
ಫ್ಲಾರಿಡಾ (ಮಾ.13): ಕಳೆದ ಒಂಭತ್ತು ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಕ್ಕಿಬಿದ್ದಿರುವ ನಾಸಾ ಗಗನಯಾತ್ರಿಗಳಾದ ಬ್ಯಾರಿ ವಿಲ್ಮೋರ್ ಹಾಗೂ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಪಾಲಿಗೆ ನಿರಾಶಾದಾಯಕ ಸುದ್ದಿ ತಲುಪಿದೆ. ಇವರಿಬ್ಬರೂ ಭೂಮಿಗೆ ಬರೋದು ಇನ್ನು ಕೊಂಚ ತಡವಾಗಲಿದ್ದು, ಇವರ ಬದಲಿಯಾಗಿ ಬಾಹ್ಯಾಕಾಶಕ್ಕೆ ಹೋಗಬೇಕಿದ್ದ ಗಗನಯಾತ್ರಿಗಳ ಬಾಹ್ಯಾಕಾಶ ನೌಕೆ ಉಡಾವಣೆ ವಿಳಂಬಗೊಂಡಿದೆ. ನಾಸಾ-ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್‌ನ ಗಗನಯಾತ್ರಿಗಳಿದ್ದ ಫಾಲ್ಕನ್-9 ರಾಕೆಟ್ ಬುಧವಾರ ಅಮೆರಿಕದ ಸ್ಥಳೀಯ ಕಾಲಮಾನ 7.48ರ ವೇಳೆಗೆ (ಭಾರತೀಯ ಕಾಲಮಾನ ಮಧ್ಯರಾತ್ರಿ 1.30) ಫ್ಲಾರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ಉಡಾವಣೆಯಾಗಬೇಕಿತ್ತು. ಆದರೆ, ಉಡಾವಣೆಯಾಗಲು ಇನ್ನೇನು 45 ನಿಮಿಷ ಇರುವಾಗ ಬುಧವಾರದ ಲಾಂಚ್‌ಅನ್ನು ರದ್ದು ಮಾಡಲಾಗಿದೆ.
ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ನೌಕೆಯ ಒಳಗೆ ಹೊಕ್ಕಿದ್ದರು. ಆದರೆ, ಈ ವೇಳೆ ತಾಂತ್ರಿಕ ಸಮಸ್ಯೆ ಎದುರಿಸಿದ ಕಾರಣಕ್ಕೆ ಉಡಾವಣೆಯನ್ನು ರದ್ದು ಮಾಡಲಾಗಿದೆ. ಗ್ರೌಂಡ್ ಸೈಡ್‌ನಲ್ಲಿರುವ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ಸಮಸ್ಯೆ ಇತ್ತು ಎಂದು ನಾಸಾ ಉಡಾವಣಾ ನಿರೂಪಕ ಡೆರೋಲ್ ನೈಲ್ ಹೇಳಿದ್ದಾರೆ. "ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಯಲ್ಲಿ ಎಲ್ಲವೂ ಸರಿಯಾಗಿತ್ತು" ಎಂದು ಮಾಹಿತಿ ನೀಡಿದ್ದಾರೆ.
ಹಾಗಂತ ಈ ರಾಕೆಟ್ ಉಡಾವಣೆ ಏನೂ ತೀರಾ ಮುಂದೆ ಹೋಗಿಲ್ಲ. ಗುರುವಾರ ನೌಕೆಯನ್ನು ಉಡಾವಣೆ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದುಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಬಾಹ್ಯಾಕಾಶ ಸಲಹಾ ಸಂಸ್ಥೆ ತೋರಿಸಿದ್ದು, ಶುಕ್ರವಾರವೂ ಬ್ಯಾಕಪ್ ಅವಕಾಶವಿದೆ.
ನಾಸಾ ಜೋಡಿ ಬುಚ್ ಬ್ಯಾರಿ ವಿಲ್ಮೋರ್ ಮತ್ತು ಸುನಿ ವಿಲಿಯಮ್ಸ್ ಅವರ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ಪ್ರೊಪಲ್ಷನ್ ಸಮಸ್ಯೆಗಳನ್ನು ಎದುರಿಸಿತ್ತು. ಇದರಿಂದಾಗಿ ಗಗನಯಾತ್ರಿಗಳೊಂಡಿಗೆ ಬೋಯಿಂಗ್ ಸ್ಟಾರ್‌ಲೈನರ್ ಭೂಮಿಗೆ ವಾಪಾಸಾಗೋದು ಕಷ್ಟ ಎಂದು ನಿರ್ಧಾರ ಮಾಡಿದ್ದರಿಂದ ಕಳೆದ ಜೂನ್‌ನಿಂದ ಇವರು ಬ್ಯಾಹಾಕಾಶ ನಿಲ್ದಾಣದಲ್ಲಿಯೇ ವಾಸವಿದ್ದಾರೆ. ಖಾಲಿ ನೌಕೆ ಸೆಪ್ಟೆಂಬರ್‌ನಲ್ಲಿ ಭೂಮಿಗೆ ವಾಪಸಾಗಿತ್ತು.
ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಸುನೀತಾ ವಿಲಿಯಮ್ಸ್‌ಗೆ ಆಗಲಿದೆ Baby Feet ಅನುಭವ!
ಬಚ್ ವಿಲ್ಮೋರ್ ಹಾಗೂ ಸುನೀತಾ ವಿಲಿಯಮ್ಸ್ ಜೂನ್‌ನಲ್ಲಿ ಕೇವಲ 8 ದಿನಗಳ ಮಿಷನ್‌ಗಾಗಿ ಅವರು ಬಾಹ್ಯಾಕಾಶಕ್ಕೆ ಹೋಗಿದ್ದರು. ಬಳಿಕ ಇವರನ್ನು ಕ್ರೂ-9 ಸಿಬ್ಬಂದಿಯಾಗಿ ನಾಸಾ ಬದಲಾವಣೆ ಮಾಡಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೌಕೆಯಲ್ಲಿ ಕ್ರೂ-9 ಸಿಬ್ಬಂದಿಯಾಗಿ ಕೇವಲ ಇಬ್ಬರು ಗಗನಯಾತ್ರಿಗಳು ಬಂದಿದ್ದರು. ಸಾಮಾನ್ಯವಾಗಿ ಒಂದು ಬಾಹ್ಯಾಕಾಶ ನೌಕೆಯಲ್ಲಿ ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ ಬರುತ್ತಾರೆ. ಆದರೆ, ಕ್ರೂ-10 ನೌಕೆಯಲ್ಲಿ ಸುನೀತಾ ಹಾಗೂ ವಿಲ್ಮೋರ್ ವಾಪಾಸ್ ಬರಬೇಕು ಎನ್ನುವ ಕಾರಣಕ್ಕೆ ಹಿಂದಿನ ನೌಕೆಯಲ್ಲಿ ಕೇವಲ ಇಬ್ಬರು ಗಗನಯಾತ್ರಿಗಳನ್ನು ನಾಸಾ ಕಳಿಸಿತ್ತು. ಕ್ರೂ-10 ನೌಕೆ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದ ಬಳಿಕವೇ, ಕ್ರೂ-9 ಗಗನಯಾತ್ರಿಗಳು ಭೂಮಿಗೆ ಬರಲು ಸಾಧ್ಯವಾಗಲಿದೆ.
ಗುರುವಾರ ಅಥವಾ ಶುಕ್ರವಾರವೇನಾದರೂ ಕ್ರೂ-10 ನೌಕೆ ಉಡಾವಣೆ ಆದಲ್ಲಿ, ಭಾನುವಾರ ಸುನೀತಾ ವಿಲಿಯಮ್ಸ್, ಬಚ್ ವಿಲ್ಮೋರ್ ಇರುವ ಕ್ರೂ-9 ನೌಕೆ ಐಎಸ್‌ಎಸ್‌ನಿಂದ ಹೊರಟು ಭೂಮಿಗೆ ವಾಪಾಸಾಗಲಿದೆ. ಒಂದು ಗಂಟೆಯಲ್ಲಿ ಇವರ ಪ್ರಯಾಣ ಮುಕ್ತಾಯವಾಗಲಿದೆ.
'We will miss you' ಭೂಮಿಗೆ ಬರುವ ಮುನ್ನ ಸುನೀತಾ ವಿಲಿಯಮ್ಸ್ ಭಾವುಕ, ಈ ದಿನ ಲ್ಯಾಂಡ್ ಆಗಲಿದ್ದಾರೆ ಗಗನಯಾತ್ರಿ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.