ಚಲಿಸುವ ಮೋಡಗಳ ತೂಕವೆಷ್ಟಿರುತ್ತೆ ಗೊತ್ತಾ?

By Anusha Kb  |  First Published Dec 6, 2024, 3:22 PM IST

ಜನರ ಕುತೂಹಲಕ್ಕೇನು ಕಡಿಮೆ ಇಲ್ಲ, ಜನರ ಈ ವಿಚಿತ್ರವಾದ ಕುತೂಹಲದ ಬಗ್ಗೆ ಸರ್ಚ್ ಎಂಜಿನ್ ಗೂಗಲ್ ಗೂಗ್ಲಿ ಎಂಬ  ಕ್ಯಾಂಪೇನ್ ಶುರು ಮಾಡಿದೆ.


ಇಡೀ ಜಗತ್ತೇ ಹಲವು ಪ್ರಾಕೃತಿಕ ವೈಚಿತ್ರಗಳಿಂದ ಹೆಸರುವಾಸಿಯಾಗಿದೆ. ಕೆಲವು ಕುತೂಹಲಕಾರಿ ಪ್ರಶ್ನೆಗಳಿಗೆ ನಮ್ಮಲ್ಲಿ ಇನ್ನೂ ಉತ್ತರವಿಲ್ಲ,  ಆದರೆ ಜನರ ಕುತೂಹಲಕ್ಕೇನು ಕಡಿಮೆ ಇಲ್ಲ, ಮೊದಲೆಲ್ಲಾ ಜನ ತಮ್ಮ ಸ್ನೇಹಿತರು ಅವರಿವರ ಬಳಿ, ತಮ್ಮ ಕುತೂಹಲದ ಪ್ರಶ್ನೆಗೆ ಉತ್ತರ ಕೇಳುತ್ತಿದ್ದರು. ಆದರೆ ಈಗ ಕೈಯಲ್ಲಿ ಸ್ಮಾರ್ಟ್ಫೋನ್, ಇದ್ದು, ಇಂಟರ್‌ನೆಟ್ ಜೊತೆ ನೀವು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸಲು ಗೂಗಲ್ ಇದೆ. ಕಾಮನಬಿಲ್ಲಿನ ಆಕಾರ, ಬಣ್ಣದ ಬಗ್ಗೆ, ಬೆಂಕಿಯ ಜ್ವಾಲೆಯ ಬಣ್ಣ ಹೀಗೆ ಹಲವು ಕುತೂಹಲಗಳು ಅನೇಕರನ್ನು ಕಾಡುತ್ತದೆ. ಜನರ ಈ ವಿಚಿತ್ರವಾದ ಕುತೂಹಲದ ಬಗ್ಗೆ ಗೂಗಲ್‌ಗೂ ಗೊತ್ತು. ಇದೇ ಕಾರಣಕ್ಕೆ ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಸರ್ಚ್ ಎಂಜಿನ್ ಗೂಗಲ್ ಗೂಗ್ಲಿ ಎಂಬ  ಕ್ಯಾಂಪೇನ್ ಶುರು ಮಾಡಿದೆ. ಪ್ರತಿಯೊಂದು ಗೂಗ್ಲಿಯೂ ಈ ರೀತಿಯ ಕುತೂಹಲಕಾರಿ ಪ್ರಶ್ನೆ, ವಿಚಾರ ಹಾಗೂ ಉತ್ತರಗಳನ್ನು ಹೊಂದಿದ್ದು, ಅಶ್ಚರ್ಯಕರವಾದ ಆದರೆ ಕೆಲವೊಮ್ಮೆ ನಮ್ಮನ್ನು ದಾರಿ ತಪ್ಪಿಸುವ ಉತ್ತರವನ್ನೂ ನೀಡುತ್ತದೆ. 

ಈ ಗೂಗಲ್ ಗೂಗ್ಲಿಗಳು ಸೋಶಿಯಲ್ ಮೀಡಿಯಾ ಫೀಡ್‌ಗಳಲ್ಲಿ, ಟಿವಿ ಸ್ಕ್ರೀನ್‌ಗಳ ಮೇಲೆ ಔಟ್‌ಡೋರ್‌ಗಳಲ್ಲಿರುವ ಹೋರ್ಡಿಂಗ್ಸ್‌ಗಳಲ್ಲಿ, ನ್ಯೂಸ್ ಪೇಪರ್‌, ಉತ್ಪನ್ನಗಳ ಪ್ಯಾಕೇಜ್ ಮೇಲೆ ಹೀಗೆ ಎಲ್ಲೆಂದರಲ್ಲಿ ಇದು ಇರಲಿದೆ ಎಂದು ಗೂಗಲ್ ಹೇಳಿದೆ. 50 ಪ್ರಶ್ನೆಗಳ ಆನ್‌ಲೈನ್ ಗೂಗಲ್ ಗೂಗ್ಲಿ ಆರ್ಕೈವ್ ಪ್ರಕಾರ, ಈ ದೈನಂದಿನ, ಕುತೂಹಲ  ಆಧಾರಿತ ಪ್ರಶ್ನೆಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಒಂದು ನಿರ್ದಿಷ್ಟವಾಗಿ ಕುತೂಹಲಕಾರಿ ಪ್ರಶ್ನೆ ಏನೆಂದರೆ ಮೋಡದ ತೂಕ ಎಷ್ಟು? ಎಂಬುದು. ಇಂತಹ ಕುತೂಹಲ ನಿಮಗ್ಯಾವತ್ತಾದರು ಬಂದಿದೆಯಾ? 

Tap to resize

Latest Videos

ಈ ಪ್ರಶ್ನೆಗೆ ಗೂಗಲ್‌ನ ಗೂಗ್ಲಿ ಉತ್ತರಿಸಿದ್ದು, ಮೋಡಗಳ ತೂಕ ಅದರ ಗಾತ್ರ ಹಾಗೂ ದಟ್ಟತೆಯನ್ನು ಅವಲಂಬಿಸಿದೆ. ಆದರೆ ಸಾಕಷ್ಟು ಕಡಿಮೆ ಎತ್ತರದಲ್ಲಿ ಸಮತಟ್ಟಾದ ತಳದ ಮೇಲೆ ಪರಸ್ಪರ ರಾಶಿಯಾದ ದುಂಡಗಿನ ಮೋಡವೂ (cumulus cloud) 5 ಲಕ್ಷ ಕೆಜಿ ತೂಕ ಇರುವುದಂತೆ. ಇದು ಸಾಮಾನ್ಯವಾಗಿ 100 ಆನೆಗಳ ತೂಕಕ್ಕೆ ಸಮ.  ಮೋಡಗಳ ತೂಕದ ಮೇಲೆ ಅದರ ಸುತ್ತಲಿರುವ ಗಾಳಿ ಪರಿಣಾಮ ಬೀರುತ್ತದೆ.  ಉದಾಹರಣೆಗೆ  ಈ ಕ್ಯುಮುಲಸ್ ಮೋಡವೂ ಪ್ರತಿ ಕ್ಯೂಬಿಕ್ ಮೀಟರ್‌ಗೆ 1 ಕೇಜಿಯಷ್ಟು ತೂಕವಿರುತ್ತದೆ. ಇದು ಮೋಡದಲ್ಲಿನ ನೀರಿಗಿಂತ 4 ಸಾವಿರ ಪಟ್ಟು ಹೆಚ್ಚು. ಅಲ್ಲದೇ ಮೋಡಗಳು ನೋಡುವುದಕ್ಕೆ ನೀರಿನ ಹನಿಗಳಂತೆ ಹಾಗೂ ಮಂಜುಗಡ್ಡೆಯ ತುಂಡುಗಳಂತೆ ಕಾಣುತ್ತವೆ. ಇವುಗಳು ಗಾಳಿಯಲ್ಲಿ ತೇಲಾಡುವಷ್ಟು ಸಣ್ಣದಾಗಿರುತ್ತವೆ.  ಇದು ಬಿಸಿಯಾದಾಗ ಏರುತ್ತದೆ ಹಾಗೂ ತಂಪಾಗುತ್ತದೆ. ಜೊತೆಗ ಘನೀಕರಣವನ್ನು ಉಂಟು ಮಾಡುತ್ತದೆ, ಅಲ್ಲದೇ ಈ ಹನಿಗಳು ಜೊತೆ ಸೇರಿ ಮಳೆಯಾಗುತ್ತವೆ ಅಥವಾ ಹಿಮವಾಗುತ್ತದೆ ಎಂದು ಗೂಗಲ್‌ನ ಗೂಗ್ಲಿ ಉತ್ತರಿಸಿದೆ. 

ಈ ಉತ್ತರ ಸರಿಯಾಗಿದೆಯೋ ಎಂಬುದನ್ನೂ ಗೂಗಲೇ ತಿಳಿಸಬೇಕಷ್ಟೇ.!

click me!