ಮಹಿಳೆಯರ ತೊಡೆ ದಪ್ಪ ಇರಲು ಕಾರಣವೇನು? ನಿಜಕ್ಕೂ ಇಷ್ಟೊಂದು ಪ್ರಯೋಜನವಿದ್ಯಾ?

By Suchethana D  |  First Published Jun 23, 2024, 4:21 PM IST

ಮಹಿಳೆಯರ ತೊಡೆ ದಪ್ಪ ಇರಲು ಕಾರಣವೇನು? ನಿಜಕ್ಕೂ ಇಷ್ಟೊಂದು ಪ್ರಯೋಜನವಿದ್ಯಾ?  ಇಂಟರೆಸ್ಟಿಂಗ್​ ವಿಷಯವೊಂದು ಅಧ್ಯಯನದಿಂದ ಬಹಿರಂಗಗೊಂಡಿದೆ.
 


ದೇಹದಲ್ಲಿನ ಬೊಜ್ಜು ಅಧಿಕವಾದರೆ ಇನ್ನಿಲ್ಲದಂತೆ ಆರೋಗ್ಯದ ಸಮಸ್ಯೆಗಳು ಕಾಡುತ್ತವೆ. ಹಲವಾರು ರೋಗಗಳಿಗೆ ಇದೇ ದಾರಿಯಾಗುತ್ತದೆ. ಅದಕ್ಕಾಗಿಯೇ ಶರೀರಕ್ಕೆ ದಿನವೂ ಒಂದಿಷ್ಟು ವ್ಯಾಯಾಮಗಳ ಅಗತ್ಯ ಎಂದು ವೈದ್ಯರು ಹೇಳುತ್ತಲೇ ಇರುತ್ತಾರೆ. ಆದರೆ ಕುತೂಹಲದ ವಿಷಯ ಏನೆಂದರೆ, ಮಹಿಳೆಯರ ತೊಡೆಯಲ್ಲಿರುವ ಕೊಬ್ಬು ಅನಾರೋಗ್ಯದ ಸಂಕೇತವಾಗಿರದೇ  ಇದು ಆರೋಗ್ಯದ ಸಂಕೇತವಾಗಿದೆ! ಸಾಮಾನ್ಯವಾಗಿ ಮಹಿಳೆಯರ ತೊಡೆಗಳು ಪುರುಷರಿಗಿಂತಲೂ ದಪ್ಪ ಆಗಿರುತ್ತದೆ. ಬಹುತೇಕ ಮಹಿಳೆಯರಲ್ಲಿ ಇದನ್ನು ನೋಡಬಹುದು. ಆದರೆ ಇದು ದೈವದತ್ತವಾದದ್ದು ಎನ್ನುವ ಕುತೂಹಲ ಅಂಶ   ಬೆಳಕಿಗೆ ಬಂದಿದೆ.  ಇದರ ಕುರಿತು ನಡೆಸಿರುವ ಅಧ್ಯಯನದ ಪ್ರಕಾರ ದಪ್ಪ ತೊಡೆಯನ್ನು ಹೊಂದಿದವರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ ಎನ್ನುವುದು ಸಾಬೀತಾಗಿದೆ.  

ಮಹಿಳೆಯರು ಮತ್ತು ಪುರುಷರ ಕೊಬ್ಬಿನ ವಿತರಣೆಯ ಮಾದರಿ (fat distribution pattern) ಬದಲಾಗಿವೆ. ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಪುರುಷರು ಎಂಡ್ರಾಯ್ಡ್​ ಪ್ಯಾಟರ್ನ್​ ಮತ್ತು ಮಹಿಳೆಯರು ಜಿನಾಯ್ಡ್​ ಪ್ಯಾಟರ್ನ್ ಹೊಂದಿರುತ್ತಾರೆ. ಇದನ್ನು ಕಂಟ್ರೋಲ್​ ಮಾಡಲು ಹೋಗಬಾರದು. ಏಕೆಂದರೆ ಇದು ಮಹಿಳೆಯರು ತಾಯಿಯಾಗುವ ಪ್ರಕ್ರಿಯೆಯಿಂದ  ಹಿಡಿದು ಮಹಿಳೆಯರ ಶರೀರದ ಮಾದರಿಗೆ ಅನುಗುಣವಾಗಿ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಮಹಿಳೆಯರಲ್ಲಿ ಸಹಜವಾಗಿ ಆಸ್ಟ್ರೋಜನ್ (astrogen) ಪ್ರಮಾಣ ಜಾಸ್ತಿ ಇರುತ್ತದೆ. ಇದರಿಂದ ತೊಡೆಗಳು ದಪ್ಪವಾಗಿ ಇರಲು ಕಾರಣವಾಗಿದೆ. ಆಸ್ಟ್ರೋಜನ್ ಮಹಿಳೆಯರಲ್ಲಿ ಮುಟ್ಟು ಉಂಟು ಮಾಡಲು, ಸ್ತನಗಳ ಬೆಳವಣಿಗೆಗೆ ಸಹಾಯವಾಗಲಿದೆ. ಅಷ್ಟೇ ಅಲ್ಲದೇ ಗರ್ಭಿಣಿಯಾಗಲು ಕೂಡ ಇದು ನೆರವಾಗಲಿದೆ. ಮಾಸಿಕ ಋತುಸ್ರಾವದಲ್ಲಿ ಸಮಲೋತನ ಕಾಪಾಡಿಕೊಳ್ಳುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಇವೆಲ್ಲಾ ಕಾರಣಗಳಿಂದ ಮಹಿಳೆಯರಲ್ಲಿ ನೈಸರ್ಗಿಕದತ್ತವಾಗಿ ತೊಡೆಗಳು ದಪ್ಪ ಇರುತ್ತವೆ. ಆದ್ದರಿಂದ ಮಹಿಳೆಯರು ದಪ್ಪ ತೊಡೆ ಇದ್ದರೆ ಅದನ್ನು ವರದಾನ ಎಂದುಕೊಳ್ಳಬೇಕು.  ಆದರೆ ಬೊಜ್ಜು ಬೆಳೆದರೆ ಮಾತ್ರ ಅದು ಅಪಾಯಕಾರಿಯಾಗುತ್ತದೆ. 

Latest Videos

undefined

ಇನ್ಮುಂದೆ ಕತ್ತಲು ಕಡಿಮೆ, ಹಗಲು ಹೆಚ್ಚಂತೆ: ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ!

ಇತ್ತೀಚೆಗೆ, ರಟ್ಜರ್ಸ್ ನಾರ್ತ್ ಅಮೆರಿಕನ್ ಡಿಸೀಸ್ ಇಂಟರ್​ವೆನ್ಷನ್​ ಅಧ್ಯಯನ ನಡೆಸಿತ್ತು. ಅದರಲ್ಲಿ ಕೂಡ ಇದನ್ನೇ ಹೇಳಲಾಗಿದೆ.  ತೊಡೆಯ ಭಾಗದಲ್ಲಿ ಅಧಿಕ ಕೊಬ್ಬನ್ನು ಹೊಂದಿರುವವರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯು ಕಡಿಮೆ ಪ್ರಮಾಣದಲ್ಲಿ ಇರುತ್ತದೆ.  ಈ ಅಧ್ಯಯನಕ್ಕಾಗಿ  ಆರು ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.  ಮೂರು ವಿಧದ ಅಧಿಕ ರಕ್ತದೊತ್ತಡವನ್ನು ಪರೀಕ್ಷಿಸಲಾಗಿತ್ತು. ಇವರೆಲ್ಲರೂ ತ್ತು 60 ವರ್ಷ ವಯೋಮಿತಿಗಿಂತ ಕೆಳಗಿನವರಾಗಿದ್ದರು. ಅವರಲ್ಲಿ ಅಧಿಕ ರಕ್ತದೊತ್ತಡ ಇರುವವರನ್ನು ಹಾಗೂ ಕಡಿಮೆ ರಕ್ತದೊತ್ತಡ ಇರುವವರು ಯಾರು? ಎನ್ನುವುದನ್ನು ಸಹ ಪರೀಕ್ಷಿಸಲಾಯಿತು. ನಂತರ ಅವರ ದೇಹದಲ್ಲಿ ಕೊಬ್ಬಿನ ಪ್ರಮಾಣ ಹಾಗೂ ಅಂಗಾಂಗಗಳ ಪರೀಕ್ಷೆಯನ್ನು ನಡೆಸಲಾಯಿತು.

ಇದರ ಪರೀಕ್ಷೆ ನಡೆಸಲು  ತೊಡೆಯಲ್ಲಿರುವ ಕೊಬ್ಬುಗಳನ್ನು ಅಳೆಯಲು ಎಕ್ಸರೆ ಸ್ಕ್ಯಾನ್​ ಬಳಸಲಾಗಿತ್ತು.  ಆಗ ತೊಡೆಯ ಭಾಗದಲ್ಲಿ ಕಡಿಮೆ ಪ್ರಮಾಣ ಇರುವವರಿಗಿಂತ ಅಧಿಕ ಕೊಬ್ಬನ್ನು ಹೊಂದಿದವರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಶೇ.61ರಷ್ಟು ಕಡಿಮೆ ಸಾಧ್ಯತೆಗಳಿವೆ ಎನ್ನುವುದು ತಿಳಿದು ಬಂದಿದೆ. ತೊಡೆಯಲ್ಲಿ ಅಧಿಕ ಕೊಬ್ಬನ್ನು ಹೊಂದಿದವರಲ್ಲಿ ಡಯಾಸ್ಟೋಲಿಕ್ ಅಧಿಕ ರಕ್ತದೊತ್ತಡ ಅಥವಾ ಸಿಸ್ಟೊಲಿಕ್ ಅಧಿಕ ರಕ್ತದೊತ್ತಡ ಸಮಸ್ಯೆ ಇರುವುದು ತೀರಾ ವಿರಳ ಎಂದು ವರದಿ ನೀಡಿದೆ. ಸೊಂಟದ ಸುತ್ತ ಇರುವ ಕೊಬ್ಬು ಹೃದಯಕ್ಕೆ ಹಾನಿಯನ್ನು ಉಂಟುಮಾಡುವುದು. ಆದರೆ ತೊಡೆಯಲ್ಲಿರುವ ಕೊಬ್ಬುಗಳು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುವುದು ಎಂದು ತಿಳಿಸಿದೆ.

ಅಭಿಮಾನಿಯ ಇಡೀ ಕುಟುಂಬ ದತ್ತು ಪಡೆದ ಮಹೇಶ್ ಬಾಬು! ನಿಜವಾದ ಹೀರೋ ಅಂದ್ರೆ ಇವ್ರೇ ಅಲ್ಲವೆ?

click me!