ದಿನವೊಂದಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ: ಬಾಹ್ಯಾಕಾಶದ ಕೌತುಕ ತೆರೆದಿಟ್ಟ ಸುನಿತಾ ವಿಲಿಯಮ್ಸ್​

By Suchethana D  |  First Published Nov 9, 2024, 6:36 PM IST

ಬಾಹ್ಯಾಕಾಶದಲ್ಲಿ ದಿನವೊಂದಕ್ಕೆ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತ ಸಂಭವಿಸುತ್ತದೆ.  ಬಾಹ್ಯಾಕಾಶದ ಕೌತುಕ ತೆರೆದಿಟ್ಟ ಸುನಿತಾ ವಿಲಿಯಮ್ಸ್​ ವಿಡಿಯೋ ಪುನಃ ವೈರಲ್​ ಆಗುತ್ತಿದೆ. 
 


ದಿನವೊಂದಕ್ಕೆ ಎಷ್ಟು ಬಾರಿ ಸೂರ್ಯಾಸ್ತ, ಸೂರ್ಯೋದಯ ಆಗತ್ತೆ ಎಂದು ಪ್ರಶ್ನಿಸಿದರೆ ಬಹುಶಃ ಎಲ್ಲರೂ ನಗುತ್ತಾರೆ. ಅಷ್ಟಕ್ಕೂ ಸೂರ್ಯೋದಯ, ಸೂರ್ಯಾಸ್ತ ಆಗುವುದರಿಂದಲೇ ಅದು ಒಂದು ದಿನ ಎನ್ನಿಸಿಕೊಳ್ಳುವುದೂ ನಿಜವೇ. ಆದರೆ ಪ್ರಕೃತಿಯ ಸೋಜಿಗ ಅದಲ್ಲ. ದಿನವೊಂದಕ್ಕೆ 16 ಬಾರಿ ಸೂರ್ಯಾಸ್ತ ಮತ್ತು ಸೂರ್ಯೋದಯ ಆಗುತ್ತದೆ ಎಂದರೆ ನಂಬುವಿರಾ? ನಂಬಲೇ ಬೇಕು. ಏಕೆಂದ್ರೆ ನಮ್ಮ ತಿಳಿವಳಿಕೆಗೆ ಬಾರದ ಎಷ್ಟೋ ವಿಷಯಗಳಿವೆ. ಅಷ್ಟಕ್ಕೂ ಇಷ್ಟೊಂದು ಬಾರಿ ಸೂರ್ಯ ಹುಟ್ಟಿ, ಮುಳುಗುವುದು ಭೂಮಿಯ ಮೇಲಲ್ಲ, ಬದಲಿಗೆ ಬಾಹ್ಯಾಕಾಶದಲ್ಲಿ.  ಸದ್ಯ ಬಾಹ್ಯಾಕಾಶದಲ್ಲಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹೇಳಿರುವ ಈ ಕೌತುಕದ ವಿಷಯ ಮತ್ತೆ ಸುದ್ದಿಯಾಗುತ್ತಿದೆ.

ಅಂದಹಾಗೆ, ಸುನೀತಾ ವಿಲಿಯಮ್ಸ್ ಅವರು ಈ ವಿಷಯವನ್ನು  2013ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಹೇಳಿದ್ದರು. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಸುನೀತಾ ಅವರನ್ನು ಸಮ್ಮಾನಿಸಿದಾಗ  ಬಾಹ್ಯಾಕಾಶದಲ್ಲಿನ  ತಮ್ಮ ಈ ಅನುಭವವನ್ನು ಅವರು ಹಂಚಿಕೊಂಡಿದ್ದರು. ಅದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ. ಈಗಲೂ ಅವರು  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ದಿನಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದಾರೆ. ಇವರಷ್ಟೇ ಅಲ್ಲದೇ ಗಗನಯಾತ್ರಿಗಳಿಗೆ ಇದು ಸಹಜ ವೀಕ್ಷಣೆ. ಪ್ರತಿಯೊಬ್ಬ  ಗಗನಯಾತ್ರಿಗಳೂ ಇದೇ ರೀತಿಯ ನೋಟವನ್ನು ನೋಡಬಲ್ಲರು.   

Latest Videos

undefined

ಮರಭೂಮಿಯಲ್ಲಿ ಹಿಮಪಾತ! ಹಿಂದೆಂದೂ ಕಂಡು ಕೇಳರಿಯದ ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಯ್ತು ಸೌದಿ... ವಿಡಿಯೋ ವೈರಲ್​

ಅಂದು ವಿಶ್ವವಿದ್ಯಾಲಯದಲ್ಲಿ ಸುನಿತಾ ವಿಲಿಯಮ್ಸ್​ ಮಾತನಾಡಿರುವ ಭಾಷಣದ ತುಣುಕುಗಳು ಈಗ ಸೋಷಿಯಲ್​ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ. ಅಂದು ಅವರು,  ಬಾಹ್ಯಾಕಾಶದ ಅನುಭವವನ್ನು ಹೇಳಿಕೊಳ್ಳುತ್ತಾ,  ಅತ್ಯಂತ ವೇಗವಾಗಿ ಚಲಿಸುವ ಬಾಹ್ಯಾಕಾಶ ನೌಕೆಯಲ್ಲಿ ಒಂದು ದಿನದಲ್ಲಿ 16 ಸೂರ್ಯೋದಯ ಮತ್ತು 16 ಸೂರ್ಯಾಸ್ತಗಳನ್ನು ನೋಡುವ ಅದೃಷ್ಟ ಸಿಕ್ಕಿತ್ತು ಎಂದಿದ್ದಾರೆ. ಅಂದಹಾಗೆ,  ಸುನಿತಾ ಅವರು ಸದ್ಯ  ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ.  ಅವರು ಪ್ರಯಾಣಿಸಿದ್ದ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಭೂಮಿಗೆ ಮರಳಲು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ, ಬರುವ ಫೆಬ್ರುವರಿ ವೇಳೆಗೆ ಅವರು ವಾಪಸಾಗುವ ನಿರೀಕ್ಷೆ ಇದೆ. ಆದರೆ ಅಲ್ಲಿ ಅವರ ಆರೋಗ್ಯ ಸ್ಥಿತಿಯೂ ಹದಗೆಡುತ್ತಿದೆ ಎಂದೂ ವರದಿಯಾಗುತ್ತಿದೆ. 
 
ಅಂದಹಾಗೆ ಒಂದು ದಿನಕ್ಕೆ ಇಷ್ಟು ಬಾರಿ ಸೂರ್ಯನ ಉದಯ ಮತ್ತು ಅಸ್ತದ ಕುರಿತು ವಿಜ್ಞಾನ ವಿಶ್ಲೇಷಣೆ ಮಾಡುವುದಾದರೆ, ಪ್ರತಿ ಗಂಟೆಗೆ ಸರಿಸುಮಾರು 28 ಸಾವಿರ ಕಿಲೋ ಮೀಟರ್​ ವೇಗದಲ್ಲಿ ಭೂಮಿಯನ್ನು ಸುತ್ತುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರತಿ 90 ನಿಮಿಷಗಳಿಗೊಮ್ಮೆ ಪೂರ್ಣ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ ಎನ್ನುವುದಾಗಿದೆ. ಆದ್ದರಿಂದ ಗಗನಯಾತ್ರಿಗಳು ಸುಮಾರು 45 ನಿಮಿಷಗಳಿಗೊಮ್ಮೆ ಸೂರ್ಯನ ಉದಯ-ಅಸ್ತ ನೋಡಲು ಸಾಧ್ಯವಾಗುತ್ತಿದೆ.   ಅಲ್ಲಿ, ದಿನವೊಂದಕ್ಕೆ  ಸುಮಾರು 12 ಗಂಟೆಗಳ ಬೆಳಕು ಮತ್ತು 12 ಗಂಟೆಗಳ ಕತ್ತಲೆಯಾಗಿರುತ್ತದೆ. ಅವರು ಪ್ರತಿ 45 ನಿಮಿಷಗಳ ಹಗಲು ಮತ್ತು 45 ನಿಮಿಷಗಳ ಕತ್ತಲೆಯನ್ನು ಅನುಭವಿಸುತ್ತಾರೆ. ಇದು ಭೂಮಿಯ ದಿನಚರಿಗೆ ಹೋಲಿಸಿದರೆ ದಿನದಲ್ಲಿ 16 ಬಾರಿ ಸಂಭವಿಸುತ್ತದೆ ಎಂದು ತಿಳಿದುಬಂದಿದೆ. ಗಗನಯಾತ್ರಿಗಳು, ಭೂಮಿಯಲ್ಲಿರುವ ತಮ್ಮ ತಂಡದೊಂದಿಗೆ ಸಂಪರ್ಕಿಸಲು ಪರಮಾಣು ಗಡಿಯಾರಗಳನ್ನು ಬಳಸುತ್ತಾರೆ. ಇದು ವಿಶೇಷವಾಗಿ ಭೂಮಿಯ ಕಕ್ಷೆಯನ್ನು ಮೀರಿದ ಕಾರ್ಯಾಚರಣೆಗಳಿಗೆ ಅತ್ಯಂತ ನಿಖರತೆವಾದ ಸಮಯವನ್ನು ತೋರಿಸುತ್ತದೆ.

ಹೆಣ್ಣನ್ನು ಸೆಳೆಯಲು ಹಣ್ಣುಗಳ ಅಲಂಕಾರ! ನೆಲ ಕ್ಲೀನ್‌ ಮಾಡಿ ಅದ್ಭುತ ನೃತ್ಯ- ಅಬ್ಬಾ ಇದೆಂಥ ವಿಸ್ಮಯ: ವಿಡಿಯೋ ವೈರಲ್

click me!