ಹೊಸ ದಾಖಲೆ ಬರೆದ ಭೂಮಿ, ಜು.29 ಅತ್ಯಂತ ಚಿಕ್ಕ ದಿನ!

By Kannadaprabha News  |  First Published Aug 1, 2022, 10:23 AM IST

 24 ತಾಸಿಗಿಂತ ಕಡಿಮೆ ಅವಧಿಯಲ್ಲಿ ಸುತ್ತಿದ ಭೂಮಿ! 1.59 ಮಿ.ಸೆಕೆಮಡ್‌ ಕಡಿಮೆ ಅವಧಿಯಲ್ಲಿ ಸುತ್ತುವಿಕೆ. 2020ರ ಹಳೆಯ ದಾಖಲೆಗೆ ಬ್ರೇಕ್‌.


ನವದೆಹಲಿ (ಆ.1): ಜು. 29ರಂದು ಭೂಮಿ 24 ತಾಸುಗಳಿಗಿಂತ 1.59 ಮಿಲಿ ಸೆಕೆಂಡ್‌ ಕಡಿಮೆ ಅವಧಿಯಲ್ಲೇ ಸುತ್ತು ಪೂರ್ಣಗೊಳಿಸಿದ್ದು, ಅತಿಚಿಕ್ಕ ದಿನದ ಹೊಸ ದಾಖಲೆ ಸೃಷ್ಟಿಸಿದೆ.  ಇಂಡಿಪೆಂಡೆಂಟ್‌ ಪತ್ರಿಕೆ ವರದಿ ಮಾಡಿದಂತೆ ಇತ್ತೀಚೆಗೆ ಭೂಮಿ, ತನ್ನ ಸುತ್ತುವ ವೇಗವನ್ನು ಹೆಚ್ಚಿಸಿಕೊಂಡಿದೆ. ಜು. 19, 2020ರಂದು ಭೂಮಿ 1.47 ಮಿಲಿ ಸೆಕೆಂಡ್‌ ಕಡಿಮೆ ಅವಧಿಯಲ್ಲಿ ಭೂಮಿ ತನ್ನನ್ನು ತಾನು ಸುತ್ತಿಕೊಂಡಿತ್ತು.ಇದು ಈವರಗಿನ ಅತಿ ಚಿಕ್ಕ ದಿನದ ದಾಖಲೆ ಹೊಂದಿತ್ತು. 2021ರಲ್ಲೂ ಭೂಮಿ ಸುತ್ತುವಿಕೆ ವೇಗವನ್ನು ಹೆಚ್ಚಿಸಿಕೊಂಡಿದ್ದರೂ ಯಾವುದೇ ದಾಖಲೆ ಮುರಿದಿರಲಿಲ್ಲ. ಆದರೆ ಜು. 29ರಂದು ಈ ದಾಖಲೆ ಮುರಿದಿದೆ. 50 ವರ್ಷಗಳ ಚಿಕ್ಕದಿನಗಳ ಹಂತವು ಈಗ ಆರಂಭವಾಗಿರಬಹುದು ಎಂದು ಇಂಟರೆಸ್ಟಿಂಗ್‌ ಎಂಜಿನಿಯರಿಂಗ್‌ ಅಭಿಪ್ರಾಯ ಪಟ್ಟಿದೆ. ಭೂಮಿಯ ಸುತ್ತುವಿಕೆಯ ವೇಗದಲ್ಲಾಗುತ್ತಿರುವ ಬದಲಾವಣೆಗೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಭೂಮಿಯ ಅಂತರಾಳ, ಒಳ ಹಾಗೂ ಹೊರ ಪದರದಲ್ಲಿ, ಸಾಗರ ಅಥವಾ ಹವಾಮಾನದಲ್ಲಾಗುವ ಬದಲಾವಣೆಗಳು ಇದಕ್ಕೆ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಕೆಲ ವಿಜ್ಞಾನಿಗಳು ಭೂಮಿಯ ಭೌಗೋಳಿಕ ಧ್ರುವಗಳ ಚಲನೆಯಿಂದಾಗಿ ಸಂಭವಿಸುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಇದನ್ನು ಚಾಂಡ್ಲರ್‌ ವೊಬಲ್‌ ಎಂದು ಕರೆಯಲಾಗುತ್ತದೆ.

ಪರಿಣಾಮವೇನು?: ಭೂಮಿ ಇದೇ ರೀತಿ ಹೆಚ್ಚಿನ ವೇಗದಲ್ಲಿ ಸುತ್ತುವುದನ್ನು ಮುಂದುವರೆಸಿದರೆ ಋುಣಾತ್ಮಕ ಹೆಚ್ಚುವರಿ ಸೆಕೆಂಡುಗಳ ಅವಧಿ ಹೆಚ್ಚಾಗಬಹುದು. ಇದು ಸ್ಮಾರ್ಚ್‌ಫೋನು, ಕಂಪ್ಯೂಟರ್‌ ಹಾಗೂ ಸಂವಹನ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿಸಬಹುದು. ಏಕೆಂದರೆ ಗಡಿಯಾರದಲ್ಲಿ 23:59:59 ಸೆಕೆಂಡುಗಳ ಬಳಿಕವೇ ಮತ್ತೆ 00:00:00 ಹೊಸ ದಿನ ಆರಂಭವಾಗುತ್ತದೆ. ಹೀಗಾಗಿ ಋುಣಾತ್ಮಕ ಹೆಚ್ಚುವರಿ ಸೆಕೆಂಡುಗಳಿಂದಾಗಿ ಡೇಟಾ ವ್ಯವಸ್ಥೆಯಲ್ಲಿ ಸಮಸ್ಯೆಗಳಾಗಬಹುದು ಎಂದು ಇಂಡಿಪೆಂಡೆಂಟ್‌ ವರದಿ ಮಾಡಿದೆ. ಅಧಿಕ ಸೆಕೆಂಡ್ ಸಂಭವಿಸಿದಲ್ಲಿ, ಗಡಿಯಾರವು 23:59:58 ರಿಂದ 00:00:00 ಕ್ಕೆ ಬದಲಾಗುತ್ತದೆ, ಇದು "ಟೈಮರ್‌ಗಳು ಅಥವಾ ಶೆಡ್ಯೂಲರ್‌ಗಳನ್ನು ಅವಲಂಬಿಸಿರುವ ಸಾಫ್ಟ್‌ವೇರ್‌ನ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಬಹುದು" ಎಂದು ಮೆಟಾ ಊಹಿಸುತ್ತದೆ.

Tap to resize

Latest Videos

ಪರಿಹಾರ ಏನು?: ಈ ಸಮಸ್ಯೆಯನ್ನು ನಿಭಾಯಿಸಲು ಅಂತಾರಾಷ್ಟ್ರೀಯ ಸಮಯಪಾಲಕರು ಋುಣಾತ್ಮಕ ಹೆಚ್ಚುವರಿ ಸೆಕೆಂಡ್‌ಗಳನ್ನು ‘ಡ್ರಾಪ್‌ ಸೆಕೆಂಡ್‌’ ಎಂದು ಪರಿಗಣಿಸಬೇಕು ಎಂದು ಮೆಟಾ ಬ್ಲಾಗ್‌ ತಿಳಿಸಿದೆ. ಗಮನಾರ್ಹವಾಗಿ, ಕೋಆರ್ಡಿನೇಟೆಡ್ ಯೂನಿವರ್ಸಲ್ ಟೈಮ್ (UTC), ಪ್ರಪಂಚವು ಗಡಿಯಾರಗಳು ಮತ್ತು ಸಮಯವನ್ನು ನಿಯಂತ್ರಿಸುವ ಪ್ರಾಥಮಿಕ ಸಮಯದ ಮಾನದಂಡವನ್ನು ಈಗಾಗಲೇ 27 ಬಾರಿ ಅಧಿಕ ಸೆಕೆಂಡ್‌ನೊಂದಿಗೆ ನವೀಕರಿಸಲಾಗಿದೆ.

click me!