ಪ್ರಾಣ ಕಳೆದುಕೊಳ್ಳಲು ಅಸ್ಸಾಂನ ಪುಟ್ಟ ಗ್ರಾಮಕ್ಕೆ ಬರೋ ಪಕ್ಷಿಗಳು; ಗ್ರಾಮಸ್ಥರಲ್ಲಿ ಭಯ

Published : Sep 27, 2026, 12:40 PM IST
Bird

ಸಾರಾಂಶ

ಈ ಗ್ರಾಮದಲ್ಲಿ ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪುವ ವಿಚಿತ್ರ ವಿದ್ಯಮಾನ ನಡೆಯುತ್ತದೆ. ಈ ವಿದ್ಯಮಾನದಿಂದ ಜಟಿಂಗಾ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ. ಅತೀಂದ್ರಿಯ ಅಥವಾ ದೈವಿಕ ಶಕ್ತಿಗಳಿಂದ ಉಂಟಾಗುತ್ತವೆ ಎಂಬ ಚರ್ಚೆ ಗ್ರಾಮಸ್ಥರಲ್ಲಿ ನಡೆಯುತ್ತಿದೆ.

ನವದೆಹಲಿ: ಮಳೆಗಾಲ ಮುಕ್ತಾಯ ಸಮಯದಲ್ಲಿ ಅಂದ್ರೆ ಸೆಪ್ಟೆಂಬರ್ ಮತ್ತು ನವೆಂಬರ್ ಅವಧಿ ನಡುವೆ ವಿಚಿತ್ರ ವಿದ್ಯಮಾನವೊಂದಕ್ಕೆ ಅಸ್ಸಾಂನ ಪುಟ್ಟ ಗ್ರಾಮ ಸಾಕ್ಷಿಯಾಗುತ್ತದೆ. ಇತ್ತೀಚೆಗೆ ಈ ಗ್ರಾಮವನ್ನು ಪಕ್ಷಿಗಳ ಆತ್ಮ*ತ್ಯೆ ಹಳ್ಳಿ ಎಂದು ಗುರುತಿಸಲಾಗುತ್ತಿದೆ. ಈ ಹಳ್ಳಿಗೆ ಬಂದು ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತವೆ ಎಂದು ಇಲ್ಲಿಯ ಜನರು ಹೇಳುತ್ತಾರೆ. ಹಾಗಾದ್ರೆ ಯಾವುದು ಈ ಗ್ರಾಮ? ಪಕ್ಷಿಗಳ ನಿಗೂಢ ಸಾವಿಗೆ ಕಾರಣ ಏನು ಎಂದು ನೋಡೋಣ ಬನ್ನಿ.

ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯ ಜಟಿಂಗಾ ಹೆಸರಿನ ಗ್ರಾಮ ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ದೇಶದ ಗಮನವನ್ನು ಸೆಳೆಯುತ್ತದೆ. ಈ ಮೂರು ತಿಂಗಳ ಅವಧಿಯಲ್ಲಿ ನಿಮಗೆ ಸತ್ತ ಪಕ್ಷಿಗಳ ದೇಹ ಹೆಚ್ಚಾಗಿ ಕಾಣಿಸುತ್ತವೆ. ಈ ಪ್ರದೇಶದಲ್ಲಿ ಯಾಕೆ ಪಕ್ಷಿಗಳು ಅತ್ಯಧಿಕವಾಗಿ ಸಾಯುತ್ತವೆ ಎಂಬುದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ದಟ್ಟವಾದ ಮಂಜು, ವೇಗವಾದ ಗಾಳಿ

ಪಕ್ಷಿಗಳು ಸಾವಿಗೆ ಇಲ್ಲಿಯ ವಾತಾವರಣ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸೆಪ್ಟೆಂಬರ್ ಮತ್ತು ನವೆಂಬರ್ ಅವಧಿ ನಡುವೆ ಈ ಭಾಗದ ವಾತಾವರಣ ದಟ್ಟವಾದ ಮಂಜು ಮತ್ತು ವೇಗವಾದ ಗಾಳಿಯನ್ನು ಹೊಂದಿರುತ್ತದೆ. ಗಾಳಿಯ ದಿಕ್ಕಿನಲ್ಲಾಗುವ ಬದಲಾವಣೆಗಳಿಂದ ಪಕ್ಷಿಗಳಿಗೆ ಸಂಚರಿಸಲು ಕಷ್ಟವಾಗುತ್ತದೆ. ಹಾಗೆಯೇ ರಾತ್ರಿ ಸಮಯದಲ್ಲಿ ಮಂಜಿನ ಜೊತೆ ಕತ್ತಲೆ ಆವರಿಸಿರೋದರಿಂದ ಪಕ್ಷಿಗಳು ಗೊಂದಲಕ್ಕೊಳಗಾಗುತ್ತವೆ. ಈ ವೇಳೆ ಪಕ್ಷಿಗಳು ಸಾಮಾನ್ಯ ದಿಕ್ಸೂಚಿಯನ್ನು ಕಳೆದುಕೊಂಡು ಕಣಿವೆ ಪ್ರದೇಶದಲ್ಲಿ ಸಿಲುಕಿಕೊಂಡು ಸಾಯುತ್ತವೆ.

ಕೃತಕ ಬೆಳಕಿನತ್ತ ಆಕರ್ಷಣೆ

ರಾತ್ರಿ ಕತ್ತಲೆ ಜೊತೆ ಮಂಜು ಆವರಿಸಿದಾಗ ಪಕ್ಷಿಗಳು, ಕೃತಕ ಬೆಳಕಿನತ್ತ ಆಕರ್ಷಿತವಾಗುತ್ತವೆ. ಹಳ್ಳಿಗಳಲ್ಲಿರುವ ಬೀದಿ ದೀಪ, ಮನೆ ದೀಪಗಳತ್ತ ಪಕ್ಷಿಗಳು ಆಗಮಿಸುತ್ತವೆ. ಕಳಪೆ ಗೋಚರತೆಯಲ್ಲಿ ಪಕ್ಷಿಗಳ ಗೂಡು ಕಟ್ಟುವಿಕೆ ಸಾಮಾರ್ಥ್ಯ ಕುಂಠಿತವಾಗುತ್ತದೆ. ಜಟಿಂಗಾ ಗ್ರಾಮದ ಅಸಾಮಾನ್ಯ ಹವಾಮಾನ, ಭೌಗೋಳಿಕತೆ ಮತ್ತು ಕೃತಕ ಬೆಳಕು, ಸಂಚರಣೆ ತೊಂದರೆಗಳಿಂದ ಪಕ್ಷಿಗಳು ಇಲ್ಲಿ ಸಾಯುತ್ತಿವೆ.

ಪಕ್ಷಿಗಳ ಸಾವು ಏಕೆ?

ಪಕ್ಷಿಗಳು ಕೃತಕ ಬೆಳಕಿನತ್ತ ಬರುತ್ತಿರುವಾಗ ಮಾರ್ಗ ಮಧ್ಯೆದಲ್ಲಿನ ವಸ್ತುಗಳಿಗೆ ಪಕ್ಷಿಗಳು ಡಿಕ್ಕಿ ಹೊಡೆಯುತ್ತವೆ. ಮಂಜು ಮತ್ತು ಕತ್ತಲೆಯಿಂದಾಗಿ ಪಕ್ಷಿಗಳಿಗೆ ಮರಗಳು, ಮನೆಗಳು, ಬಿದಿರಿನ ಕಂಬಗಳು ಮತ್ತು ಇತರ ರಚನೆಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಈ ಕಾರಣದಿಂದ ಕೆಲ ಪಕ್ಷಿಗಳು ಸತ್ತರೆ, ಮತ್ತೊಂದಿಷ್ಟು ಗಾಯಗೊಂಡು ನೆಲಕ್ಕೆ ಬೀಳುತ್ತವೆ. ಗಾಯಗೊಂಡ ಪಕ್ಷಿಗಳು ಗ್ರಾಮದಲ್ಲಿನ ನಾಯಿ ಅಂತಹ ಪ್ರಾಣಿಗಳಿಗೆ ಆಹಾರವಾಗುತ್ತವೆ.

ಭೂವಿಜ್ಞಾನಿಗಳಿಂದ ಬೇರೊಂದು ವಾದ?

ಈ ವಿದ್ಯಮಾನಕ್ಕೆ ಭೂವಿಜ್ಞಾನಿಗಳು ಮತ್ತೊಂದು ಸಂಭಾವ್ಯ ವಿವರಣೆಯನ್ನು ನೀಡುತ್ತಾರೆ. ಭೂಮಿಯ ಒಡಲಾಳದ ನೀರು (ಅಂತರ್ಜಲ) ಹರಿವು ಮತ್ತು ಕಣಿವೆ ಪ್ರದೇಶದ ವಿಶಿಷ್ಟ ಭೌಗೋಳಿಕ ರಚನೆಯು ಸ್ಥಳೀಯ ಕಾಂತಕ್ಷೇತ್ರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಉಂಟುಮಾಡಬಹುದು. ಈ ಕಾಂತೀಯ ಬದಲಾವಣೆಯು ಪಕ್ಷಿಗಳ ಆಂತರಿಕ ಸಂಚರಣೆಯಲ್ಲಿ ಸಂಭಾವ್ಯ ಹಸ್ತಕ್ಷೇಪವನ್ನುಂಟು ಮಾಡಬಹುದು. ಆದ್ರೆ ಈ ಸಂಭಾವ್ಯ ದೃಢೀಕರಣಗೊಳ್ಳದ ಕಾರಣ, ಇದನ್ನು ಒಂದು ಅಭಿಪ್ರಾಯ ಎಂದು ಮಾತ್ರ ಪರಿಗಣಿಸಲಾಗಿದೆ.

ಗ್ರಾಮಸ್ಥರಲ್ಲಿ ಭಯ

ಸಾಲು ಸಾಲು ಪಕ್ಷಿಗಳ ಸಾವಿನಿಂದ ಜಟಿಂಗಾ ಗ್ರಾಮಸ್ಥರಲ್ಲಿ ಆತಂಕವುಂಟಾಗಿತ್ತು. ಇದು ಗ್ರಾಮದೇವತೆಯ ಕೋಪ ಎಂದು ಭಯಗೊಂಡಿದ್ದರು. ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು, ವೈಜ್ಞಾನಿಕ ಕಾರಣಗಳನ್ನು ನೀಡಿ ಘಟನೆಯನ್ನು ವಿವರಿಸಿದ್ದಾರೆ. ಹಾಗೆಯೇ ಗಾಯಗೊಂಡ ಪಕ್ಷಿಗಳ ರಕ್ಷಣೆಗೆ ಮುಂದಾಗುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 3 ದಶಕದಲ್ಲಿಯೇ ಕಂಡರಿಯದ ನೇರಳೆ ಹಣ್ಣಿನ ರಾಶಿ: ಭೀಕರ ಬರಗಾಲದ ಮುನ್ಸೂಚನೆ? ವಿಜ್ಞಾನಿಗಳು ಹೇಳೋದೇನು?

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸೂರ್ಯನ ಬೆಳಕು ಹಠಾತ್ ನಿಂತು ಹೋದರೆ 8 ನಿಮಿಷಗಳ ನಂತರ ಭೂಮಿಗೆ ಏನಾಗಲಿದೆ? ಭೌತಶಾಸ್ತ್ರದ ನಿಯಮ ಏನು ಹೇಳುತ್ತದೆ?
1000 ವರ್ಷದ ಕಗ್ಗಂಟು! 'ಕೋಳಿ ಮೊದಲಾ, ಮೊಟ್ಟೆ ಮೊದಲಾ?' ಪ್ರಶ್ನೆಗೆ ಉತ್ತರ ಹುಡುಕಿದ ವಿಜ್ಞಾನಿಗಳು!