ಈ ಬಾರಿ ಯಾರಿಗೂ ಮಿಸ್ಸಾಗಲ್ಲ ಸೂಪರ್‌ಮೂನ್, ಹುಣ್ಣಿಮೆ ಚಂದ್ರನ ನೋಡಲು ಕೌಂಟ್‌ಡೌನ್

By Suvarna NewsFirst Published Apr 6, 2020, 5:22 PM IST
Highlights

ಖಗೋಳದ ಕೌತುಕ ನೋಡಿದಷ್ಟು, ಬಗೆದಷ್ಟು, ತಿಳಿದಷ್ಟು ಸಾಲದು. ಆಕಾಶದಲ್ಲಿ ಪ್ರಜ್ವಲಿಸುವ ಚಂದ್ರನ ನೋಡಲು ಎಲ್ಲರೂ ಇಷ್ಟಪಡುತ್ತಾರೆ. ಮಕ್ಕಳಿಗೆ ಚಂದ ಮಾಮಾ, ತಿಳಿದವರಿಗೆ ಮತ್ತೊಂದು ಗ್ರಹ. ಇದೀಗ ಇದೇ ಚಂದಿರ ಅತೀ ದೊಡ್ಡದಾಗಿ, ಪ್ರಕಾಶಮಾನವಾಗಿ ಗೋಚರಿಸುವ ದಿನ ಬಂದಿದೆ. ಹೌದು ಈ ಬಾರಿ ಹುಣ್ಣಿಮೆ ಚಂದಿರ ಅಥವಾ ಸೂಪರ್‌ಮೂನ್ ಯಾರಿಗೂ ಮಿಸ್ಸಾಗಲ್ಲ. ಇದಕ್ಕೆ ಕಾರಣವೂ ಇದೆ. ಹಾಗಾದರೆ ಈ ಸೂಪರ್‌ಮೂನ್ ಯಾವ ದಿನ, ಎಷ್ಟು ಗಂಟೆಗೆ ಗೋಚರಿಸುತ್ತದೆ? ಇಲ್ಲಿದೆ ವಿವರ.

ಬೆಂಗಳೂರು(ಏ.06): ಖಗೋಳದಲ್ಲಿ ಪ್ರತಿ ದಿನ ಹಲವು ವಿಸ್ಮಯಗಳು ಸಂಭವಿಸುತ್ತಲೇ ಇರುತ್ತದೆ. ಕೆಲವು ಗೋಚರಿಸುತ್ತದೆ, ಕೆಲವು ಕುತೂಹವನ್ನು ಇಮ್ಮಡಿಗೊಳಿಸುತ್ತದೆ. ಇದೀಗ ಸೂಪರ್‌ಮೂನ್ ಅಥವಾ ಹುಣ್ಣಿಮೆ ಚಂದ್ರನ ವಿಸ್ಮಯಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಎಪ್ರಿಲ್ 7ರ ಹಾಗೂ 8ರ ರಾತ್ರಿಯಲ್ಲಿ ಗೋಚರಿಸುವ ಚಂದಿರು ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಗೋಚರಿಸಲಿದ್ದಾನೆ. ಈ ವರ್ಷದಲ್ಲಿ ಗೋಚರಿಸಲಿರುವ ಅತೀ ದೊಡ್ಡದಾದ ಚಂದ್ರ ಅನ್ನೋದು ಮತ್ತೊಂದು ವಿಶೇಷ. 

ಸೂಪರ್ ಬ್ಲಡ್ ವೂಲ್ಫ್ ಮೂನ್ ಕಣ್ತುಂಬಿಕೊಳ್ಳಿ

ಈ ಬಾರಿಯ ಸೂಪರ್‌ಮೂನ್ ಭಾರತೀಯರಿಗೆ ಮಿಸ್ಸಾಗುವುದಿಲ್ಲ. ಈ ಹಿಂದಿನ ಸೂಪರ್‌ಮೂನ್ ಕೌತುಕ ಘಟಿಸುವ ವೇಳೆ ಬಹುತೇಕರು ತಮ್ಮ ತಮ್ಮ ಕೆಲಸಗಳಲ್ಲಿ, ಕಚೇರಿಗಳಲ್ಲಿ ಬ್ಯುಸಿಯಾಗಿರುತ್ತಿದ್ದರು. ಆದರೆ ಈ ಬಾರಿ ಕೊರೋನಾ ವೈರಸ್ ಕಾರಣ ಭಾರತವೇ ಲಾಕ್‌ಡೌನ್ ಆಗಿದೆ. ಇನ್ನು ಬಹುತೇಕರಿಗೆ ರಜಾ ದಿನ. ಇನ್ನು ಕೆಲವರಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸೂಪರ್‌ಮೂನ್ ವೀಕ್ಷಣೆ ಈ ಬಾರಿ ಮಿಸ್ಸಾಗುವುದಿಲ್ಲ. 

ಭಾರತದಲ್ಲಿ 8 ನೇ ತಾರೀಕು ಹುಣ್ಣಿಮೆ . ಆದರೆ ಚಂದ್ರ   ಭೂಮಿಗೆ ಅತೀ ಸಮೀಪದಲ್ಲಿ ಬರುವುದು, 8ರ ಬೆಳಿಗ್ಗೆ 8ಗಂಟೆಗೆ. ಭೂಮಿಗೆ  3,56,907ಕೀಮೀ. ಹತ್ತಿರದಲ್ಲಿ ಚಂದ್ರ ಗೋಚರಿಸಲಿದ್ದಾನೆ.  ಹೀಗಾಗಿ  7 ರ ಹಾಗೂ 8ರ ರಾತ್ರಿ ಹುಣ್ಣಿಮೆ ಚಂದ್ರ ಮಾಮೂಲಿ ಕಾಣುವುದಕ್ಕಿಂತ ಸುಮಾರು (15 ಅಂಶ ) ಸ್ವಲ್ಪ ದೊಡ್ಡದಾಗಿ ಸ್ವಲ್ಪ ಹೆಚ್ಚು ಪ್ರಕಾಶಮಾನವಾಗಿ (25ಅಂಶ) ಕಾಣುತ್ತಾನೆ. 

ತೋಳ ಗ್ರಹಣದಲ್ಲಿ ಹೀಗೆ ಕಂಡ ಚಂದ್ರ: ಇವ ಆಕಾಶದಲ್ಲೇ ಸುರ ಸುಂದರ!

ಈ ವರ್ಷ ಮಾರ್ಚ್, ಎಪ್ರಿಲ್, ಮೇ ನಂತರ ಸೆಪ್ಟೆಂಬರ್, ಅಕ್ಟೊಬರ್, ಹಾಗೂ ನವೆಂಬರ್‌ಗಳು ಹುಣ್ಣಿಮೆ(ಸೂಪರ್‌ಮೂನ್) ಗಳಾದರೂ ಏ.7 ಮತ್ತು 8 ರ ಸೂಪರ್‌ಮೂನ್ ಇದರಲ್ಲಿ ವಿಶೇಷ. ಕಾರಣ ಈ ವರ್ಷದಲ್ಲಿ ಕಾಣವ ಅತೀ ದೊಡ್ಡ ಹುಣ್ಣಿಮೆ ಚಂದ್ರ ಇದಾಗಿರಲಿದೆ.  

ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತುವಾಗ ಕೆಲವೊಂದು ಬಾರಿ ಭೂಮಿ ಹತ್ತಿರವಾಗಿ ಸುತ್ತುತ್ತಾನೆ. ಭೂಮಿಗೆ ಹತ್ತಿರದಲ್ಲಿ ಹಾದುಹೋಗುವಾಗ ಚಂದಿರ ದೊಡ್ಡದಾಗಿ ಕಾಣುತ್ತಾನೆ.  ವರ್ಷಕ್ಕೆ ಒಂದೆರಡು ಬಾರಿ ಸೂಪರ್‌ಮೂನ್ ಸಂಭವಿಸುತ್ತದೆ. ಇದೀಗ ಏಪ್ರಿಲ್ 7 ಮತ್ತು 8 ರಂದು ಭೂಮಿಯ ಸಮೀಪದಲ್ಲಿ ಗೋಚರಿಸುವ ಚಂದ್ರನ ನೋಡಲು ಕ್ಷಣಗಣನೆ ಆರಂಭವಾಗಿದೆ.

click me!