ಸ್ಪೇಸಲ್ಲೇ ಉಳಿದ ಸುನೀತಾ ವಿಲಯಮ್ಸ್, ಕೈ ತುಂಬಾ ಸಂಬಳ ಸಿಕ್ಕರೂ ಏನುಪಯೋಗ?

Published : Mar 04, 2025, 02:04 PM ISTUpdated : Mar 04, 2025, 02:15 PM IST
ಸ್ಪೇಸಲ್ಲೇ ಉಳಿದ ಸುನೀತಾ ವಿಲಯಮ್ಸ್, ಕೈ ತುಂಬಾ ಸಂಬಳ ಸಿಕ್ಕರೂ ಏನುಪಯೋಗ?

ಸಾರಾಂಶ

ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮಾರ್ಚ್ 12 ರಂದು ಕ್ರ್ಯೂ 10 ಉಡಾವಣೆಯ ನಂತರ ಭೂಮಿಗೆ ಮರಳಲಿದ್ದಾರೆ. ತಾಂತ್ರಿಕ ದೋಷದಿಂದಾಗಿ 8 ತಿಂಗಳಿಗಿಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. GS-15 ವರ್ಗದ ಗಗನಯಾತ್ರಿಯಾಗಿ, ಅವರ ವಾರ್ಷಿಕ ಆದಾಯ ಸುಮಾರು $152,258. ಆರೋಗ್ಯ ವಿಮೆ, ತರಬೇತಿ, ಮತ್ತು ಪ್ರಯಾಣ ಭತ್ಯೆಗಳಂತಹ ಸೌಲಭ್ಯಗಳನ್ನೂ ಪಡೆಯುತ್ತಾರೆ. ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 5 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ (NASA astronaut Sunita Williams) ಭೂಮಿ ಸ್ಪರ್ಶಿಸುವ ದಿನ ಹತ್ತಿರ ಬರ್ತಿದೆ. ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುವ ದಿನಾಂಕ ಫಿಕ್ಸ್ ಆಗಿದೆ. ಕೇವಲ 8 ದಿನಗಳ ಕೆಲಸಕ್ಕೆ ಬಾಹ್ಯಾಕಾಶಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ 8 ತಿಂಗಳಿಗಿಂತ ಹೆಚ್ಚು ಕಾಲ ಬಾಹ್ಯಾಕಾಶ (space)ದಲ್ಲಿ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಸುನೀತಾ ವಾಪಸ್ ಬರೋದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆಯಾದ್ರೂ ಸುನೀತಾ ಭೂಮಿಗೆ ಸುರಕ್ಷಿತವಾಗಿ ಹಿಂತಿರುಗಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.

ಸುನೀತಾ ವಿಲಿಯನ್ಸ್ ಸಂಬಳ (Sunita Williams salary) ಎಷ್ಟು? : ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾದ ನಾಸಾ, ಗಗನಯಾತ್ರಿಗಳಿಗೆ ಸೂಕ್ತ ತಾಣವಾಗಿದೆ. ಯುಎಸ್ ಮಾಧ್ಯಮ ವರದಿಗಳ ಪ್ರಕಾರ, ನಾಸಾ ಗಗನಯಾತ್ರಿಗಳು ಯುಎಸ್ ಸರ್ಕಾರದ ವೇತನ ನಿಯಮವನ್ನು ಆಧರಿಸಿ ಸಂಬಳವನ್ನು ಪಡೆಯುತ್ತಾರೆ. ಇದು ಶ್ರೇಣಿಗಳಲ್ಲಿ GS-13 ರಿಂದ GS-15 ರವರೆಗೆ ಇರುತ್ತೆ. ಅನುಭವಿ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ GS-15 ವರ್ಗದ ಅಡಿಯಲ್ಲಿ ಸಂಬಳವನ್ನು ಪಡೆಯುತ್ತಾರೆ. ನಾಸಾ ದಾಖಲೆಗಳ ಪ್ರಕಾರ, ಸುನೀತಾ ವಿಲಿಯಮ್ಸ್ ವಾರ್ಷಿಕ ಆದಾಯ ಸುಮಾರು 152,258.00 ಡಾಲರ್ ಅಂದ್ರೆ 12,638,434 ರೂಪಾಯಿ. ಈ ಮೊತ್ತವನ್ನು ಅವರ ಬಾಹ್ಯಾಕಾಶ ಪ್ರಯಾಣ ಮತ್ತು ತರಬೇತಿಯಂತಹ ಕಷ್ಟಕರ ಕಾರ್ಯಗಳಿಗಾಗಿ ನೀಡಲಾಗುತ್ತದೆ. 

ಭೂಮಿಗೆ ಮರಳುತ್ತಿದ್ದಾರೆ ಸುನಿತಾ ವಿಲಿಯಮ್ಸ್, ದಿನಾಂಕ, ಲ್ಯಾಂಡಿಂಗ್ ಮಾಹಿತಿ ಬಹಿರಂಗ

ಸಂಬಳದ ಜೊತೆ ಸಿಗುತ್ತೆ ಈ ಎಲ್ಲ ಸೌಲಭ್ಯ : ಸುನೀತಾ ವಿಲಿಯಮ್ಸ್ ಸೇರಿದಂತೆ ಅನುಭವಿ ಗಗನಯಾತ್ರಿಗಳಿಗೆ ಸಂಬಳದ ಜೊತೆ ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ. ನಾಸಾ, ಗಗನಯಾತ್ರಿಗಳಿಗೆ ಸಮಗ್ರ ಆರೋಗ್ಯ ವಿಮೆ, ನಿರ್ದಿಷ್ಟ ಕಾರ್ಯಗಳಿಗೆ ಸುಧಾರಿತ ತರಬೇತಿ, ಮಾನಸಿಕ ಬೆಂಬಲ ಮತ್ತು ಪ್ರಯಾಣ ಭತ್ಯೆಗಳಂತಹ ಸೌಲಭ್ಯಗಳನ್ನು ಒದಗಿಸುತ್ತದೆ.

ಸುನೀತಾ ವಿಲಿಯಮ್ಸ್ ನಿವ್ವಳ ಆಸ್ತಿ ಮೌಲ್ಯ ಎಷ್ಟು? : ಸುನೀತಾ ವಿಲಿಯಮ್ಸ್ ಮಾಜಿ ನೌಕಾ ಅಧಿಕಾರಿ ಮತ್ತು ಉನ್ನತ ಗೌರವ ಪಡೆದ ಗಗನಯಾತ್ರಿ. ನಾಸಾ ಮತ್ತು ಯುಎಸ್ ಮಿಲಿಟರಿಯೊಂದಿಗೆ ಗಮನಾರ್ಹ ವೃತ್ತಿಜೀವನವನ್ನು ಹೊಂದಿದ್ದಾರೆ. ಒಂದು ಸಂಸ್ಥೆಯ ಪ್ರಕಾರ, ಭಾರತೀಯ-ಅಮೆರಿಕನ್ ಗಗನಯಾತ್ರಿಯ ಅಂದಾಜು ನಿವ್ವಳ ಆಸ್ತಿ  ಮೌಲ್ಯ 5 ಮಿಲಿಯನ್ ಡಾಲರ್ ಅಂದ್ರೆ ಸುಮಾರು 41 ಕೋಟಿ  ಎಂದು ಅಂದಾಜಿಸಲಾಗಿದೆ.

ಸದ್ಯ ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ : ಬೋಯಿಂಗ್‌ನ ಸ್ಟಾರ್‌ಲೈನರ್ ನೌಕೆಯಲ್ಲಿ 2024 ಜೂನ್ 5 ರಂದು ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದರು.  ಕೇವಲ 8 ದಿನಗಳ ಕಾರ್ಯಾಚರಣೆಗಾಗಿ ತೆರಳಿದ್ದ ಅವರು ತಾಂತ್ರಿಕ ದೋಷದಿಂದ ಅಲ್ಲೇ ತಂಗುವಂತಾಯ್ತು. 8 ತಿಂಗಳಿಂದ ಭೂಮಿಗೆ ಬರದ ಸುನೀತಾ ವಿಲಿಯಮ್ಸ್ ತೂಕ ಕಡಿಮೆಯಾಗಿದೆ ಎನ್ನುವ ಸುದ್ದಿ ಕೂಡ ಇದೆ. ನಾಸಾ, ಅವರನ್ನು ವಾಪಸ್ ಕರೆತರಲು ನಿರಂತರ ಪ್ರಯತ್ನ ನಡೆಸುತ್ತಿದೆ. 

AI ಮೇಲೆ ಗೂಗಲ್ ಭಾರಿ ಹೂಡಿಕೆ, ಉದ್ಯೋಗಿಗಳ ಭವಿಷ್ಯಕ್ಕಿದೆಯಾ ಆತಂಕ?

 ವರದಿಗಳ ಪ್ರಕಾರ, ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅವರ ವಾಪಸಾತಿ ಮೊದಲೇ ನಿಗದಿಯಾಗಿತ್ತು. ಆದರೆ ಕಾರ್ಯಾಚರಣೆಯ ಮರುಹೊಂದಿಸುವಿಕೆ ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ವಿಳಂಬವಾಗಿದೆ. ಮಾರ್ಚ್ 12ರಂದು ಸಂಜೆ 7:48 ಕ್ಕೆ ಕ್ರ್ಯೂ 10 ಉಡಾವಣೆಯಾಗಲಿದೆ. ಒಂದು ವಾರದ ನಂತ್ರ ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಸ್ ಆಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕ್ರ್ಯೂ 10ನಲ್ಲಿ ನಾಲ್ವರು ಗಗನಯಾತ್ರಿಗಳು ಪ್ರಯಾಣ ಬೆಳೆಸಲಿದ್ದು, ತಂಡದಲ್ಲಿ ಆನ್ ಮೆಕ್‌ಕ್ಲೇನ್,  ನಿಕೋಲ್ ಅಯರ್ಸ್, ರೋಸ್ಕೋಸ್ಮೋಸ್ ಗಗನಯಾತ್ರಿ ಕಿರಿಲ್ ಪೆಸ್ಕೋವ್ ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ಟಕುಯಾ ಒನಿಶಿ ಸೇರಿದ್ದಾರೆ.  

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ