
ವಾಶಿಂಗ್ಟನ್(ಮಾ.2) ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲೇ ಉಳಿದುಕೊಂಡಿದ್ದಾರೆ. ನೌಕೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಇಬ್ಬರು ಗನನಯಾತ್ರಿಗಳು ಬಾಹ್ಯಾಕಾಶದಲ್ಲೇ ಕಾಲಕಳೆಯುವಂತಾಗಿದೆ. ಇಬ್ಬರನ್ನು ಕರೆತರವು ನಾಸಾದ ಹಲವು ಪ್ರಯತ್ನಕ್ಕೆ ಆರಂಭದಲ್ಲೇ ಹಿನ್ನಡೆಯಾಗಿತ್ತು. ಕಳೆದ 8 ತಿಂಗಳಿನಿಂದ ಅನಿವಾರ್ಯವಾಗಿ ಬಾಹ್ಯಾಕಾಶದಲ್ಲಿ ಉಳಿದುಕೊಂಡಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಮರಳವು ದಿನಾಂಕ ಖಚಚಿತವಾಗಿದೆ.ಈ ಕುರಿತು ನಾಸಾ ಅಧಿಕೃತವಾಗಿ ಘೋಷಣೆ ಮಾಡಿದೆ.
ಮಾರ್ಚ್ 12ರಂದು ಕ್ರ್ಯೂ 10 ಉಡಾವಣೆಯಾಗಲಿದೆ. ಈ ನೌಕೆಯಲ್ಲಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಮರಳುತ್ತಿದ್ದಾರೆ. ಅಂದರೆ ಮಾರ್ಚ್ 19 ರಂದು ಇಬ್ಬರು ಗಗನಯಾತ್ರಿಗಳು ಭೂಮಿಗೆ ಮರಳಲಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸಿಹಿ ಸುದ್ದಿ ಬಂದಿದ್ದು, ಇದೀಗ ತಯಾರಿಗಳು ಆರಂಭಗೊಂಡಿದೆ.
ಬಾಹ್ಯಾಕಾಶದಲ್ಲಿ 7 ತಿಂಗಳ ವಾಸ, ನಡೆಯೋದನ್ನೇ ಮರೆತುಹೋದ ಸುನೀತಾ ವಿಲಿಯಮ್ಸ್
ಬೋಯಿಂಗ್‌ನ ಸ್ಟಾರ್‌ಲೈನರ್ ನೌಕೆಯಲ್ಲಿ 2024 ಜೂನ್ 5 ರಂದು ಕೇವಲ 8 ದಿನಗಳ ಕಾರ್ಯಾಚರಣೆಗಾಗಿ ನಾಸಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ಆದರೆ ಸ್ಟಾರ್‌ಲೈನರ್ ನೌಕೆಯ ತಾಂತ್ರಿಕ ದೋಷದಿಂದಾಗಿ ವಾಪಸಾತಿ ಪ್ರಯಾಣವನ್ನು ಹಲವು ಬಾರಿ ಮುಂದೂಡಿದ್ದರಿಂದ ಸುನಿತಾ ಮತ್ತು ಬುಚ್ ಎಂಟು ತಿಂಗಳಿಂದ ISS ನಲ್ಲಿಯೇ ಇದ್ದಾರೆ. ಮಾರ್ಚ್ 19 ರಂದು ಸುದೀರ್ಘ ಕಾಯುವಿಕೆ ಮುಗಿದ ನಂತರ ಭೂಮಿಗೆ ಮರಳುವುದಾಗಿ ಬುಚ್ ಸಿಎನ್‌ಎನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಬ್ಬರನ್ನೂ ಸುರಕ್ಷಿತವಾಗಿ ಭೂಮಿಗೆ ಕರೆತರುವ ಜವಾಬ್ದಾರಿಯನ್ನು ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ಹೊತ್ತಿದೆ. ಇದಕ್ಕಾಗಿ ಕ್ರೂ-10 ಮಿಷನ್ ತಂಡದೊಂದಿಗೆ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಸ್ಪೇಸ್ ಎಕ್ಸ್ ಮಾರ್ಚ್ 12 ರಂದು ಉಡಾವಣೆ ಮಾಡಲಿದೆ.
ಆರು ತಿಂಗಳ ಹೊಸ ಕಾರ್ಯಾಚರಣೆಗಾಗಿ ನಾಸಾ ಕ್ರೂ-10 ಮಿಷನ್‌ನಲ್ಲಿ ನಾಲ್ವರು ಗಗನಯಾತ್ರಿಗಳನ್ನು ಕಳುಹಿಸುತ್ತಿದೆ. ನಾಸಾದ ಆನ್ ಮೆಕ್ಲೈನ್, ನಿಕೋಲ್ ಏಯರ್ಸ್, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ತಕುಯಾ ಒನಿಷಿ ಮತ್ತು ರೋಸ್ಕೋಸ್ಮೊಸ್‌ನ ಕಿರಿಲ್ ಪೆರ್ಸೊವ್ ಕ್ರೂ-10 ಮಿಷನ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಲಿದ್ದಾರೆ. ಇವರು ನಿಲ್ದಾಣಕ್ಕೆ ಬಂದ ನಂತರ ಒಂದು ವಾರಗಳ ಕಾಲ ಜವಾಬ್ದಾರಿಗಳನ್ನು ಹಸ್ತಾಂತರಿಸುವ ಸಮಯವಿರುತ್ತದೆ. ಪ್ರಸ್ತುತ ಸ್ಪೇಸ್ ಸ್ಟೇಷನ್‌ನ ಕಮಾಂಡರ್ ಆಗಿರುವ ಸುನಿತಾ ವಿಲಿಯಮ್ಸ್ ಕ್ರೂ-10 ಮಿಷನ್‌ನಲ್ಲಿ ಬರುವ ಹೊಸ ಕಮಾಂಡರ್‌ಗೆ ISS ನ ಜವಾಬ್ದಾರಿಯನ್ನು ಹಸ್ತಾಂತರಿಸುತ್ತಾರೆ. ಇದರ ನಂತರ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಡ್ರ್ಯಾಗನ್ ನೌಕೆಯಲ್ಲಿ ಮಾರ್ಚ್ 19 ರಂದು ಭೂಮಿಗೆ ಅನ್‌ಡಾಕ್ ಮಾಡುತ್ತಾರೆ.
ಇಂದು ಜೀವನದ ಅತ್ಯಂತ ಕಠಿಣ ಬಾಹ್ಯಾಕಾಶ ನಡಿಗೆಯಲ್ಲಿ ಭಾಗಿಯಾಗಲಿದ್ದಾರೆ ಸುನೀತಾ ವಿಲಿಯಮ್ಸ್!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.