ಜೇಮ್ಸ್ ವೆಬ್ ದೂರದರ್ಶಕವು ಬಾಹ್ಯಾಕಾಶದಲ್ಲಿರುವ ಅಂತಹ ಸುಂದರವಾದ ನಕ್ಷತ್ರಪುಂಜದ ಚಿತ್ರವನ್ನು ತೆಗೆದುಕೊಂಡಿದೆ. ಭಗವಾನ್ ಶ್ರೀಕೃಷ್ಣನ ಸುದರ್ಶನ ಚಕ್ರದ ರೀತಿಯಲ್ಲಿ ಇದು ಗೋಚರವಾಗಿದೆ. ಅಚ್ಚರಿ ಎನ್ನುವಂತೆ, ಈ ಗ್ಯಾಲಕ್ಸಿಯ ಪ್ರತಿಯೊಂದು ಭಾಗವು ಉತ್ತಮವಾದ ಮಾಹಿತಿಯನ್ನು ನೀಡಿದೆ. ಈ ಗ್ಯಾಲಕ್ಸಿಯೊಳಗೆ ನಕ್ಷತ್ರವೊಂದು ರೂಪುಗೊಳ್ಳುತ್ತಿದೆ. ಆದರೆ, ಹಬಲ್‌ನಿಂದ ತೆಗೆದ ಈ ನಕ್ಷತ್ರಪುಂಜದ ಚಿತ್ರವು ತುಂಬಾ ಮಸುಕಾಗಿ ಕಂಡಿತ್ತು.
ವಾಷಿಂಗ್ಟನ್ (ಆ.4): ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಬಾಹ್ಯಾಕಾಶದಲ್ಲಿ ನಕ್ಷತ್ರಪುಂಜದ ಫೋಟೋ ತೆಗೆದಿದ್ದು, ಅದು ರಥದ ಚಕ್ರದಂತೆ ಕಾಣುತ್ತದೆ. ಭಗವಾನ್ ಶ್ರೀಕೃಷ್ಣ ಕೈಯಲ್ಲಿಯ ಸುದರ್ಶನ ಚಕ್ರದಂತೆ ಕಾಣುತ್ತಿದೆ. ಈ ಗೋಳಾಕಾರದ ನಕ್ಷತ್ರಪುಂಜದ ಒಳಗೆ ನಕ್ಷತ್ರಗಳ ರಚನೆಯೂ ಕಂಡಿದೆ. ವಿಜ್ಞಾನಿಗಳು ಈ ನಕ್ಷತ್ರಪುಂಜಕ್ಕೆ ಕಾರ್ಟ್‌ವೀಲ್ ಗೆಲಾಕ್ಸಿ ಎಂದೂ ಹೆಸರಿಸಿದ್ದಾರೆ. ಮೇಲ್ನೋಟಕ್ಕೆ ಇದು ಅದೇ ರೀತಿಯಲ್ಲಿ ಕಾಣುತ್ತಿದ್ದು, ಕಾರ್ಟ್‌ವೀಲ್ ಗ್ಯಾಲಕ್ಸಿಯನ್ನು ಹಬಲ್ ಬಾಹ್ಯಾಕಾಶ ದೂರದರ್ಶಕವು ಮೊದಲು ಸೆರೆ ಹಿಡಿದು ಅಧ್ಯಯನ ಮಾಡಿತ್ತು. ಆದರೆ ನಂತರ ಅಂತಹ ಅದ್ಭುತ ಮತ್ತು ಸ್ಪಷ್ಟ ಚಿತ್ರ ಹಬಲ್ ದೂರದರ್ಶಕದಿಂದ ಹೊರಬಂದಿರಲಿಲ್ಲ. ಈ ಚಿತ್ರದಲ್ಲಿ, ಜೇಮ್ಸ್ ವೆಬ್ ಟೆಲಿಸ್ಕೋಪ್ ಅಂತಹ ಅನೇಕ ಸ್ಥಳಗಳನ್ನು ಕಂಡುಹಿಡಿದಿದೆ. ಈ ಮೊದಲು ಹಬಲ್ ಟೆಲಿಸ್ಕೋಪ್ ತೆಗೆದ ಚಿತ್ರದಲ್ಲಿ ಇದು ಗೋಚರವಾಗಿರಲಿಲ್ಲ. ಜೇಮ್ಸ್ ವೆಬ್ ಟೆಲಿಸ್ಕೋಪ್‌ನ ನಿರ್‌ಕ್ಯಾಮ್ ಮತ್ತು ಎಂಐಆರ್‌ಐ ಗ್ಯಾಲಕ್ಸಿಯೊಳಗೆ ನಕ್ಷತ್ರಗಳ ರಚನೆಯ ಚಿತ್ರಗಳನ್ನು ತೆಗೆಯಲಾಗಿದ್ದು, ಈಗಷ್ಟೇ ಹುಟ್ಟಿರುವ ಸಾಕಷ್ಟು ನಕ್ಷತ್ರಗಳನ್ನು ಇದರಲ್ಲಿ ಕಾಣಬಹುದಾಗಿದೆ. ಈ ಕಾರ್ಟ್‌ವೀಲ್ ಗೆಲಾಕ್ಸಿಯು ಭೂಮಿಯಿಂದ 500 ಮಿಲಿಯನ್ ಬೆಳಕಿನ ವರ್ಷದಷ್ಟು ದೂರದಲ್ಲಿದೆ.
ಮಧ್ಯದಲ್ಲಿ ದೈತ್ಯ ಕಪ್ಪುಕುಳಿ: ಕಾರ್ಟ್‌ವೀಲ್ ಗ್ಯಾಲಕ್ಸಿಯ ಮಧ್ಯಭಾಗದಲ್ಲಿ ದೈತ್ಯ ಕಪ್ಪು ಕುಳಿ ಇದೆ, ಅದರ ಸುತ್ತಲೂ ನಕ್ಷತ್ರಗಳು ರೂಪುಗೊಂಡಿವೆ. ಅವುಗಳ ನಡುವೆ ಚಲಿಸುವ ಧೂಳು ಕೂಡ ಇದೆ. ಈ ನಕ್ಷತ್ರಪುಂಜವು ಭೂಮಿಯಿಂದ 500 ಮಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿರುವ ಸಮೂಹದಲ್ಲಿದೆ. ಇದು ಅತ್ಯಂತ ಅಪರೂಪದ ನಕ್ಷತ್ರಪುಂಜ ಎನ್ನುವುದು ವಿಜ್ಞಾನಿಗಳ ಹೇಳಿದೆ. ಇದು ಅದರ ಆಕಾರದಿಂದಾಗಿ. ಕಾರ್ಟ್‌ವೀಲ್ ನಮ್ಮ ನಕ್ಷತ್ರಪುಂಜದಂತೆಯೇ ಸುರುಳಿಯಾಕಾರದಲ್ಲಿದೆ.
Telescopes have examined the Cartwheel Galaxy before, but our view has been obscured by gas and dust. , with its infrared imaging capabilities, has uncovered new insights into the galaxy’s nature 👉 https://t.co/pczZxNjh9Y (left: 2010, right: 2022) pic.twitter.com/yC407vXPLP
— ESA (@esa)ಆದರೆ 70 ರಿಂದ 800 ಮಿಲಿಯನ್ ಬೆಳಕಿನ ವರ್ಷಗಳ ಹಿಂದೆ ಅದು ಮತ್ತೊಂದು ನಕ್ಷತ್ರಪುಂಜದೊಂದಿಗೆ ಡಿಕ್ಕಿ ಹೊಡೆದಿದೆ, ನಂತರ ಅದರ ಆಕಾರವು ಬದಲಾಗಿರುವ ಸಾಧ್ಯತೆ ಇದೆ. ಈಗ ಅದು ರಥದ ಚಕ್ರದಂತೆ ವೃತ್ತಾಕಾರವಾಗಿ ಮಾರ್ಪಟ್ಟಿದೆ. ಇನ್ನು ಭಾರತೀಯ ಖಗೋಳಶಾಸ್ತ್ರಜ್ಞರಿಗೆ ಇದು ಶ್ರೀಕೃಷ್ಣನ ಸುದರ್ಶನ ಚಕ್ರದ ರೀತಿಯಲ್ಲಿ ಕಂಡಿದೆ.
ಮಿಲ್ಕಿ ವೇ ಗ್ಯಾಲಕ್ಸಿಯ ಅಧ್ಭುತ ಚಿತ್ರ ಸರೆಹಿಡಿದ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್: ಫೋಟೋ ನೋಡಿ
ಕಾರ್ಟ್‌ವೀಲ್ ಗೆಲಾಕ್ಸಿಗೆ ಎರಡು ಉಂಗುರ: ಕಾರ್ಟ್‌ವೀಲ್ ಗೆಲಾಕ್ಸಿ ಎರಡು ಉಂಗುರಗಳನ್ನು ಹೊಂದಿದೆ. ಒಂದು ಉಂಗುರವು ಗ್ಯಾಲಕ್ಸಿಯ ಮಧ್ಯಭಾಗವನ್ನು ಸುತ್ತುವರೆದಿದಿದ್ದರೆ, ಅದರ ಸುತ್ತ ಇನ್ನೊಂದು ದೊಡ್ಡ ಉಂಗುರವಿದೆ. ಹೊಂಡದಲ್ಲಿ ಕಲ್ಲುಗಳನ್ನು ಹಾಕಿದ ನಂತರ ಅಲೆಗಳು ಹೊರಬರುವ ರೀತಿಯಲ್ಲಿ ಎರಡೂ ಉಂಗುರಗಳು ಕಂಡಿವೆ. ಹೊರಗಿನ ಅಲೆಯು ಅನಿಲ ಮತ್ತು ಧೂಳನ್ನು ಬಾಹ್ಯಾಕಾಶಕ್ಕೆ ಹೊರಹಾಕುವುದನ್ನು ಮುಂದುವರೆಸುತ್ತದೆ. ಈ ನಕ್ಷತ್ರಪುಂಜದಲ್ಲಿ ಎಲ್ಲೆಲ್ಲಿ ಹೊಸ ನಕ್ಷತ್ರಗಳು ರೂಪುಗೊಳ್ಳುತ್ತಿವೆಯೋ, ಆ ಸ್ಥಳಗಳನ್ನು ನೀಲಿ ಬೆಳಕಿನಿಂದ ತೋರಿಸಲಾಗುತ್ತದೆ.
ಶತಕೋಟಿ ವರ್ಷದ ಹಿಂದಿನ ಗೆಲಾಕ್ಸಿ ಚಿತ್ರ ತೆಗೆದ James Webb Space Telescope!
ಮೂಲದಲ್ಲಿ ಯುವ ನಕ್ಷತ್ರಗಳು: ಬೃಹತ್ ಯುವ ನಕ್ಷತ್ರ ಸಮೂಹಗಳು ಮೂಲದಲ್ಲಿರುವ ಪ್ರಕಾಶಮಾನವಾದ ಪ್ರದೇಶಗಳಲ್ಲಿ ಕಂಡುಬರುತ್ತವೆ, ಇದು ಅಗಾಧ ಪ್ರಮಾಣದ ಬಿಸಿ ಧೂಳನ್ನು ಸಹ ಒಳಗೊಂಡಿದೆ. ಇನ್ನೊಂದು ಬದಿಯಲ್ಲಿ, ಸುಮಾರು 440 ಮಿಲಿಯನ್ ವರ್ಷಗಳಿಂದ ಬೆಳೆಯುತ್ತಿರುವ ಹೊರಗಿನ ಉಂಗುರದಲ್ಲಿ ನಕ್ಷತ್ರ ರಚನೆ ಮತ್ತು ಸೂಪರ್ನೋವಾ ಪ್ರಾಬಲ್ಯ ಹೊಂದಿದೆ. ಈ ಉಂಗುರವು ಬೆಳೆದಂತೆ ಸುತ್ತಮುತ್ತಲಿನ ಅನಿಲದೊಂದಿಗೆ ಘರ್ಷಣೆಯಾಗುತ್ತದೆ, ಇದು ನಕ್ಷತ್ರ ರಚನೆಗೆ ಕಾರಣವಾಗುತ್ತದೆ ಎಂದು ನಾಸಾ ಹೇಳಿದೆ.