ಅಯೋಧ್ಯೆ ತೀರ್ಪು : ರಾಮ ಮಂದಿರಕ್ಕೆ ತೆರಳಿ ಜಪ ಮಾಡಿದ ಈಶ್ವರಪ್ಪ

By Web DeskFirst Published Nov 9, 2019, 1:39 PM IST
Highlights

ಅಯೋಧ್ಯೆ ಐತಿಹಾಸಿಕ ತೀರ್ಪು ಪ್ರಕಟವಾಗಿದೆ. ಹಲವು ವರ್ಷಗಳ ವಿವಾದಕ್ಕೆ ಸುಪ್ರೀಂ ಕೋರ್ಟ್ ಅಂತ್ಯಹಾಡಿದ್ದು, ಇಡೀ ಭಾರತ ದೇಶ ತೀರ್ಪು ಸ್ವಾಗತಿಸಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. 

ಶಿವಮೊಗ್ಗ [ನ.09]:  ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ತೀರ್ಪಾಗಿದ್ದು ಇದನ್ನ ಇಡೀ ಭಾರತ ದೇಶ ಸ್ವಾಗತಿಸಲಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ  ಜಪ ಮಾಡಿದ್ದು ನಾನು ಈ ತೀರ್ಪನ್ನ ಸ್ವಾಗತಿಸುತ್ತಿದ್ದೇನೆ ಎಂದರು.

ಈ ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ,ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡ ಹಾಗೂ ಆರ್ ಎಸ್ ಎಸ್ ನ ಸರಸಂಚಾಲಕ ಮೋಹನ್ ಭಾಗವತ್ ಏನು ತೀರ್ಮಾನಿಸುತ್ತಾರೋ ಅದರಂತೆ ನಾವು ನಡೆದುಕೊಳ್ಳಲಿದ್ದೇವೆ ಎಂದರು.

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!...

ಇದೇ ವೇಳೆ ಅಯೋಧ್ಯ ತೀರ್ಪಿನ ಹಿನ್ನಲೆಯಲ್ಲಿ ಶಿವಮೊಗ್ಗದ ಪ್ರಸಿದ್ಧ ಕೋಟೆ ಸೀತಾರಾಮಾಂಜನೇಯ  ಸ್ವಾಮಿ ದೇವಾಲಯದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ರಾಮನ ಜಪ ಮಾಡಿದರು. ರಾಮ ರಾಮ ರಾಮ ಎನ್ನೀರಿ ಎಂದು ಭಜನೆ ಹಾಡುತ್ತಾ ರಾಮ ಧ್ಯಾನ ಮಾಡಿದ ಸಚಿವರು ಸುಮಾರು 10 ನಿಮಿಷಗಳ ಕಾಲ ಭಜನೆಯಲ್ಲಿ ಪಾಲ್ಗೊಂಡರು. 

ಅಯೋಧ್ಯೆ ತೀರ್ಪಿನ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಆಯೋಜನೆಗೊಂಡಿದ್ದ ರಾಮ ಜಪದ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ತೀರ್ಪು ಪ್ರಕಟವಾಗುತ್ತಿದ್ದಂತೆ ದೇಗುಲಕ್ಕೆ ದಾವಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಭಕ್ತಿ ಪರವಶರಾಗಿ ರಾಮನ ಜಪದಲ್ಲಿ ಪಾಲ್ಗೊಂಡರು. 

ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ  ವಹಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ.

click me!