗಲು ಕಾರಣ ದೀಪಿಕಾ ಪಡುಕೋಣೆ. ಈಕೆ ಇತ್ತೀಚೆಗೆ ತನ್ನ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಈವೆಂಟ್‌ನಲ್ಲಿ ಪಾಲ್ಗೊಳ್ಳಲು ಬಂದಿದ್ದಾಗ ಬಾಡಿಕಾನ್‌ ಡ್ರೆಸ್‌ ಜೊತೆಗೆ ಅದಕ್ಕೆ ಮ್ಯಾಚಿಂಗ್‌ ಆಗುವ ಹೈ ಹೀಲ್ಸ್‌ ಧರಿಸಿ ಬಂದಿದ್ದರು.

Tap to resize

Latest Videos

undefined

ತುಂಬು ಗರ್ಭಿಣಿ ಚೂಪಾದ ಪೆನ್ಸಿಲ್‌ ಹೀಲ್ಸ್‌ನಲ್ಲಿ ಸರ್ಕಸ್‌ ಮಾಡುತ್ತಾ ಎಲ್ಲಿ ಬಿದ್ದು ಬಿಡುತ್ತಾರೋ ಎಂಬ ಆತಂಕದಲ್ಲಿ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಓಡೋಡಿ ಬಂದು ಡಿಪ್ಪಿ ಸಹಾಯಕ್ಕೆ ನಿಂತರು. ಈ ಈವೆಂಟ್‌ನಲ್ಲಿ ದೀಪಿಕಾ ಲುಕ್ಕಿಗೆ ಭರಪೂರ ಮೆಚ್ಚುಗೆಯೇನೋ ಹರಿದುಬಂತು. ಆದರೆ ಆ ಬಳಿಕ ನೆಟ್ಟಿಗರು ಕಲ್ಕಿ ನಟಿಯನ್ನು ಟ್ರೋಲ್‌ ಮಾಡಿದ್ದೇ ಮಾಡಿದ್ದು. ‘ನೋ ಯುಟಿರಸ್‌, ನೋ ಗ್ಯಾನ್‌’ (ಗರ್ಭಕೋಶವಿಲ್ಲ, ಅದರತ್ತ ಧ್ಯಾನವೂ ಇಲ್ಲ) ಎಂಬುದು ಟ್ರೆಂಡಿಂಗ್‌ ಆಯ್ತು.

ದೀಪಿಕಾ ಸುಳ್ಳು ಗರ್ಭಿಣಿ ಎಂದ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡ ರಿಚಾ ಚಡ್ಡಾ!

ಇದರಿಂದ ರೊಚ್ಚಿಗೆದ್ದ ಬಾಲಿವುಡ್‌ನ ಕೆಲವೊಂದಿಷ್ಟು ಫ್ಯಾಶನ್‌ ಪ್ರಿಯರು ‘ಪ್ರೆಗ್ನೆನ್ಸಿಯಲ್ಲಿ ಹೈ ಹೀಲ್ಸ್‌’ ಎಂಬ ಟ್ರೆಂಡ್‌ ಅನ್ನೇ ಹುಟ್ಟು ಹಾಕಿದ್ದಾರೆ. ರಿಚಾ ಚಡ್ಡಾ ಸೇರಿದಂತೆ ಹಲವರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರ ಜೊತೆಗೆ ಈ ಹಿಂದೆ ಪ್ರೆಗ್ನೆನ್ಸಿಯಲ್ಲಿ ಹೈಹೀಲ್ಸ್‌ ಧರಿಸಿದ ಆಲಿಯಾ ಭಟ್‌, ಕರೀನಾ ಕಪೂರ್‌, ಅನುಷ್ಕಾ ಶರ್ಮಾ ಫೋಟೋಗಳು ಮತ್ತೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಓಡಾಡುತ್ತಿವೆ.

ಡಿಪ್ಪಿ ಸುಳ್ಳು ಬಸುರಿ ಎಂದ ನೆಟ್ಟಿಗರು:
ಬಾಲಿವುಡ್ ಬ್ಯೂಟಿ ಕ್ವೀನ್ ದೀಪಿಕಾ ಪಡುಕೋಣೆ ಅಮ್ಮನಾಗುವ ಸಂಭ್ರಮದಲ್ಲಿದ್ದಾರೆ. ಮೊದ ಮೊದಲು ಈಕೆ ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಿದ್ದಾರೆಯೋ ಎಂಬ ಅನುಮಾನ ಸಿನಿ ಪ್ರಿಯರನ್ನು ಕಾಡಿತ್ತು. ಆಮೇಲೆ ಇನ್ನೂ ಬೇಬಿ ಬಂಪ್ ಕಾಣಿಸುತ್ತಿಲ್ಲವೆಂದೂ ತಲೆ ಕೆಡಿಸಿಕೊಂಡಿದ್ದರು. ಆದರೆ, ಕಲ್ಪಿ ಪ್ರೀ ರಿಲೀಸ್ ಈವೆಂಟ್‌ಗೆ ಕಪ್ಪು ಡ್ರೆಸ್ಸು ತೊಟ್ಟು,  ಲಕ ಲಕ ಅಂತ ಬಂದ ಡಿಪ್ಪಿ ನೋಡಿ ನೆಟ್ಟಿಗರು ಮತ್ತೆ ಕಮೆಂಟ್ ಮಾಡಿದ್ದಾರೆ. ಆರು ತಿಂಗಳ ಗರ್ಭಿಣಿಯಾಗಿದ್ದು, ಸೆಪ್ಟೆಂಬರ್‌ನಲ್ಲಿ ದೀಪಿಕಾ ಹಾಗೂ ರಣವೀರ್ ಸಿಂಗ್ ಮನೆಗೊಂದು ಪುಟಾಣಿ ಪಾಪು ಬರ್ತಿದೆ. ಅದನ್ನು ವೆಲ್ ಕಂ ಮಾಡಲು ಇಡೀ ಚಿತ್ರರಂಗ, ಅಭಿಮಾನಿ ಬಳಗವೇ ಉತ್ಸುಕವಾಗಿದೆ. ಈ ಮಧ್ಯೆ ದೀಪಿಕಾ, ಬೇಬಿ ಬಂಪ್ ವೈರಲ್ ಆಗ್ತಾನೆ ಇದೆ. ದೀಪಿಕಾ ಹೋದಲ್ಲೆಲ್ಲ ಕ್ಯಾಮರಾ ಮೆನ್ ಗಳು ಹಿಂದೆ ಬೀಳುತ್ತಿರುವುದು ಸಹಜ. ಆದರೆ, ಹೈ ಹೀಲ್ಸ್ ಧರಿಸಿದ್ದಕ್ಕೆ ಇವಳು ನಿಜವಾಗಲೂ ಬಸುರಿಯೇ ಎಂಬ ಚರ್ಚೆ ನಡೆದಿತ್ತು. 

ಹೈ ಹೀಲ್ಸ್​, ಟೈಟ್​ ಡ್ರೆಸ್​ ಧರಿಸಿ ಬಂದ ಗರ್ಭಿಣಿ ದೀಪಿಕಾ! ಮತ್ತೊಂದು ಜೋಕರ್​ ಹುಟ್ಟಿಸ್ಬೇಡಮ್ಮಾ ಅಂದ ಫ್ಯಾನ್ಸ್​...

ಆದರೆ ಆಂಗಿಕ ಭಾಷೆ, ಪ್ರಭಾಸ್ ಸೇರಿ ವೇದಿಕೆ ಮೇಲಿದ್ದ ಆಸೀನರಾಗಿದ್ದ ಪ್ರತಿಯೊಬ್ಬರೂ ದೀಪಿಕಾ ಮೇಲೆ ತೋರುತ್ತಿದ್ದ ಕಾಳಜಿಯೇ ಎದ್ದು ಕಾಣಿಸುತ್ತಿತ್ತು. ಆದರೆ, ನೆಟ್ಟಿಗರು ದೀಪಿಕಾ ಹೈ ಹೀಲ್ಡ್ ಹಾಕಿದ್ದಾರೆಂಬ ಕಾರಣಕ್ಕೆ ಈಕೆ ಗರ್ಭಿಣಿಯೇ ಅಲ್ಲವೆಂದು ಕಾಲೆಳೆದಿದ್ದಿದ್ದಕ್ಕೆ, ಮತ್ತೊಬ್ಬ ನಟಿ ರಿಚಾ ಚಡ್ಡಾ ಪ್ರತಿಕ್ರಿಯೆ ನೀಡಿದ್ದು, ಇಂಥ ಕಮೆಂಟಿಗರೆಗೆ ತರಾಟೆ ತೆಗೆದುಕೊಂಡಿದ್ದು. ರಿಚಾ ಸಹ ಗರ್ಭಿಣಿಯಾಗಿದ್ದು, ಶೀಘ್ರದಲ್ಲಿ ಮಗುವನ್ನು ಸ್ವಾಗತಿಸಲಿದ್ದಾರೆ. 

click me!