Shivamogga: ಪದ್ಮಶ್ರೀ ಪುರಸ್ಕೃತ ಗಮಕ ಗಂಧರ್ವ ಕೇಶವಮೂರ್ತಿ ಇನ್ನಿಲ್ಲ

By Sathish Kumar KH  |  First Published Dec 21, 2022, 6:21 PM IST

ಖ್ಯಾತ ಗಮಕಿ ಪದ್ಮಶ್ರೀ ಪುರಸ್ಕ್ರತರಾದ ಗಮಕ ಗಂಧರ್ವ ಹೊಸಹಳ್ಳಿ ಆರ್ ಕೇಶವಮೂರ್ತಿ ಇನ್ನಿಲ್ಲವಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ಆರ್ ಕೇಶವಮೂರ್ತಿ ಅವರಿಗೆ  88 ವರ್ಷ ವಯಸ್ಸಾಗಿತ್ತು.


ಶಿವಮೊಗ್ಗ (ಡಿ.21): ಖ್ಯಾತ ಗಮಕಿ ಪದ್ಮಶ್ರೀ ಪುರಸ್ಕ್ರತರಾದ ಗಮಕ ಗಂಧರ್ವ ಹೊಸಹಳ್ಳಿ ಆರ್ ಕೇಶವಮೂರ್ತಿ ಇನ್ನಿಲ್ಲವಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ಆರ್ ಕೇಶವಮೂರ್ತಿ ಅವರಿಗೆ  88 ವರ್ಷ ವಯಸ್ಸಾಗಿತ್ತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೇಶವಮೂರ್ತಿಯವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. 
ಇದೇ ವರ್ಷ ಮಾರ್ಚ್ 25ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಖ್ಯಾತ ಗಮಕಿಗಳಾಗಿದ್ದ ಕೇಶವಮೂರ್ತಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು. ಇದು ಕರ್ನಾಟಕಕ್ಕೂ ಹೆಮ್ಮೆಯನ್ನು ತಂದಿತ್ತು. ಇವರಿಗೆ 82 ವರ್ಷದ ಪತ್ನಿ ರಾಜೇಶ್ವರಿ ಹಾಗೂ ಪುತ್ರಿ ಉಷಾ ಇದ್ದಾರೆ. ಕೇಶವಮೂರ್ತಿಯವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮೊದಲಾದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

click me!