ಚೆನ್ನೈನ ತಾಂಬರಂ ಆಗಸದಲ್ಲಿ ಕಂಡಿದ್ದು ಫ್ಲ್ಯಾಶ್‌ ಲೈಟೋ ಅಥವಾ ಹಾರುವ ತಟ್ಟೆಗಳೋ? ಶುರುವಾಯ್ತು ಚರ್ಚೆ

By Santosh Naik  |  First Published Sep 14, 2023, 3:04 PM IST

ಚೆನ್ನೈನ ತಾಂಬರಂ ಪ್ರದೇಶದ ಆಗಸದಲ್ಲಿ ವಿಸ್ಮಯಕಾರಿ ಬೆಳಕು ಕಾಣಿಸಿಕೊಂಡಿದ್ದು, ಸ್ಥಳೀಯರು ಅಚ್ಚರಿಗೆ ಒಳಗಾಗಿದ್ದಾರೆ. ಹೆಚ್ಚಿನವರು ಇದು ಹಾರುವ ತಟ್ಟೆಗಳು ಇರಬಹುದು ಎನ್ನುವ ಊಹಾಪೋಹಗಳನ್ನು ಹುಟ್ಟುಹಾಕಿದ್ದಾರೆ.
 


ಚೆನ್ನೈ (ಸೆ.14): ಹಾರುವ ತಟ್ಟೆಗಳು ಅಥವಾ ಫ್ಲೈಯಿಂಗ್‌ ಸಾಸರ್ಸ್‌ ಬಗ್ಗೆ ಈಗಲೂ ವಿಜ್ಞಾನಿಗಳಲ್ಲಿ ಜಿಜ್ಞಾಸೆ ಮುಂದುವರಿದಿದೆ. ಆದರೆ, ಬುಧವಾರ ರಾತ್ರಿ ಚೆನ್ನೈನ ತಾಂಬರಂ ಪ್ರದೇಶದ ಆಗಸದಲ್ಲಿ ಮೂಡಿದ ಕೆಲ ದೃಶ್ಯಗಳು ಮಾನವರಹಿತ ಫ್ಲೈಯಿಂಗ್‌ ಆಬ್ಜೆಕ್ಟ್‌ ಎನಿಸಿಕೊಂಡಿರುವ ಹಾರುವ ತಟ್ಟೆಗಳು ಇರಬಹುದು ಎನ್ನುವ ಅನುಮಾನ ಕಾಡಿದೆ. ಇದು ಸಾರ್ವಜನಿಕರನ್ನು ವಿಸ್ಮಯಗೊಳಿಸಿದೆ.  ಫ್ಲ್ಯಾಶ್‌ಲೈಟ್‌ನಂತೆ ಇದು ಕಾಣಿಸಿದರೂ ಅದು ಆಗಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಯಾಕೆಂದರೆ, ಬೆಳಕು ಬಹಳ ಪ್ರಖರವಾಗಿ ಕಾಣುತ್ತಿತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಈ ದೃಶ್ಯವನ್ನು ಕಂಡು ಅಚ್ಚರಿಪಟ್ಟ ಜನರು, ತಕ್ಷಣವೇ ಇದರ ಕ್ಷಣಗಳನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಮಾಡಿದ್ದಾರೆ. ಅವರು ಚಿತ್ರೀಕರಣ ಪ್ರಾರಂಭಿಸುತ್ತಿದ್ದಂತೆ, ಪ್ರಕಾಶಮಾನವಾದ ವಸ್ತುವು ನೇರವಾದ ಪಥದಲ್ಲಿ ಹಾದುಹೋಯಿತು, ಕಣ್ಣು ಮಿಟುಕಿಸುವುದರಲ್ಲಿ ಕಣ್ಮರೆಯಾಯಿತು. ರೆಕಾರ್ಡ್ ಮಾಡಿದ ವೀಡಿಯೊದ ದೃಢೀಕರಣವನ್ನು ಪರಿಶೀಲಿಸಲಾಗಿಲ್ಲ ಆದರೆ ಸ್ಥಳೀಯರಲ್ಲಿ ಕುತೂಹಲಗಳನ್ನು ಕೆರಳಿಸಿದೆ, ಅವರಲ್ಲಿ ಕೆಲವರು ಇದು ಹಾರುವ ತಟ್ಟೆಯಾಗಿರಬಹುದು ಎಂದು ಊಹೆ ಮಾಡಿದ್ದಾರೆ. ಆದಾಗ್ಯೂ, ಬಾಹ್ಯಾಕಾಶ ತಜ್ಞರು ಈ ಕಲ್ಪನೆಯನ್ನು ಅಲ್ಲಗಳೆಯುತ್ತಾರೆ, ಇದು ಹಾರುವ ತಟ್ಟೆಗಿಂತ ಹೆಚ್ಚಾಗಿ ಇದು ಫ್ಲ್ಯಾಶ್‌ಲೈಟ್‌ನ ಬೆಳಕಾಗಿರಬಹುದು ಎಂದು ಹೇಳಿದ್ದಾರೆ.

ಸಂಜೆ ಸುಮಾರು 7 ಗಂಟೆಯ ವೇಳೆಗೆ ಇದು ಸಂಭವಿಸಿದೆ. ಇದು ಬೇರೊಂದು ಲೋಕದ ಕ್ರಾಫ್ಟ್‌ ಆಗಿರಬಹುದೇ ಅಥವಾ ನಿಜವಾದ ಹಾರುವ ತಟ್ಟೆಗಳೇ ಎನ್ನುವ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಇಂತಹ ನಿಗೂಢತೆಗಳು ಮುಂದುವರಿದಿರುವಾಗ, ಅಮೆರಿಕದ ಮುಂದೆ ಕೂಡ ಹಾರುವ ತಟ್ಟೆಗಳ ಬಗ್ಗೆ ಜಗತ್ತು ಪ್ರಶ್ನೆ ಮಾಡಿದೆ.

ಏಲಿಯನ್ಸ್‌ಗಳಿವೆ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಬಾಹ್ಯಾಕಾಶ ಭದ್ರತಾ ಮುಖ್ಯಸ್ಥ!

ಕೆಲವು ವಾರಗಳ ಹಿಂದೆ, ಐಪಿಎಸ್‌ ಅಧಿಕಾರಿ ಪ್ರದೀಪ್ ವಿ ಫಿಲಿಪ್ ಅವರು ಚೆನ್ನೈನ ಪೂರ್ವ ಕರಾವಳಿ ರಸ್ತೆಯ ಮುತ್ತುಕಾಡು ಪ್ರದೇಶದಲ್ಲಿ ನಾಲ್ಕು ಹಾರುವ ತಟ್ಟೆಗಳನ್ನು ನೋಡಿದ್ದಾರೆಂದು ವರದಿ ಮಾಡಿದರು. ಈ ವಸ್ತುಗಳು ಡ್ರೋನ್‌ಗಳಿಗೆ ಯಾವುದೇ ಹೋಲಿಕೆಯನ್ನು ಹೊಂದಿಲ್ಲ ಮತ್ತು ಕೇವಲ 20 ರಿಂದ 25 ಸೆಕೆಂಡುಗಳಲ್ಲಿ ಕಣ್ಮರೆಯಾಯಿತು ಎಂದು ಅವರು ತಿಳಿಸಿದ್ದರು. ಸದ್ಯದ ಮಟ್ಟಿಗೆ ಇದು ಏನು ಎನ್ನುವುದರ ಬಗ್ಗೆ ಪ್ರಶ್ನೆಗಳು ಮುಂದುವರಿದಿದೆ. 

Latest Videos

undefined

ಆಸ್ಟ್ರೇಲಿಯಾದ ರಾತ್ರಿ ಆಕಾಶದಲ್ಲಿ ಕಂಡ ಚಂದ್ರಯಾನ-3, ಫೋಟೋ ವೈರಲ್‌!

click me!