ಬಾಹ್ಯಾಕಾಶದಲ್ಲಿ ಚೀನಾದಿಂದ ಸೌರ ವಿದ್ಯುತ್ ಸ್ಥಾವರ? 2028ಕ್ಕೆ ವಿದ್ಯುತ್ ಉತ್ಪಾದನೆ

By Suvarna News  |  First Published Jun 28, 2022, 10:06 AM IST

*ಬಾಹ್ಯಾಕಾಶದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಲು ಮುಂದಾದ ಚೀನಾ
*ಸ್ಪೇಸ್‌ನಲ್ಲಿ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸಲು ವಿದ್ಯುತ್ ಉತ್ಪಾದನೆ
*2028ರ ಹೊತ್ತಿಗೆ ಈ ಕಾರ್ಯದಲ್ಲಿ ಯಶಸ್ವಿಯಾಗುವ ಗುರಿ ಹೊಂದಿದೆ ನೆರೆರಾಷ್ಟ್ರ


ಬಾಹ್ಯಾಕಾಶ (Space) ಕುತೂಹಲಗಳ ಆಗರ. ಅದಕ್ಕಾಗಿಯೇ ಎಲ್ಲ ರಾಷ್ಟ್ರಗಳು ಬಾಹ್ಯಾಕಾಶದಲ್ಲಿ ತಮ್ಮ ಸಾಧನೆಯನ್ನು ಸಿದ್ಧಿಸಲು ಪ್ರಯತ್ನಿಸುತ್ತಲೇ ಇರುತ್ತವೆ. ಸಾಕಷ್ಟು ರಾಷ್ಟ್ರಗಳ ವಿಷಯದಲ್ಲಿ ಸ್ವಾಲಂಬನೆಯನ್ನು ಸಾಧಿಸಿವೆ ಮತ್ತು ಬಾಹ್ಯಾಕಾಶವನ್ನು ತಮ್ಮ ಆಡೋಂಬಲವಾಗಿ ಮಾಡಿಕೊಂಡಿವೆ. ಈ ವಿಷಯದಲ್ಲಿ ಅಮೆರಿಕ, ಚೀನಾ, ಭಾರತವಾಗಲೀ ಹಿಂದೆ ಬಿದ್ದಿಲ್ಲ. ಆದರೆ, ಚೀನಾ ಈಗ ಮತ್ತೊಂದ ಕಾರಣಕ್ಕೆ ಸುದ್ದಿಯಾಗುತ್ತಿದೆ ಏನೆಂದರೆ, ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಚಂದ್ರ (Moon) ನ ಮಾದರಿಗಳನ್ನು ಯಶಸ್ವಿಯಾಗಿ ಹಿಂಪಡೆದು, ಲ್ಯಾಂಡಿಂಗ್ ಮತ್ತು ಮಂಗಳ (Mars) ಗ್ರಹದಲ್ಲಿ ಸಂಚರಿಸಿದ ನಂತರ ಚೀನಾ (China) ಮೊದಲ ಸೌರಶಕ್ತಿ ಚಾಲಿತ ಸ್ಥಾವರ (Solar  Power Plant) ವನ್ನು ಬಾಹ್ಯಾಕಾಶದಲ್ಲಿ ಪ್ರಾರಂಭಿಸಲು ಸಿದ್ಧವಾಗಿದೆ. ಯೋಜನೆಯು ಪ್ರಸ್ತುತ ಅದರ ಆರಂಭಿಕ ಹಂತಗಳಲ್ಲಿದೆ ಮತ್ತು 2028 ರ ವೇಳೆಗೆ ಇದನ್ನು ಪ್ರಾರಂಭಿಸಲು ಸಾಧ್ಯವಾಗಬಹುದ ಎಂದು ಚೀನಾ ಭರವಸೆಯನ್ನು ವ್ಯಕ್ತಪಡಿಸಿದೆ. ವಾಸ್ತವದಲ್ಲಿ  ಚೀನಾ ಈ ಪ್ರಾಜೆಕ್ಟ್ ಅನ್ನು 2030ರ ವೇಳೆ ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡಿತ್ತು. ಈಗ ನೋಡಿದರೆ, ಉದ್ದೇಶ ಸಮಯಕ್ಕಿಂತ ಮೊದಲೇ ಸೋಲಾರ್ ಪವರ್ ಪ್ಲ್ಯಾಂಟ್ ಶುರುವಾಗು ನಿರೀಕ್ಷೆಗಳಿವೆ ಎನ್ನಲಾಗುತ್ತಿದೆ. ಸೌರ ಬಾಹ್ಯಾಕಾಶ ನಿಲ್ದಾಣವು ವಿದ್ಯುತ್ ಮತ್ತು ಮೈಕ್ರೋವೇವ್‌ಗಳನ್ನು ಉತ್ಪಾದಿಸಲು ಸೌರ ಶಕ್ತಿಯನ್ನು ಬಳಸುತ್ತದೆ. ಕಕ್ಷೆಯಲ್ಲಿ ಚಲಿಸುವ ಉಪಗ್ರಹ (Satellite) ಗಳಿಗೆ ಶಕ್ತಿ ತುಂಬಲು, ಹಾಗೆಯೇ ವೈರ್‌ಲೆಸ್ ಪವರ್ (Wireless Power) ವರ್ಗಾವಣೆಯ ಮೂಲಕ ಭೂಮಿಯ ಮೇಲಿನ ಸ್ಥಿರ ಸ್ಥಳಗಳಿಗೆ ಶಕ್ತಿ ಕಿರಣಗಳನ್ನು ನಿರ್ದೇಶಿಸಲು ಅವುಗಳನ್ನು ಬಳಸಬಹುದು.

ಕ್ಸಿಡಿಯನ್ ವಿಶ್ವವಿದ್ಯಾಲಯ (Xidian University)ದ ಸಂಶೋಧನಾ ತಂಡವು ಈ ಅಧ್ಯಯನವನ್ನು ನಡೆಸಿದೆ ಎಂದು ವಿವಿಧ ಮಾಧ್ಯಮ ವರದಿಗಳು ಸೂಚಿಸುತ್ತವೆ. ಅಧಿಕೃತ ಪ್ರಕಟಣೆಯ ಪ್ರಕಾರ, ಸೌರ ಕೇಂದ್ರವು ಸೌರ ಶಕ್ತಿಯನ್ನು ಭೂಮಿಗೆ ವರ್ಗಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಆರಂಭಿಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣವಾಗಿದೆ. ಬಾಹ್ಯಾಕಾಶ ಸೌರ ವಿದ್ಯುತ್ ಕೇಂದ್ರವು ಹಾಟ್‌ಸ್ಪಾಟ್ ತಂತ್ರಜ್ಞಾನವಾಗಿದೆ ಎಂದು ನಿರೀಕ್ಷಿಸಲಾಗಿದೆ, ಇದು ಬಾಹ್ಯಾಕಾಶಕ್ಕೆ ಅನ್ವೇಷಣೆಯ ನಡೆಯುತ್ತಿರುವ ಯೋಜನೆಯಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುತ್ತದೆ. ಬಾಹ್ಯಾಕಾಶದಲ್ಲಿ ಪ್ರಾರಂಭವಾಗಲಿರುವ ಈ ಸೋಲಾರ್ ವಿದ್ಯುತ್ ಸ್ಥಾವರದ ಸಾಮರ್ಥ್ಯವು 10 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯಾಗಿರುತ್ತದೆ.

ಖಾಸಗಿ ಸಂಸ್ಥೆಗೆಂದೇ ಉಪಗ್ರಹ: ಇಸ್ರೋಗೆ ಮತ್ತೊಂದು ಯಶಸ್ಸು

Latest Videos

undefined

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಕ್ಸಿಡಿಯನ್ ವಿಶ್ವವಿದ್ಯಾಲಯದಲ್ಲಿ ಪ್ರತಿಕೃತಿ ಪ್ಲಾಂಟ್ ಈಗಾಗಲೇ ಸಿದ್ಧ ಮಾಡಿದ್ದಾರೆ. ಈ ಪವರ್ ಪ್ಲಾಂಟ್ 75-ಮೀಟರ್-ಎತ್ತರದ ರಚನೆಯು ಐದು ಉಪವ್ಯವಸ್ಥೆಗಳಿಂದ ಮಾಡಲ್ಪಟ್ಟಿದೆ, ಅದು ಸೌರ ಶಕ್ತಿಯ ಸರಣಿಗಳನ್ನು ವೀಕ್ಷಿಸುತ್ತದೆ. ಈ ಯೋಜನೆಯು OMEGA (ಆರ್ಬ್-ಶೇಪ್ ಮೆಂಬರೇನ್ ಎನರ್ಜಿ ಗ್ಯಾದರಿಂಗ್ ಅರೇ) ಯ ಒಂದು ಅಂಶವಾಗಿದೆ, ಇದು ಬಾಹ್ಯಾಕಾಶದಿಂದ ಸೌರ ಶಕ್ತಿ ಉತ್ಪಾದನೆಗೆ 2014 ರ ಉಪಕ್ರಮವಾಗಿದೆ. ಭೂಸ್ಥಿರ ಕಕ್ಷೆಯಲ್ಲಿ ತನ್ನನ್ನು ತಾನು ಯಶಸ್ವಿಯಾಗಿ ಸ್ಥಾಪಿಸಿದ ನಂತರ OMEGA ಯ ಅಂತಿಮ ಗುರಿ ಸೌರ ಶಕ್ತಿಯನ್ನು ಸಂಗ್ರಹಿಸುವುದು. ಇದನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ವಿಧಾನ ಹೀಗಿದೆ. ಅದನ್ನು ಭೂಮಿಗೆ ಕಳುಹಿಸುವುದು ಕೊನೆಯ ಹಂತವಾಗಿದೆ.

ಇಸ್ರೋ ಮಂಗಳಯಾನಕ್ಕೆ ಪಂಚಾಂಗ ಬಳಸಿತ್ತು: ಮಾಧವನ್‌

ಬಾಹ್ಯಾಕಾಶದಲ್ಲಿ ಸೌರ ವಿದ್ಯುತ್ ಸ್ಥಾವರದ ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಲು ಚಾಂಗ್‌ಕಿಂಗ್‌ನ ಬಿಶನ್ ಜಿಲ್ಲೆಯಲ್ಲಿ 33 ಎಕರೆ ಪರೀಕ್ಷಾ ಸ್ಥಳವನ್ನು ನಿರ್ಮಿಸಲಾಗುತ್ತಿದೆ. "ನಾಗರಿಕ-ಮಿಲಿಟರಿ ಇಂಟಿಗ್ರೇಷನ್‌ಗಾಗಿ ಚಾಂಗ್‌ಕಿಂಗ್ ಸಹಯೋಗದ ನಾವೀನ್ಯತೆ ಸಂಶೋಧನಾ ಸಂಸ್ಥೆ" ಯ ಉಪ ಅಧ್ಯಕ್ಷ ಕ್ಸಿ ಗೆಂಗ್‌ಕ್ಸಿನ್ ಪ್ರಕಾರ, ಈ ಸೌಲಭ್ಯವು ಮೈಕ್ರೋವೇವ್ ವಿಕಿರಣವು ಜೈವಿಕ ಜೀವಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡುತ್ತದೆ ಮತ್ತು ಏಕಕಾಲದಲ್ಲಿ ಬಾಹ್ಯಾಕಾಶ ಪ್ರಸರಣ ತಂತ್ರಜ್ಞಾನಗಳನ್ನು ರಚಿಸುತ್ತದೆ.

click me!