ಭೂಮಿ ರೀತಿ ಜೀವಿಗಳು ವಾಸಿಸಲು ಯೋಗ್ಯವಾದ ಹೊಸ ಗ್ರಹ ಪತ್ತೆ, ಇಲ್ಲಿ ಏಲಿಯನ್ ಇದೆಯಾ?

Published : Mar 12, 2025, 04:57 PM ISTUpdated : Mar 12, 2025, 05:00 PM IST
ಭೂಮಿ ರೀತಿ ಜೀವಿಗಳು ವಾಸಿಸಲು ಯೋಗ್ಯವಾದ ಹೊಸ ಗ್ರಹ ಪತ್ತೆ, ಇಲ್ಲಿ ಏಲಿಯನ್ ಇದೆಯಾ?

ಸಾರಾಂಶ

ಭೂಮಿ ರೀತಿಯಲ್ಲೇ ಜೀವಿಗಳ ವಾಸಿಸಲು ಪೂರಕವಾದ ಪರಿಸರವಿರುವ ಹೊಸ ಗ್ರಹವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಕಳೆದ 20 ವರ್ಷಗಳಿಂದ ನಡೆಸಿದ ಅಧ್ಯಯನಕ್ಕೆ ಫಲ ಸಿಕ್ಕಿದೆ. ಸೂಪರ್ ಅರ್ಥ್ ಎಂದು ಹೆಸರಿರುವ ಈ ಗ್ರಹ,ಭೂಮಿಯಿಂದ ಎಷ್ಟು ದೂರದಲ್ಲಿದೆ? ಇಲ್ಲಿ ಜನ ವಾಸಿಸಲು ಸಾಧ್ಯವೆ?

ಸ್ಪೇನ್(ಮಾ.12) ಗ್ರಹ, ನಕ್ಷತ್ರಗಳ ಚಲನವಲನ ಸೇರಿದಂತೆ  ಬಾಹ್ಯಾಕಾಶದ ಅಧ್ಯಯನ ನಿರಂತರ. ಪ್ರತಿ ಅಧ್ಯಯನ, ಸಂಶೋಧನೆಯಲ್ಲಿ ಹೊಸ ಹೊಸ ಮಾಹಿತಿಗಳು ಹೊರಬರುತ್ತದೆ. ಕಳೆದ 20 ವರ್ಷದಿಂದ ಸ್ಪೇನ್‌ನ IAC ಹಾಗೂ ULL ಬಾಹ್ಯಾಕಾಶ ಸಂಸ್ಥೆಗಳು ನಡೆಸಿದ ಅಧ್ಯಯನಕ್ಕೆ ಫಲ ಸಿಕ್ಕಿದೆ. ವಿಶೇಷ ಅಂದರೆ ಭೂಮಿ ರೀತಿ, ಜೀವಿಗಳು ವಾಸಿಸಲು ಪೂರಕವಾಗಿರುವ ವಾತಾವರಣದ ಗ್ರಹವನ್ನು ಪತ್ತೆ ಹಚ್ಚಿದ್ದಾರೆ. ಈ ಗ್ರಹಕ್ಕೆ ವಿಜ್ಞಾನಿಗಳು ಸ್ಟಾರ್ HD 20794 ಡಿ ಎಂದು ಹೆಸರಿಡಲಾಗಿದೆ.

ಈ ಗ್ರಹದ ಗಾತ್ರ ದೊಡ್ಡದಿಲ್ಲ. ಆದರೆ ಭೂಮಿಗಿಂತ ದೊಡ್ಡದು. ಈ ಗ್ರಹದಲ್ಲಿ ಭೂಮಿ ರೀತಿಯ ವಾತಾವರಣ ಕಾಣಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೂರ್ಯ, ಚಂದ್ರನಿಂದ ಭೂಮಿ ಇರುವ ದೂರದ ರೀತಿಯಲ್ಲೇ ಈ ಗ್ರಹವೂ ಸರಿಯಾಗಿ ನೆಲೆಯಾಗಿದೆ. ಗ್ರಹಗಳ ರೇಖೆಯಲ್ಲಿ ಈ ಸೂಪರ್ ಅರ್ಥ್ ಕಕ್ಷೆಯಲ್ಲಿ ತಿರುಗುತ್ತದೆ. ಈ ಗ್ರಹ ಭೂಮಿಯಿಂದ 20 ಬೆಳಕಿನ ವರ್ಷಗಳ ಅಂತರದಲ್ಲಿದೆ. ಹೀಗಾಗಿ ಇತರ ಗ್ರಹಗಳಿಗೆ ಹೋಲಿಸಿದರೆ ಈ ಸೂಪರ್ ಅರ್ಥ್ ಗ್ರಹದ ದೂರ ಕಡಿಮೆ.

ಹೋಳಿ ಹಬ್ಬದ ದಿನ ವರ್ಷದ ಮೊದಲ ಚಂದ್ರ ಗ್ರಹಣ, ಭಾರತದಲ್ಲಿ ಗೋಚರಿಸುತ್ತಾ ಬ್ಲಡ್ ಮೂನ್?

ಭೂಮೀ ರಿತಿಯ ವಾತಾವರಣ ಹೊಂದಿರುವ ಈ HD 20794 d ಗ್ರಹ ತನ್ನ ನಕ್ಷತ್ರಗಳ ಸುತ್ತ ಬರೋಬ್ಬರಿ 647 ದಿನಗಳಲ್ಲಿ ಒಂದು ಸುತ್ತು ಪೂರ್ಣಗೊಳಿಸುತ್ತದೆ. ಜೊತೆಗೆ ಭೂಮಿ ರೀತಿಯಲ್ಲಿ ಇದು ಕಕ್ಷೆಯೊಳಗೆ ಸುತ್ತುತ್ತಿರುವ ಕಾರಣ ಇಲ್ಲಿ ನೀರಿನ ಇರುವಿಕೆ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಗ್ರಹದ ಕುರಿತು ಮತ್ತಷ್ಟು ಅಧ್ಯಯನಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಬಾಹ್ಯಾಕಾಶದಲ್ಲಿರುವ ಗ್ರಹಗಳ ಪೈಕಿ ಭೂಮಿ ರೀತಿಯಲ್ಲೇ ಇರುವ ಮತ್ತಷ್ಟು ಗ್ರಹಗಳಿದೆ. ಇದೀಗ ಪತ್ತೆಯಾಗಿರುವ ಈ ಹೊಸ ಗ್ರಹ ಏಲಿಯನ್ ವಾಸಿಸುವ ಗ್ರಹಗಳಾಗಿರಬಹುದೇ ಅನ್ನೋ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ.  ಇದೇ ಗ್ರಹದಿಂದ ಅನ್ಯಗ್ರ ಜೀವಿಗಳು ಭೂಮಿಗೆ ಬರುುತ್ತಿದೆಯಾ ಎಂದು ಹಲವರು ಪ್ರಶ್ನಿಸಿದ್ದಾರೆ.

ಸದ್ಯ ವಿಜ್ಞಾನಿಗಳು ಪತ್ತೆ ಹಚ್ಚಿರುವ HD 20794 d ಗ್ರಹದಲ್ಲಿ ಯಾವುದೇ ಜೀವಿಗಳಿರುವ ಕುರಿತು ಮಾಹಿತಿ ಇಲ್ಲ. ಇರುವಿಕೆಯ ಸಾಧ್ಯತೆ ಕಡಿಮೆ. ಆದರೆ ಭೂಮಿಗೆ ಹೋಲಿಕೆಯಾಗುತ್ತಿರುವ ಕಾರಣ ಹಾಗೂ ದ್ರವಗಳು ಸೃಷ್ಟಿಯಾಗ ಬಲ್ಲ, ನೀರು ಇರಬಲ್ಲ ಸಾಧ್ಯತೆಗಳು ಇರುವುದರಿಂದ ಇದು ಜೀವಿಗಳಿಗೆ ವಾಸಿಸಲು ಪೂರಕ ವಾತಾವರಣದ ಗ್ರಹವಾಗಿರಬುಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಚಂದ್ರಯಾನ 3 ಅಧ್ಯಯನ ವರದಿ ಬಹಿರಂಗ, ಚಂದ್ರನ ಮೇಲಿದೆ ಮಂಜುಗಡ್ಡೆ
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ