ಇಸ್ರೋ ಗಗನಯಾನಕ್ಕೆ ಕೊರೋನಾ ಎಫೆಕ್ಟ್| ರಷ್ಯಾ ತರಬೇತಿ ಸ್ಥಗಿತ| ರಷ್ಯಾದ ಗಗರಿನ್ ರೀಸಚ್‌ರ್ ಆ್ಯಂಡ್ ಟೆಸ್ಟ್ ಕಾಸ್ಮೋನಾಟ್ ಟ್ರೇನಿಂಗ್ ಸೆಂಟರ್‌ನಲ್ಲಿ ನಡೆಯುತ್ತಿದ್ದ ತರಬೇತಿ
ನವದೆಹಲಿ(ಏ.07):: ಕೊರೋನಾ ವೈರಸ್ ಲಾಕ್‌ಡೌನ್ ಪರಿಣಾಮ ಉದ್ದೇಶಿತ ಮೊದಲ ಮಾನವಸಹಿತ ಗಗನಯಾನದ ಮೇಲೂ ಆಗಿದೆ.
ಭಾರತದ ಅಂತರಿಕ್ಷಯಾನಕ್ಕೆ ಆಯ್ಕೆಯಾಗಿರುವ ನಾಲ್ವರು ರಷ್ಯಾದ ಮಾಸ್ಕೋದಲ್ಲಿ ತರಬೇತಿ ನಿರತರಾಗಿದ್ದು, ಅವರ ತರಬೇತಿಯನ್ನು ತಡೆಹಿಡಿಯಲಾಗಿದೆ.ರಷ್ಯಾದ ಗಗರಿನ್ ರೀಸಚ್‌ರ್ ಆ್ಯಂಡ್ ಟೆಸ್ಟ್ ಕಾಸ್ಮೋನಾಟ್ ಟ್ರೇನಿಂಗ್ ಸೆಂಟರ್‌ನಲ್ಲಿ ಇತ್ತೀಚೆಗೆ ಈ ನಾಲ್ವರ ತರಬೇತಿಯನ್ನು 12 ತಿಂಗಳ ಅವಧಿಗೆ ಆರಂಭಿಸಲಾಗಿತ್ತು. ಆದರೆ ಕೊರೋನಾ ಭೀತಿಯಿಂದ ಟ್ರೇನಿಂಗ್ ಸೆಂಟರ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
undefined
ಈ ಬಾರಿ ಯಾರಿಗೂ ಮಿಸ್ಸಾಗಲ್ಲ ಸೂಪರ್‌ಮೂನ್, ಹುಣ್ಣಿಮೆ ಚಂದ್ರನ ನೋಡಲು ಕೌಂಟ್‌ಡೌನ್
ಈ ಕಾರಣ ತರಬೇತಿ ಕೂಡ ತತ್ಕಾಲಕ್ಕೆ ಸ್ಥಗಿತಗೊಂಡಿದೆ ಎಂದು ಮೂಲಗಳು ಹೇಳಿವೆ. 2022ರಲ್ಲಿ ಭಾರತ ತನ್ನ ಮೊದಲ ಮಾನವ ಸಹಿತ ಗಗನಯಾನ ಕೈಗೊಳ್ಳಲು ಉದ್ದೇಶಿಸಿದೆ.