ಹೀಗೆ ಬಳಸಿದರೆ ಈ ವರ್ಷದೊಳಗೇ ಭೂಮಿ ಇರಲ್ಲ, ನಿಜವಾಗುತ್ತಾ ಜಗತ್ತು ಅಂತ್ಯದ ಸ್ಟೀಫನ್ ಭವಿಷ್ಯ?

Published : Dec 09, 2024, 04:18 PM ISTUpdated : Dec 09, 2024, 04:19 PM IST
ಹೀಗೆ ಬಳಸಿದರೆ ಈ ವರ್ಷದೊಳಗೇ ಭೂಮಿ ಇರಲ್ಲ, ನಿಜವಾಗುತ್ತಾ ಜಗತ್ತು ಅಂತ್ಯದ ಸ್ಟೀಫನ್ ಭವಿಷ್ಯ?

ಸಾರಾಂಶ

ಸ್ಟೀಫನ್ ಹಾಕಿಂಗ್ ಅಧ್ಯಯನದಲ್ಲಿ 2600ರ ವೇಳೆಗೆ ಭೂಮಿ ಬೆಂಕಿಗೋಳವಾಗಬಹುದೆಂದು ಭವಿಷ್ಯ ನುಡಿದಿದ್ದರು. ಮಾನವನ ಅತಿ ಬಳಕೆ, ಜನಸಂಖ್ಯಾ ವೃದ್ಧಿಯೇ ಕಾರಣ ಎಂದಿದ್ದರು. ಆದರೆ ನಾಸಾ ಈ ಭವಿಷ್ಯವನ್ನು ಒಪ್ಪಿಲ್ಲ, ಆದರೂ ಹಾಕಿಂಗ್ ಆತಂಕಗಳನ್ನು ಗಂಭೀರವಾಗಿ ಪರಿಗಣಿಸಿ ಸಂಶೋಧನೆ ಮುಂದುವರೆಸುವುದಾಗಿ ತಿಳಿಸಿದೆ.

ಕ್ಯಾಲಿಫೋರ್ನಿಯಾ: ಭೂಮಿ ಯಾವಾಗ ನಾಶ ಆಗುತ್ತೆ ಅನ್ನೋ ಬಗ್ಗೆ ಚರ್ಚೆಗಳು ಯಾವಾಗಲೂ ಇದ್ದೇ ಇರುತ್ತೆ. ಭೂಮಿ ಒಮ್ಮೆಲೇ ಇಲ್ಲ ಆಗುತ್ತೆ ಅನ್ನೋದರಿಂದ ಹಿಡಿದು ಮಿಲಿಯನ್ ವರ್ಷಗಳ ನಂತರ ಅಂತೆಲ್ಲಾ ನಾನಾ ಥಿಯರಿಗಳು, ಅಧ್ಯಯನಗಳು, ಭವಿಷ್ಯಗಳು ವರದಿಯಾಗುತ್ತಲೇ ಇದೆ. ಸಂಶೋಧಕ, ಅಧ್ಯಯನಕಾರ ಸ್ಟೀಫನ್ ಹಾಕಿಂಗ್ ಭೂಮಿ ನಾಶದ ಬಗ್ಗೆ ಒಂದಿಷ್ಟು ಅಧ್ಯಯನ ಮಾಡಿ ಭವಿಷ್ಯ ನುಡಿದಿದ್ದಾರೆ . ಸ್ಟೀಫನ್ ನುಡಿದ ಭವಿಷ್ಯ ಇದೀಗ ಭಾರಿ ಚರ್ಚೆಯಾಗುತ್ತಿದೆ ಎಂದು ಎಕಾನಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಸ್ಟೀಫನ್ ಹಾಕಿಂಗ್ ಪ್ರಿಡಿಕ್ಷನ್

ಸ್ಟೀಫನ್  ಸಾಯೋದಕ್ಕೆ ಸ್ವಲ್ಪ ಮುಂಚೆ ಅಂದರೆ 2018 ರಲ್ಲಿ 'ದಿ ಸರ್ಚ್ ಫಾರ್ ನ್ಯೂ ಅರ್ಥ್' ಅನ್ನೋ ಡಾಕ್ಯುಮೆಂಟರಿಯಲ್ಲಿ ಭೂಮಿ ನಾಶದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.  2600ನೇ ಇಸವಿಯ ಬಗ್ಗೆ ಹಾಕಿಂಗ್ ಅವರ ಮಾತುಗಳು ಆಶ್ಚರ್ಯ ತಂದಿದ್ದವು. ಮನುಷ್ಯ ಭೂಮಿಯನ್ನ ಬಳಸೋ ರೀತಿಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳದಿದ್ದರೆ ಭೂಮಿ ಒಂದು ದೊಡ್ಡ ಬೆಂಕಿ ಉಂಡೆಯಾಗುತ್ತೆ ಅಂತ ಹಾಕಿಂಗ್ ಹೇಳಿದ್ರು. ಗ್ಲೋಬಲ್ ವಾರ್ಮಿಂಗ್, ಕ್ಲೈಮೇಟ್ ಚೇಂಜ್, ಗ್ರೀನ್ ಹೌಸ್ ಗ್ಯಾಸ್ ಎಲ್ಲಾ ಭೂಮಿ ನಾಶಕ್ಕೆ ಕಾರಣ ಆಗುತ್ತೆ ಅಂತ ಅವರು ಎಚ್ಚರಿಕೆ ಕೊಟ್ಟಿದ್ರು.

ಭೂಮಿಯಲ್ಲಿ ಮನುಷ್ಯನ ಸಸ್ಟೈನಬಲ್ ಅಲ್ಲದ ಎನರ್ಜಿ ಬಳಕೆ ಮತ್ತು ಜನಸಂಖ್ಯೆ ಹೆಚ್ಚಳದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸೋಕೆ ಹಾಕಿಂಗ್ ಈ ರೀತಿ ಹೇಳಿದ್ರು. ಜನಸಂಖ್ಯೆ ಬೇಗ ಬೇಗ ಹೆಚ್ಚಾಗ್ತಾ ಇರೋದು ಭೂಮಿಯನ್ನ ಬಿಸಿ ಉಂಡೆಯನ್ನಾಗಿ ಮಾಡಿ ವಾಸಯೋಗ್ಯವಲ್ಲದಂತೆ ಮಾಡುತ್ತೆ ಅಂತ ಹಾಕಿಂಗ್ ಹೇಳಿದ್ರು.

ನಾಸಾ ಕ್ಲಾರಿಫಿಕೇಷನ್

ಆದ್ರೆ ಭೂಮಿಯ ಕ್ಲೈಮೇಟ್ ಚೇಂಜ್ ಮತ್ತು ಭೂಬಳಕೆಯ ಬಗ್ಗೆ ಹಾಕಿಂಗ್ ಹೇಳಿದ್ದನ್ನ ನಾಸಾ ಗಂಭೀರವಾಗಿ ಪರಿಗಣಿಸಿದ್ರೂ, 2600 ರಲ್ಲಿ ಭೂಮಿ ನಾಶ ಆಗುತ್ತೆ ಅನ್ನೋದನ್ನ ಒಪ್ಕೊಂಡಿಲ್ಲ. ಕಳೆದ 50 ವರ್ಷಗಳಿಂದ ನಾಸಾ ಭೂಮಿಯ ಬಗ್ಗೆ ಸ್ಟಡಿ ಮಾಡ್ತಾ ಇದೆ. ಆದ್ರೆ 2600 ರಲ್ಲಿ ಭೂಮಿ ನಾಶ ಆಗುತ್ತೆ ಅಂತ ಹೇಳೋಕೆ ಆಗಲ್ಲ ಅಂತ ನಾಸಾ ವಕ್ತಾರ ಹೇಳಿದ್ದಾರೆ. ಹಾಕಿಂಗ್ ಹೇಳಿರೋ ಕೆಲವು ಆತಂಕಗಳನ್ನ ಗಂಭೀರವಾಗಿ ಪರಿಗಣಿಸಿ ಭೂಮಿಗೆ ಅಪಾಯ ತರೋ ಸಮಸ್ಯೆಗಳನ್ನ ಸಾಲ್ವ್ ಮಾಡೋಕೆ ನಾಸಾ ಸ್ಟಡಿಗಳನ್ನ ಮುಂದುವರಿಸುತ್ತೆ ಅಂತ ಹೇಳಿದ್ದಾರೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ