'ಹಿಂದೂ-ಮುಸ್ಲಿಮರು ಹಾಲು-ನೀರಿನಂತೆ ಬೆರೆತು ಜೀವನ ಮಾಡಬೇಕು'

By Web DeskFirst Published Nov 9, 2019, 3:00 PM IST
Highlights

ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಎಲ್ಲರೂ ಸುಪ್ರೀಂ ಕೋರ್ಟ್ ತೀರ್ಪು ಮಾನ್ಯ ಮಾಡಬೇಕು| ಸುಪ್ರೀಂ ತೀರ್ಪಿನಿಂದ ಜನಸಾಮಾನ್ಯರು ಚಂಚಲವಾಗದೇ ಸಾಮರಸ್ಯದಿಂದ ಬದುಕಬೇಕು| ಎರಡು ಧರ್ಮದವರು ಸಹೋದರರಂತೆ ಬದುಕಬೇಕು| ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ನಮ್ಮ ನಮ್ಮ ಕರ್ತವ್ಯಗಳನ್ನು ಮಾಡಿಕೊಂಡು ಹೋಗಬೇಕು| 

ಶಿವಮೊಗ್ಗ(ನ.9): ಹಿಂದೂಗಳ ಆರಾಧ್ಯ ದೈವ ರಾಮಜನ್ಮ ಭೂಮಿ ಹಿಂದೂಗಳಿಗೆ ಸೇರಬೇಕೆಂದು ತೀರ್ಪು ಬಂದಿರುವುದು ಸ್ತುತ್ಯಾರ್ಹ. ಹಾಗೆಯೇ ಇಸ್ಲಾಂ ಧರ್ಮಕ್ಕೂ ಮಾನ್ಯ ಮಾಡಿ ಮಸೀದಿ ನಿರ್ಮಾಣ ಕಾರ್ಯಕ್ಕೆ ಪ್ರತ್ಯೇಕ ಜಮೀನು ನೀಡಿದ್ದು ಕೂಡ ನ್ಯಾಯ ಸಮ್ಮತವಾದ ತೀರ್ಪು ಆಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ. 

ವಿವಾದ ಇತ್ಯರ್ಥ ಬಯಸಿದ್ದೇವು, ಬಗೆಹರಿದಿದೆ: ಮೋಹನ್ ಭಾಗವತ್!

ಶನಿವಾರ ನಗರದಲ್ಲಿ ಮಾತನಾಡಿದ ಅವರು, ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಎಲ್ಲರೂ ಸುಪ್ರೀಂ ಕೋರ್ಟ್ ತೀರ್ಪು ಮಾನ್ಯ ಮಾಡಬೇಕು. ನಾವು ತಿನ್ನುವ ಅನ್ನ, ಹಣ್ಣು, ತರಕಾರಿ ಯಾರು ಬೆಳೆಸಿದ್ದು ಎಂದು ಕೇಳೋದಿಲ್ಲ. ಅಂತೆಯೇ ಹಿಂದೂ-ಮುಸ್ಲಿಮರು ಹಾಲು-ನೀರಿನಂತೆ ಬೆರೆತು ಜೀವನ ಮಾಡಬೇಕು ಎಂದು ಹೇಳಿದ್ದಾರೆ. 

ಅಯೋಧ್ಯೆ ತೀರ್ಪು: ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಚಿಂತನೆ

ಸುಪ್ರೀಂ ನೀಡಿದ ತೀರ್ಪಿನಿಂದ ಜನಸಾಮಾನ್ಯರು ಚಂಚಲವಾಗದೇ ಸಾಮರಸ್ಯದಿಂದ ಬದುಕಬೇಕು. ಎರಡು ಧರ್ಮದವರು ಸಹೋದರರಂತೆ ಬದುಕಬೇಕು. ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ನಮ್ಮ ನಮ್ಮ ಕರ್ತವ್ಯಗಳನ್ನು ಮಾಡಿಕೊಂಡು ಹೋಗಬೇಕೆಂದು ಸರ್ವರಲ್ಲಿ ಕೋರುತ್ತೇನೆ ಎಂದು ಹೇಳಿದ್ದಾರೆ. 

ರಾಮ ಮಂದಿರ ಕಟ್ಟಲು ಮುಸ್ಲಿಂ ಸ್ವಯಂ ಸೇವಕರಾಗಿ ನಾವೂ ಬರ್ತೀವಿ: ರೋಷನ್ ಬೇಗ್

ದೇಶ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಎಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಮೂಲಕ ವಿವಾದಿತ ಜಾಗಕ್ಕ ಹೋರಾಡುತ್ತಿದ್ದ ಹಿಂದೂಗಳ ನಂಬಿಕೆಗೆ ಐತಿಹಾಸಿಕ ಜಯ ಲಭಿಸಿದೆ. ಆದರೆ, ಬಾಬರಿ ಮಸೀದಿ ಪ್ರತ್ಯೇಕ ಜಾಗವನ್ನು ಕಲ್ಪಿಸಲು ಕೋರ್ಟ್ ಸರಕಾರಕ್ಕೆ ಸೋಚಿಸಿದೆ. ವಿವಾದಿತ ಸ್ಥಳದಲ್ಲಿ ರಾಮನ ಜನನ ಸತ್ಯ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಾತ್ಮಕ 

click me!