ಲಾಕ್‌ಡೌನ್ ನಡುವೆ ಗುಡ್‌ನ್ಯೂಸ್: ಮುಚ್ಚಿತು ಓಝೋನ್ ಪದರದ ಅತಿ ದೊಡ್ಡ ರಂಧ್ರ!

Published : Apr 28, 2020, 01:24 PM ISTUpdated : Apr 28, 2020, 01:27 PM IST
ಲಾಕ್‌ಡೌನ್ ನಡುವೆ ಗುಡ್‌ನ್ಯೂಸ್: ಮುಚ್ಚಿತು ಓಝೋನ್ ಪದರದ ಅತಿ ದೊಡ್ಡ ರಂಧ್ರ!

ಸಾರಾಂಶ

ಲಾಖ್‌ಡೌನ್ ನಡುವೆ ಸಿಕ್ತು ಗುಡ್‌ ನ್ಯೂಸ್| ಓಜೋನ್‌ ಪದರದಲ್ಲಿ ಮೂಡಿದ್ದ ಅತಿ ದೊಡ್ಡ ರಂಧ್ರ ಕ್ಲೋಸ್| ಸೂರ್ಯನಿಂದ ಹೊರಹೊಮ್ಮುವ ಯುವಿ ಕಿರಣಗಳಳಿಂದ ಭೂಮಿಯನ್ನು ರಕ್ಷಿಸುವ ಓಝೋನ್ ಪದರ

ನವದೆಹಲಿ(ಏ.28): ಲಾಕ್‌ಡೌನ್ ಆತಂಕದ ನಡುವೆ ಖುಷಿ ಸುದ್ದಿಯೊಂದು ಲಭಿಸಿದೆ. ಆರ್ಕಟಿಕ್ ಮೇಲ್ಭಾಗದಲ್ಲಿ ಬರುವ ಓಝೋನ್ ಪದರದಲಲ್ಲಿ ಕಾಣಿಸಿಕೊಂಡಿದ್ದ ಬಹುದೊಡ್ಡ ರಂಧ್ರವೊಂದು ಮುಚ್ಚಿದೆ.

ಹೌದು ಆರ್ಕಟಿಕ್ ಮೇಲ್ಬಾಗದಲ್ಲಿ ಬರುವ, ಸೂರ್ಯನ ವಿಕಿರಣಗಳನ್ನು ತಡೆಯುವ ಓಝೋನ್ ವಲಯದಲ್ಲಿ ಭಾರೀ ರಂಧ್ರವೊಂದು ಕಾಣಿಸಿಕೊಂಡು ಆತಂಕ ಹುಟ್ಟಿಸಿತ್ತು. ಕೊಪರ್ನಿಕಸ್ ಸೆಂಟಿನೆಲ್ 5ಪಿ ಉಪಗ್ರಹದ ಮಾಹಿತಿ ಆಧರಿಸಿ ವಿಜ್ಞಾನಿಗಳ ತಂಡ ಈ ವರದಿ ಬಿಡುಗಡೆ ಮಾಡಿತ್ತು. ಆದರೀಗ ಈ ರಂಧ್ರ ಮುಚ್ಚಿಕೊಂಡಿದ್ದು, ಯೂರೋಪಿಯನ್ ಸೆಂಟರ್ ಫಾರ್ ಮೀಡಿಯಂ ರೇಂಜ್ ವೆದರ್ ಫಾರ್‌ಕಾಸ್ಟ್ ಈ ಮಾಹಿತಿಯನ್ನು ಖಚಿತಪಡಿಸಿದೆ.

ಕೊರೋನಾ ಆತಂಕದ ನಡುವೆ, ಓಝೋನ್ ಪದರದಲ್ಲಿ ದೊಡ್ಡ ರಂಧ್ರ..!

ಕಾಪರ್ನಿಕಸ್ ಕ್ಲೈಮೆಟ್ ಚೇಂಜ್ ಸರ್ವಿಸ್ ಹಾಗೂ ಕಾಪರ್ನಿಕಸ್ ಅಟ್ಮಾಸ್ಪಿಯರ್ ಮಾನಿಟರಿಂಗ್ ಸರ್ವಿಸ್ ಮಾಹಿತಿ ನೀಡಿದ್ದು, ಇದೊಂದು ಅಭೂತಪೂರ್ವ ಬೆಳವಣಿಗೆ ಎಂದಿದೆ. ಕಾಪರ್ನಿಕಸ್ ECMWF ಈ ಸಂಬಂಧ ಟ್ವೀಟ್ ಮಾಡುತ್ತಾ 'ಅಭೂತಪೂರ್ವ 2020, ಉತ್ತರ ಅಕ್ಷಾಂಶದ ಓಜೋನ್ ರಂಧ್ರ ಮುಚ್ಚಿಕೊಂಡಿದೆ. ಪೋಲಾರ್ ವಾರ್ಟೆಕ್ಸ್‌ಸ್ಲಿಟ್‌ನಿಂದ ಆರ್ಕಟಿಕ್‌ನಲ್ಲಿ ಓಝೋನ್ ಗಾಳಿ ಬರುತ್ತಿದೆ' ಎಂದಿದೆ.

ರಂಧ್ರದ ಬಗ್ಗೆ ವಿಜ್ಞಾನಿಗಳು ಹೇಳಿದ್ದೇನು?

ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಹಲವು ಅಂಶಗಳು ವಾಯುಮಂಡಲ ಇರುವ ಓಝೋನ್‌ನ ಭಾಗವಾಗಿರುವ ಸ್ಟ್ರಾಟೋಸ್ಪಿಯರ್ ಮೇಲೆ ಗಂಭೀರ್ ಪರಿಣಾಮ ಬೀರಿದೆ. ಅದರ ಜತೆಗೆ ವಿಲಕ್ಷಣ ಎಂಬಂತೆ ಸ್ಟ್ರಾಟೋಸ್ಪಿಯರ್ ಕೆಳ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಏಕಾಏಕಿ ತಾಪಮಾನ ಭಾರೀ ಕುಸಿತ ಕಂಡಿದೆ. ಇದೆಲ್ಲದರ ಪರಿಣಾಮ ಓಝೋನ್ ವಲಯದಲ್ಲಿ ದೊಡ್ಡ ರಂಧ್ರ ಕಾಣಿಸಿಕೊಂಡಿದೆ.

ಓಝೋನ್ ಪದರ ಅಂದ್ರೆ ಏನು?

ಓಜೋನ್ ಪದರ ಸೂರ್ಯನಿಂದ ಹೊರಹೊಮ್ಮುವ ಯುವಿ ಕಿರಣಗಳು ಭೂಮಿಗೆ ತಾಗದಂತೆ ತಡೆ ಹಿಡಿಯುತ್ತದೆ. ಈ ಮೂಲಕ ಇದು ಭೂಮಂಡಲವನ್ನು ಹಾನಿಕಾರಕ ರೇಡಿಯೇಷನ್‌ನಿಂದ ಕಾಪಾಡುತ್ತದೆ. ಈ ರೇಡಿಯೇಷನ್ ಚರ್ಮದ ಕ್ಯಾನ್ಸರ್‌ನಂತಹ ಮಾರಕ ರೋಗವನ್ನುಂಟು ಮಾಡುತ್ತದೆ.  70ರ ದಶಕದಲ್ಲಿ ಮಾನವನ ಕೆಲಸ ಕಾರ್ಯಗಳಿಂದ ಓಝೋನ್ ಪದರ ಹರಿಯುತ್ತಿರುವುದನ್ನು ವಿಜ್ಞಾನಿಗಳು ಗಮನಿಸಿದ್ದರು ಹಾಗೂ ಈ ಕುರಿತು ಎಚ್ಚರಿಸಿದ್ದರು. 
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ