ಪ್ರೋಬಾ 3: ಕೃತಕ ಗ್ರಹಣ ನಿರ್ಮಾಣ, ಸೂರ್ಯ ರಹಸ್ಯ ಅನಾವರಣಕ್ಕೆ ಇಸ್ರೋ ಇಎಸ್ಎ ಜಂಟಿ ಪ್ರಯತ್ನ

By Asianet Kannada  |  First Published Jun 21, 2024, 4:15 PM IST

ಹಿಂದೂ ಸಂಸ್ಕೃತಿಯಲ್ಲಿ, ಗ್ರಹಣವೆಂದರೆ ಓರ್ವ ಅಸುರ ಸೂರ್ಯನನ್ನು ನುಂಗುವ ಪ್ರಕ್ರಿಯೆಯಾಗಿದೆ. ಚೀನೀ ಸಂಸ್ಕೃತಿಯಲ್ಲಿ ಗ್ರಹಣವೆಂದರೆ ಸೂರ್ಯನನ್ನು ಡ್ರ್ಯಾಗನ್ ನುಂಗುವುದು. ಇನ್ನು ನಾರ್ಸ್ ಪುರಾಣದ ಪ್ರಕಾರ ತೋಳ ಸೂರ್ಯ ಅಥವಾ ಚಂದ್ರರನ್ನು ನುಂಗುವದರಿಂದ, ಗ್ರಹಣ ಉಂಟಾಗುತ್ತದೆ. 


ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಗ್ರಹಣಗಳ ಸುತ್ತಲಿನ ಮೂಢನಂಬಿಕೆಗಳು: ಜನರಲ್ಲಿ ಗ್ರಹಣಗಳೆಂದರೆ ಸ್ವಾಭಾವಿಕವಾಗಿ ಸಂಭವಿಸುವ ಖಗೋಳಶಾಸ್ತ್ರದ ವಿದ್ಯಮಾನಗಳೆಂಬ ಅರಿವು ಮೂಡುವ ಮುನ್ನ, ಬಹಳಷ್ಟು ಸಂಸ್ಕೃತಿಗಳು ಗ್ರಹಣದ ಕುರಿತು ತಮ್ಮದೇ ಆದ ನಂಬಿಕೆಗಳು, ಕತೆಗಳು, ಮತ್ತು ವಿವರಣೆಗಳನ್ನು ಹೊಂದಿದ್ದವು. ಆಸಕ್ತಿಕರ ವಿಚಾರವೆಂದರೆ, ಇವುಗಳ ಪೈಕಿ ಹಲವಾರು ಕತೆಗಳಲ್ಲಿ, ಗ್ರಹಣವೆಂದರೆ ಪೌರಾಣಿಕ ಪಾತ್ರಗಳು ಸೂರ್ಯ ಅಥವಾ ಚಂದ್ರನನ್ನು ನುಂಗುತ್ತವೆ ಎಂಬ ವಿವರಣೆಗಳಿದ್ದವು. ಆದ್ದರಿಂದ ಜನರಲ್ಲಿ ಗ್ರಹಣಗಳೆಂದರೆ ಕೆಟ್ಟ ಶಕುನಗಳೆಂಬ ಭಾವನೆಗಳು ಮೂಡಿದ್ದವು.

Tap to resize

Latest Videos

undefined

ಉದಾಹರಣೆಗೆ, ಹಿಂದೂ ಸಂಸ್ಕೃತಿಯಲ್ಲಿ, ಗ್ರಹಣವೆಂದರೆ ಓರ್ವ ಅಸುರ ಸೂರ್ಯನನ್ನು ನುಂಗುವ ಪ್ರಕ್ರಿಯೆಯಾಗಿದೆ. ಚೀನೀ ಸಂಸ್ಕೃತಿಯಲ್ಲಿ ಗ್ರಹಣವೆಂದರೆ ಸೂರ್ಯನನ್ನು ಡ್ರ್ಯಾಗನ್ ನುಂಗುವುದು. ಇನ್ನು ನಾರ್ಸ್ ಪುರಾಣದ ಪ್ರಕಾರ ತೋಳ ಸೂರ್ಯ ಅಥವಾ ಚಂದ್ರರನ್ನು ನುಂಗುವದರಿಂದ, ಗ್ರಹಣ ಉಂಟಾಗುತ್ತದೆ. ಇವೆಲ್ಲ ಕತೆಗಳನ್ನು ನಂಬಿ, ಗ್ರಹಣವೆಂದರೆ ಭಯ ಹೊಂದಿರುವ ಜನರಿಗೆ ಕೃತಕವಾಗಿ ಗ್ರಹಣ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ವಿವರಿಸಿದರೆ, ಅವರ ಪ್ರತಿಕ್ರಿಯೆ ಹೇಗಿರಬಹುದು ಊಹಿಸಿ! ವಾಸ್ತವವಾಗಿ, ಈಗ ಅಂತಹ ಒಂದು ಪ್ರಯತ್ನ ರೂಪುಗೊಳ್ಳುತ್ತಿದೆ.

ಟರ್ಬ್ಯುಲೆನ್ಸ್ ದುರಂತ: ಸಿಂಗಾಪುರ್ ಏರ್‌ಲೈನ್ಸ್ ಘಟನೆ ಮತ್ತು ವಿಮಾನಯಾನದ ಭವಿಷ್ಯ

ಪ್ರೋಬಾ-3: ಕೃತಕ ಗ್ರಹಣ ನಿರ್ಮಾಣ ಯೋಜನೆ: ಈ ಚಳಿಗಾಲದಲ್ಲಿ (ಸೆಪ್ಟೆಂಬರ್‌ನಿಂದ ನವೆಂಬರ್ ನಡುವೆ), ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಒಂದು ಅಸಾಧಾರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಪ್ರೋಬಾ-3 ಎಂಬ ಹೆಸರಿನ ಈ ಯೋಜನೆ, ಜಗತ್ತಿನ ಮೊತ್ತಮೊದಲ ಕೃತಕ ಗ್ರಹಣ ನಿರ್ಮಿಸುವ ಗುರಿ ಹೊಂದಿದೆ. ಈ ಯೋಜನೆ ಜೊತೆಯಾಗಿ ಕಾರ್ಯಾಚರಿಸುವ ಎರಡು ಉಪಗ್ರಹಗಳನ್ನು ಬಳಸಿಕೊಂಡು, ಬಾಹ್ಯಾಕಾಶದಲ್ಲಿ ದೀರ್ಘಕಾಲೀನ, ಕೃತಕ ಸೂರ್ಯ ಗ್ರಹಣವನ್ನು ಉಂಟುಮಾಡುತ್ತದೆ. ಇಂತಹ ಪ್ರಯತ್ನಗಳು ಇತಿಹಾಸದಲ್ಲಿ ಹಿಂದೆಂದೂ ನಡೆದೇ ಇರಲಿಲ್ಲ.

ಪ್ರೋಬಾ-3 ಯೋಜನೆ ಎರಡು ಉಪಗ್ರಹಗಳನ್ನು ಹೊಂದಿದ್ದು, ಅವುಗಳು ಒಂದಕ್ಕೊಂದು ಅತ್ಯಂತ ಸನಿಹದ ರಚನೆಯಲ್ಲಿ ಹಾರಾಟ ನಡೆಸುತ್ತವೆ. ಇವೆರಡೂ ಉಪಗ್ರಹಗಳ ನಡುವಿನ ಅಂತರ ನಿರಂತರವಾಗಿ 144 ಮೀಟರ್ ಆಗಿರುತ್ತದೆ. ಈ ರಚನೆಯಲ್ಲಿ, ಒಂದು ಉಪಗ್ರಹದ ನೆರಳು ಇನ್ನೊಂದು ಉಪಗ್ರಹದ ಮೇಲೆ ಬೀಳುವ ಮೂಲಕ, ಎರಡನೇ ಉಪಗ್ರಹಕ್ಕೆ ಕೃತಕ ಸೂರ್ಯಗ್ರಹಣ ಉಂಟುಮಾಡುತ್ತದೆ. ಆದರೆ, ಇಂತಹ ಕೃತಕ ಗ್ರಹಣ ನಿರ್ಮಾಣದಿಂದ ಭೂಮಿಯ ಮೇಲೆ ಏನಾದರೂ ಪರಿಣಾಮ ಬೀರಬಹುದೇ, ನಾವು ಭೂಮಿಯ ಮೇಲೆಯೂ ಸ್ವಾಭಾವಿಕವಾಗಿ ಘಟಿಸುವ ಗ್ರಹಣದಂತೆ ಇದೂ ಗೋಚರಿಸಬಹುದೇ ಎಂದು ನೀವು ಆಲೋಚಿಸುತ್ತಿದ್ದರೆ, ಅಂತಹ ಯಾವುದೇ ವಿದ್ಯಮಾನ ನಿಮಗೆ ಗೋಚರಿಸುವುದಿಲ್ಲ.

ಸೂರ್ಯನ ಪ್ರಬಲ ಕಾಂತಿ: ಸೂರ್ಯ ಜಗತ್ತಿನ ಅತ್ಯಂತ ಗಮನ ಸೆಳೆಯುವ ಕಾಯವಾಗಿರುವುದರಿಂದ, ಸೂರ್ಯನ ಅಧ್ಯಯನ ನಡೆಸುವ ಈ ಯೋಜನೆ ಹೆಚ್ಚಿನ ಮಹತ್ವ ಹೊಂದಿದೆ. ಸೂರ್ಯನ ಪ್ರಬಲ ಕಿರಣಗಳು ಅತ್ಯಂತ ಶಕ್ತಿಶಾಲಿಯಾಗಿದ್ದು, ಅವುಗಳು ಬಾಕಿ ಎಲ್ಲವನ್ನೂ ತಡೆಗಟ್ಟಿ, ಕೆಲವೊಂದು ನಿರ್ದಿಷ್ಟ ರೀತಿಯ ವಿಕಿರಣಗಳನ್ನು ಗುರುತಿಸುವುದು ಕಷ್ಟಕರವಾಗುವಂತೆ ಮಾಡುತ್ತವೆ. ಹಿಂಭಾಗದಲ್ಲಿ ಕಾಡ್ಗಿಚ್ಚು ಉರಿಯುತ್ತಿರುವಾಗ, ಅದರ ಮುಂದೆ ಬೆಳಕು ಚಿಮ್ಮುವ ಮಿಂಚುಹುಳ ನಿಮ್ಮ ಕಣ್ಣಿಗೆ ಬೀಳಲು ಸಾಧ್ಯವೇ? ಮಿಂಚುಹುಳ ಒಂದು ಸಣ್ಣದಾದ, ಜೈವಿಕ ಪ್ರಕಾಶ ಹೊಂದಿರುವ, ಬೆಳಕು ಹೊಮ್ಮಿಸುವ ಜೀವಿಯಾಗಿದ್ದು, ಗಾಢ ಕತ್ತಲೆಯಲ್ಲಿ ಮಾತ್ರವೇ ಎದ್ದುಕಾಣುತ್ತದೆ. ಸೂರ್ಯನ ಪದರಗಳು: ಸೂರ್ಯನಿಗೆ ಕೆಲವು ಒಳ ಪದರಗಳು ಮತ್ತು ಹೊರಪದರಗಳಿವೆ.

ಸೂರ್ಯನ ಒಳ ಪದರಗಳು
i) ಕೋರ್: 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುವ ಸೂರ್ಯನ ಈ ಪದರ 1,50,000 ಕಿಲೋಮೀಟರ್ ವ್ಯಾಪಿಸುತ್ತದೆ.

ii) ರೇಡಿಯೇಟಿವ್ ಜೋ಼ನ್ (ವಿಕಿರಣಶೀಲ ವಲಯ): 7 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನ ಹೊಂದಿರುವ ಈ ಪದರ, 5 ಲಕ್ಷ ಕಿಲೋಮೀಟರ್ ತನಕ ವ್ಯಾಪಿಸಿದೆ.

iii) ಕಾನ್ವೆಕ್ಟಿವ್ ಜೋ಼ನ್: 2 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುವ ಈ ಪದರ ಅಂದಾಜು 500 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.

ಸೂರ್ಯನ ಬಾಹ್ಯ ಪದರಗಳು
i) ಫೋಟೋಸ್ಫಿಯರ್: 5,500 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುವ ಈ ಪದರ 500 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಸೂರ್ಯನ ಮೇಲ್ಮೈ ಪದರವನ್ನು ಫೋಟೋಸ್ಫಿಯರ್ ಎನ್ನಲಾಗುತ್ತದೆ. ಇದು ಕಣ್ಣಿಗೆ ಗೋಚರಿಸುವ ಸೂರ್ಯನ ಪದರವಾಗಿದ್ದು, ಸೂರ್ಯನ ಪ್ರಕಾಶಮಾನ ಮುಖವಾಗಿದೆ. ನಮಗೆ ಭೂಮಿಗೆ ಕಾಣಿಸುವ ಬೆಳಕನ್ನು ಫೋಟೋಸ್ಫಿಯರ್ ಹೊರಸೂಸುತ್ತದೆ. ಈ ಪದರ 5,500 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿದ್ದು, 500 ಕಿಲೋಮೀಟರ್ ವ್ಯಾಪಿಸಿದೆ.

ii) ಕ್ರೋಮೋಸ್ಫಿಯರ್: 4,320 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುವ ಈ ಪದರ 2,000 ಕಿಲೋಮೀಟರ್ ತನಕ ವ್ಯಾಪಿಸಿದೆ.

iii) ಕೊರೋನಾ: 1ರಿಂದ 3 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನ ಹೊಂದಿರುವ ಕೊರೋನಾ ಪದರ ಬಾಹ್ಯಾಕಾಶದಲ್ಲಿ ಮಿಲಿಯಾಂತರ ಕಿಲೋಮೀಟರ್ ವ್ಯಾಪಿಸಿದೆ.

ರಾಜ ವೈಭವದಿಂದ ಕೆಂಪು ದೀಪದ ತನಕ: ಹೀರಾ ಮಂಡಿಯ ಏಳು ಬೀಳಿನ ಹಾದಿ(https://kannada.asianetnews.com/tv-talk/the-rise-and-fall-of-heera-mandi-from-royal-neighborhood-to-red-light-district-gvd-se1m3x)

ಪ್ರೋಬಾ-3 ಸೂರ್ಯ ಅಧ್ಯಯನ: ಪ್ರೋಬಾ-3 ಯೋಜನೆಯ ಮುಖ್ಯ ವೈಜ್ಞಾನಿಕ ಗುರಿಯೆಂದರೆ, ಸೂರ್ಯನ ಮಂಕಾದ ಹೊರಪದರವಾದ ಕೊರೋನಾವನ್ನು ಅಧ್ಯಯನ ಮಾಡುವುದಾಗಿದೆ. ಕೊರೋನಾವನ್ನು ಸಾಮಾನ್ಯವಾಗಿ ಸೂರ್ಯನ ಪ್ರಖರ ಬೆಳಕು ಬಚ್ಚಿಡುತ್ತದೆ. ಪ್ರೋಬಾ-3 ಯೋಜನೆ ಸೂರ್ಯನ ಪ್ರಖರ ಮುಖವನ್ನು ತಡೆಗಟ್ಟುತ್ತದೆ. ಆ ಮೂಲಕ ಅಪರೂಪವಾಗಿ, ಸೂರ್ಯನ ಕೊರೋನಾವನ್ನು ದೀರ್ಘಾವಧಿಯ ತನಕ ವೀಕ್ಷಿಸಲು ಸಾಧ್ಯವಾಗುತ್ತದೆ. ಆಸಕ್ತಿಕರ ವಿಚಾರವೆಂದರೆ, ಪ್ರೋಬಾ-3 ಯೋಜನೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಂಸ್ಥೆಯ ಪಿಎಸ್ಎಲ್‌ವಿ-ಎಕ್ಸ್ಎಲ್ ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತದೆ.

click me!