Latest Videos

ಇಸ್ರೋ ಮತ್ತೊಂದು ಮೈಲಿಗಲ್ಲು, ಮರುಬಳಕೆಯ ಪುಷ್ಪಕ್ RLV ಲ್ಯಾಂಡಿಂಗ್ ಪ್ರಯೋಗ ಯಶಸ್ವಿ!

By Chethan KumarFirst Published Jun 23, 2024, 12:32 PM IST
Highlights

ಇಸ್ರೋ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಮರುಬಳಕೆ ಮಾಡಬಲ್ಲ ಲಾಂಚ್ ವೆಹಿಕಲ್ ಪುಷ್ಪಕ್ RLVಯನ್ನು ಮೂರನೇ ಹಾಗೂ ಅಂತಿಮ ಬಾರಿ ಲ್ಯಾಂಡಿಂಗ್ ಪ್ರಯೋಗ ಯಶಸ್ವಿಗೊಳಿಸಿದೆ

ನವೆದೆಹಲಿ(ಜೂ.23) ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಸಾಧನೆಗೆ ಮತ್ತೊಂದು ಗರಿ ಸೇರಿಕೊಂಡಿದೆ. ಮರುಬಳಕೆ ಉಡಾವಣೆ ವಾಹನಗಳ ಪ್ರಯೋಗದಲ್ಲಿ ಸತತ 3ನೇ ಹಾಗೂ ಅಂತಿಮ ಪ್ರಯೋಗದಲ್ಲಿ ಇಸ್ರೋ ಯಶಸ್ವಿಯಾಗಿದೆ. ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ ಪುಷ್ಪಕ್ ಲ್ಯಾಂಡಿಂಗ್ ಪ್ರಯೋಗ ಯಶಸ್ವಿಯಾಗಿದೆ.  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದ ಈ ಪ್ರಯೋಗ ಯಶಸ್ವಿಯಾಗಿದೆ.  ಇಂದು(ಜೂ.23) ಬೆಳಗ್ಗೆ 7.10ಕ್ಕೆ ಪ್ರಯೋಗ ನಡೆಸಲಾಗಿತ್ತು.

ಪುಷ್ಪಕ್ ಲ್ಯಾಂಡಿಂಗ್ ಪ್ರಯೋಗದ ವಿಡಿಯೋವನ್ನು ಇಸ್ರೋ ಪೋಸ್ಟ್ ಮಾಡಿದೆ. ಇಂದು ಬೆಳಗ್ಗೆ ಪುಷ್ಪಕ್ ಲಾಂಚ್ ವಾಹನವನ್ನು ಭಾರತೀಯ ವಾಯು ಸೇನೆಯ ಚಿನೂಕ್ ಹೆಲಿಕಾಪ್ಟರ್ 4.5 ಕಿಲೋಮೀಟರ್ ಅಲ್ಟಿಟ್ಯೂಡ್ ಮೇಲಕ್ಕೊಯ್ದು ಬಿಡಲಾಗಿತ್ತು. ಪುಷ್ಪಕ್ ಸ್ವಾಯತ್ತವಾಗಿ ಭೂಮಿಯತ್ತ ಇಳಿಯತೊಡಗಿತ್ತು. ಈ ವೇಳೆ ಇಸ್ರೋ ನಿಯಂತ್ರಕದ ಮೂಲಕ ಪುಷ್ಪಕ್ ನಿಯಂತ್ರಣ ಮಾಡಿ ಸುರಕ್ಷಿತವಾಗಿ ಲ್ಯಾಂಡ್ ಆಗುವಂತೆ ಮಾಡಿದ್ದಾರೆ. ಚಳ್ಳಕೆರೆಯ ರನ್‌ ವೇ ಮೇಲೆ ಸರಾಗವಾಗಿ ಯಾವುದೇ ಆತಂಕವಿಲ್ಲದೆ ಲ್ಯಾಂಡ್‌ ಆಯಿತು. ತಕ್ಷಣವೇ ಬ್ರೇಕ್‌ ಪ್ಯಾರಾಚೂಟ್‌, ಲ್ಯಾಂಡಿಂಗ್‌ ಗೇರ್‌ ಬ್ರೇಕ್‌ ಹಾಗೂ ನೋಸ್‌ ವ್ಹೀಲ್‌ ಸ್ಟೀರಿಂಗ್ ವ್ಯವಸ್ಥೆಯ ಮೂಲಕ ಪುಷ್ಕರ್ ವಾಹನ ನಿಲುಗಡೆಯಾಯಿತು ಎಂದು ಇಸ್ರೋ ತಿಳಿಸಿದೆ. ಈಗಾಗಲೇ ಎರಡು ಬಾರಿ ಪ್ರಯೋಗ  ಮಾಡಲಾಗಿತ್ತು. ಇದೀಗ 3ನೇ ಹಾಗೂ ಅಂತಿಮ ಹಂತದ ಪ್ರಯೋಗವೂ ಯಶಸ್ವಿಯಾಗಿದೆ.

ಪ್ರೋಬಾ 3: ಕೃತಕ ಗ್ರಹಣ ನಿರ್ಮಾಣ, ಸೂರ್ಯ ರಹಸ್ಯ ಅನಾವರಣಕ್ಕೆ ಇಸ್ರೋ ಇಎಸ್ಎ ಜಂಟಿ ಪ್ರಯತ್ನ

ಮೊದಲ ಪ್ರಯೋಗವನ್ನು 2023ರಲ್ಲಿ ಮಾಡಲಾಗಿತ್ತು. ಬಳಿಕ ಮಾರ್ಚ್ ತಿಂಗಳಲ್ಲಿ 2ನೇ ಬಾರಿಗೆ ಯಶಸ್ವಿ ಪ್ರಯೋಗ ಮಾಡಲಾಗಿತ್ತು. ಯಶಸ್ವಿ ಲ್ಯಾಂಡಿಂಗ್ ಬಳಿಕ ಮಾನಾಡಿಗ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್, ನಾವೀಗ ಮರುಬಳಕೆ ಮಾಡಬಹುದಾದ ಲಾಂಚಿಂಗ್ ವೆಹಿಕಲ್ ಪುಷ್ಪಕ್ ಹ್ಯಾಟ್ರಿಕ್ ಲ್ಯಾಂಡಿಂಗ್ ಮಾಡಿದ್ದೇವೆ. ಮೂರು ಬಾರಿ ಪ್ರಯೋಗ ಯಶಸ್ವಿಯಾಗಿದೆ. ಇದರಿಂದ ಪುಷ್ಪಕ್ ಕಕ್ಷೆಯ ಪರೀಕ್ಷೆ  ಒಡ್ಡಲು ಸಜ್ಜಾಗಿದೆ. ಇದನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾಯಿಸಲಾಗುತ್ತದೆ ಎಂದರು. ಈ ಶತಮಾನದಲ್ಲಿ  ಸ್ವದೇಶಿ ನಿರ್ಮಿತ ಮರುಬಳಕೆ ಮಾಡಬಹುದಾದ ರಾಕೆಟ್‌ಗಳನ್ನು ಇಸ್ರೋ ಬಳಕೆಗೆ ಇದು ನರವಾಗಿದೆ. ಈ ಮೂಲಕ ಆತ್ಮನಿರ್ಭರ ಸಾಧಿಸಿದೆ ಎಂದು ಸೋಮಾಥ್ ಹೇಳಿದ್ದಾರೆ.

 

RLV-LEX3 Video pic.twitter.com/MkYLP4asYY

— ISRO (@isro)

 

ಪುಷ್ಪಕ್ ಪ್ರಯೋಜನವೇನು?
ಮೂರು ಪ್ರಯೋಗ ಯಶಸ್ವಿ ಬಳಿಕ ಇದೀಗ ಪುಷ್ಪಕ್ ಉಡ್ಡಯನಕ್ಕೆ ಸಜ್ಜಾಗಿದೆ. ಪುಷ್ಪಕ್‌ನಿಂದ ಇಸ್ರೋದ ಉಡ್ಡಯನ ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ವಿಶೇಷವಾಗಿ ಉಪಗ್ರಹಗಳನ್ನು ನಿಗಧಿತ ಕಕ್ಷಗೆ ಸೇರಿ ಬಳಿಕ ಈ ಪುಷ್ಪಕ್ ರಾಕೆಟ್ ಬಾಹ್ಯಾಕಾಶದಿಂದ ನೇರವಾಗಿ ಭೂಮಿಗೆ ಮರಳುತ್ತೆ. ಇದೆ ಪುಷ್ಪಕ್ ಬಳಸಿಕೊಂಡು ಮತ್ತೊಂದು ಉಪಗ್ರಹ ಉಡ್ಡಯನ ಮಾಡಲು ಸಾಧ್ಯವಿದೆ. ಪ್ರತಿ ಬಾರಿ ಉಪಗ್ರಹ ಉಡ್ಡಯನಕ್ಕೆ ಹೊಸ ಹೊಸ ವಾಹಕ ನಿರ್ಮಿಸುವ ಅವಶ್ಯಕತೆ ಇಲ್ಲ. ಇದರಿಂದ ಭಾರಿ ಪ್ರಮಾಣದ ವೆಚ್ಚ ಇಳಿಕೆಯಾಗಲಿದೆ.  

ಪ್ರೋಬಾ 3: ಕೃತಕ ಗ್ರಹಣ ನಿರ್ಮಾಣ, ಸೂರ್ಯ ರಹಸ್ಯ ಅನಾವರಣಕ್ಕೆ ಇಸ್ರೋ ಇಎಸ್ಎ ಜಂಟಿ ಪ್ರಯತ್ನ
 

click me!