ಕಾಂಗ್ರೆಸ್ ಸರ್ಕಾರ ಯಾಕೆ ಸತ್ತೋಯಿತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ ಹೇಳಿದ್ದಾರೆ. ನೆರೆ ಪರಿಹಾರ ಸಂಬಂಧ ರಾಜ್ಯ ಸರ್ಕಾರವನ್ನು ಟೀಕಿಸಿದ ಸಿದ್ದರಾಮಯ್ಯ ಅವರಿಗೆ ಪ್ರತ್ಯುತ್ತರ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ಪತನದ ಕಾರಣವನ್ನು ತಿಳಿಸಿದ್ದಾರೆ. ಅವರೇನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.
ಶಿವಮೊಗ್ಗ(ಅ.30): ಕಾಂಗ್ರೆಸ್ ಸರ್ಕಾರ ಯಾಕೆ ಸತ್ತೋಯಿತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ ಹೇಳಿದ್ದಾರೆ. ನೆರೆ ಪರಿಹಾರ ಸಂಬಂಧ ರಾಜ್ಯ ಸರ್ಕಾರವನ್ನು ಟೀಕಿಸಿದ ಸಿದ್ದರಾಮಯ್ಯ ಅವರಿಗೆ ಪ್ರತ್ಯುತ್ತರ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ಪತನದ ಕಾರಣವನ್ನು ತಿಳಿಸಿದ್ದಾರೆ.
ಬಿಜೆಪಿ ಸರಕಾರ ಸತ್ತು ಹೋಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ಸಚಿವ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಪ್ರತ್ಯುತ್ತರ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಸತ್ತುಹೋಗಿದ ಎಂದಿರುವುದಕ್ಕೆ ಮಾತಿನ ತಿರುಗೇಟು ನೀಡಿದ ಅವರು ಕಾಂಗ್ರೆಸ್ ಸರ್ಕಾರ ಸತ್ತೀದ್ದೇಕೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿಯನ್ನು ನಂಬೋಕಾಗಲ್ಲ: ದೇವೇಗೌಡ
ನೆರೆ ಸಂತ್ರಸ್ತರಿಗೆ ಇಡಿ ರಾಜ್ಯದಲ್ಲಿ ಸಂಘ ಸಂಸ್ಥೆಗಳು, ಸಾರ್ವಜನಿಕರು, ರಾಜ್ಯ ಸರಕಾರ ಸ್ಪಂದಿಸಿದೆ. ತಾತ್ಕಾಲಿಕ ಪರಿಹಾರವಾಗಿ ಈಗಾಗಲೇ 10 ಸಾವಿರ ನೀಡಲಾಗಿದೆ. ಮನೆ ಕಟ್ಟುವುದಕ್ಕೆ 1 ಲಕ್ಷ ಕೊಟ್ಟಿದ್ದೇವೆ. ಹಿಂದಿನ ಸರಕಾರಕ್ಕೆ ನಮ್ಮ ಸರಕಾರ ಹೋಲಿಸುವುದಕ್ಕೆ ಹೋಗುವುದಿಲ್ಲ ಎಂದಿದ್ದಾರೆ.
ಬರ ಬಂದಾಗ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಮತ್ತವರ ಸಚಿವರು ಜಿಲ್ಲೆಗಳಿಗೆ ಹೋಗಲಿಲ್ಲ, ರೈತರಿಗೆ ಧೈರ್ಯ ತುಂಬಲಿಲ್ಲ. ಮೈತ್ರಿ ಸರಕಾರ ಬಂದಾಗಲೂ ಹೇಳಿದೆ ಬರಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ, ದೇವೇಗೌಡರು ಒಟ್ಟಿಗೆ ಹೋಗಿ ರೈತರಿಗೆ ಧೈರ್ಯ ಬರುತ್ತೆ ಎಂದಾಗಲೂ ಹೋಗಲಿಲ್ಲ. ಕಾಂಗ್ರೆಸ್ ಸರಕಾರ ಯಾಕೆ ಸತ್ತೋಯಿತು ಅಂದ್ರೆ ರೈತರ ಸಂಕಷ್ಟಗಳಿಗೆ ಸ್ಪಂದಿಸದ ಕಾರಣಕ್ಕೆ ಸರಕಾರ ಸತ್ತು ಹೋಯ್ತು ಎಂದಿದ್ದಾರೆ.
ಪ್ರಧಾನಿ ಮೋದಿಯೊಂದಿಗೆ ಕೈ ಜೋಡಿಸುತ್ತಾರಾ ಎಚ್.ಡಿ.ಕುಮಾರಸ್ವಾಮಿ?
ನಿರೀಕ್ಷೆಗೆ ಮೀರಿ ಸರ್ಕಾರ ಕೆಲಸ ಮಾಡ್ತಿದೆ:
ಈಗ ರಾಜ್ಯ ಸರಕಾರ ನಿರೀಕ್ಷೆಗೆ ಮೀರಿ ಕೆಲಸ ಮಾಡುತ್ತಿದೆ..ಜನರ ಆಶೀರ್ವಾದ ಇದೆ. ಕಾಂಗ್ರೆಸ್ ಸರಕಾರ ಸತ್ತು ಹೋಗಿರುವುದನ್ನು ಈಗ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರಕ್ಕೆ ಮತ್ತೆ ಜೀವ ಬರುವ ಪ್ರಶ್ನೆ ಇಲ್ಲ, ಅವರು ಮತ್ತೆ ಮುಖ್ಯಮಂತ್ರಿ ಆಗುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸರಕಾರ ಬೀಳುವುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಹೇಳಿಕೆ ಸ್ವಾಗತಿಸುತ್ತೇನೆ. ನಮ್ಮದೇ ಪೂರ್ಣ ಬಹುಮತದ ಸರಕಾರ ಇರುವಾಗ ಅಂತಹ ಅವಕಾಶ ಇರುವುದಿಲ್ಲ. ಅಲ್ಲಿಯವರಿಗೆ ಹೋಗುವ ಪ್ರಶ್ನೆ ಬರುವುದಿಲ್ಲ, ಅವರ ರಕ್ಷಣೆ ಅವಶ್ಯಕತೆ ಇಲ್ಲ. ನಾಳೆ ಉಪ ಚುನಾವಣೆಯಲ್ಲಿ 15 ಕ್ಕೆ 15 ಸ್ಥಾನ ಬಿಜೆಪಿ ಗಳಿಸಲಿದೆ ಎಂದಿದ್ದಾರೆ.