ಸುಧಾಮೂರ್ತಿ ಸಹೋದರ ಕೂಡಾ ಸಾಧಕ; ಪ್ರಮುಖ ಬಾಹ್ಯಾಕಾಶ ವಿಜ್ಞಾನಿ ಈ ಐಐಟಿ ಪದವೀಧರ

By Vinutha PerlaFirst Published Nov 23, 2023, 3:21 PM IST
Highlights

ಸುಧಾ ಮೂರ್ತಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇನ್ಫೋಸಿಸ್ ಫೌಂಡೇಶನ್ ಅನ್ನು ಸ್ಥಾಪಕರು ಮತ್ತು ಅದರ ಅಧ್ಯಕ್ಷರು. ಮಾತ್ರವಲ್ಲ ಉತ್ತಮ ವಾಗ್ಮಿ ಮತ್ತು ಬರಹಗಾರರು. ಆದ್ರೆ ಇನ್ಫೋಸಿಸ್ ಸಹೋದರ ಕೂಡಾ ತುಂಬಾ ಫೇಮಸ್‌ ಅನ್ನೋದು ಗೊತ್ತಿದ್ಯಾ? ಯಾರವರು ಇಲ್ಲಿದೆ ವಿವರ.

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಭಾರತೀಯ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಹೆಸರುಗಳು. ಬಿಲಿಯನೇರ್ ದಂಪತಿಗಳು ತಮ್ಮ ಬುದ್ಧಿವಂತಿಕೆ, ಲೋಕೋಪಕಾರ, ತೀಕ್ಷ್ಣ ವ್ಯವಹಾರ ನಿರ್ವಹಣೆಗೆ ಹೆಸರುವಾಸಿಯಾಗಿದ್ದಾರೆ. ಆದರೆ, ಸುಧಾಮೂರ್ತಿಯವರ ಸಹೋದರ ಕೂಡಾ ತುಂಬಾ ಪ್ರಸಿದ್ಧವಾದ ವ್ಯಕ್ತಿ ಅನ್ನೋದು ನಿಮ್ಗೆ ಗೊತ್ತಿದ್ಯಾ? ಹೌದು, ಸುಧಾ ಮೂರ್ತಿಯವರ ಸಹೋದರ ಕೂಡ ವೈಜ್ಞಾನಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಹೆಸರು. ಪ್ರಪಂಚದಾದ್ಯಂತದ ಪ್ರಮುಖ ಸಂಸ್ಥೆಗಳಿಂದ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಅವರು ಮತ್ಯಾರೂ ಅಲ್ಲ, ಶ್ರೀನಿವಾಸ್ ಕುಲಕರ್ಣಿ. ಬಾಹ್ಯಾಕಾಶದ ಬಗ್ಗೆ ಮಹತ್ವದ ಸಂಶೋಧನೆಗಳನ್ನು ಮಾಡಿದ ಐಐಟಿ ಪದವೀಧರ.

ಮಹಾರಾಷ್ಟ್ರದ ಕುರುಂದವಾಡದ ಸಣ್ಣ ಪಟ್ಟಣದಲ್ಲಿ ಜನಿಸಿದ ಶ್ರೀನಿವಾಸ ಕುಲಕರ್ಣಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಶಸ್ತ್ರಚಿಕಿತ್ಸಕನ ಮಗ. ಅವರು ತಮ್ಮ ಮೂವರು ಸಹೋದರಿಯರೊಂದಿಗೆ ಕರ್ನಾಟಕದ ಹುಬ್ಬಳ್ಳಿಯಲ್ಲಿ ಬೆಳೆದರು. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಕುಲಕರ್ಣಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಅನ್ವಯಿಕ ಭೌತಶಾಸ್ತ್ರದಲ್ಲಿ ಎಂಎಸ್ ಪಡೆಯಲು ದೆಹಲಿಗೆ ಬಂದರು. 

ನಾನು ಸಿಕ್ಕಾಪಟ್ಟೆ ಮಾತಾಡ್ತೀನಿ ನಾರಾಯಣ ಮೂರ್ತಿ ಕೇಳ್ತಾ ಇರ್ತಾರಷ್ಟೇ, ಪತಿಯ ಬಗ್ಗೆ ಸುಧಾಮೂರ್ತಿ ಮಾತು ವೈರಲ್‌!

ಹಲವಾರು ಪ್ರಮುಖ ಖಗೋಳ ಸಂಶೋಧನೆಗಳ ರೂವಾರಿ
ಪದವಿಯ ನಂತರ, ಅವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಪಡೆದರು. ಶ್ರೀನಿವಾಸ್ ಕುಲಕರ್ಣಿ ಅವರು ಪದವಿ ವಿದ್ಯಾರ್ಥಿಯಾಗಿದ್ದಾಗ ಮೊದಲ ಮಿಲಿಸೆಕೆಂಡ್ ಪಲ್ಸರ್‌ನ್ನು ಕಂಡುಹಿಡಿದರು. 1987 ರಲ್ಲಿ ಮೊದಲ ಗ್ಲೋಬ್ಯುಲರ್ ಕ್ಲಸ್ಟರ್ ಪಲ್ಸರ್ ಆವಿಷ್ಕಾರದಲ್ಲಿ ಅವರು ಪ್ರಮುಖ ಸದಸ್ಯರಾಗಿದ್ದಾರೆ. 

ಇವುಗಳ ಹೊರತುಪಡಿಸಿ ಕುಲಕರ್ಣಿ ಅವರು ಹಲವಾರು ಪ್ರಮುಖ ಖಗೋಳ ಸಂಶೋಧನೆಗಳನ್ನು ಮಾಡಿದ್ದಾರೆ, ಇದರಿಂದಾಗಿ ಅವರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದರು. ಕುಲಕರ್ಣಿ ಅವರು 2009ರಿಂದ ಫಿಸಿಕಲ್ ಸೈನ್ಸಸ್ ವಿಭಾಗದ ಇನ್ಫೋಸಿಸ್ ಪ್ರಶಸ್ತಿಗೆ ಜ್ಯೂರಿ ಅಧ್ಯಕ್ಷರಾಗಿದ್ದಾರೆ. ಬಹುಮಾನವನ್ನು ಇನ್ಫೋಸಿಸ್ ಫೌಂಡೇಶನ್ ನೀಡಲಾಗುತ್ತದೆ. ಇದರ ಸಂಸ್ಥಾಪಕರು ಕುಲಕರ್ಣಿ ಅವರ ಸೋದರ ಮಾವ ನಾರಾಯಣ ಮೂರ್ತಿ. 1987 ರಲ್ಲಿ, ಕುಲಕರ್ಣಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಾಪಕರಾಗಿ ಸ್ಥಾನ ಪಡೆದರು. ಅವರ ವೆಬ್‌ಸೈಟ್ ಪ್ರಕಾರ, ಅವರು 2016ರ ಅಂತ್ಯದ ವೇಳೆಗೆ 64 ಯುವಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಕುಲಕರ್ಣಿ ಅವರು ಖಗೋಳಶಾಸ್ತ್ರದೊಳಗೆ ಹೊಸ ಉಪ-ಕ್ಷೇತ್ರಗಳನ್ನು ತೆರೆಯುವ ಪ್ರಮುಖ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದ್ದಾರೆ.

ಎಲಾನ್‌ ಮಸ್ಕ್‌ನ ಜಗತ್ತಿನಲ್ಲಿ ಸರಳತೆಯ ಸುಧಾಮೂರ್ತಿ, ಮಹಿಳಾ ಉದ್ಯಮಿಯ ಲಿಂಕ್ಡ್‌ ಇನ್‌ ಪೋಸ್ಟ್ ವೈರಲ್‌

ಪ್ರಶಸ್ತಿಗಳು ಮತ್ತು ಗೌರವಗಳು
ಕುಲಕರ್ಣಿ ಅವರು 1992ರಲ್ಲಿ NSF ನ ಅಲನ್ ಟಿ. ವಾಟರ್‌ಮ್ಯಾನ್ ಪ್ರಶಸ್ತಿ, 1991 ರಲ್ಲಿ ಅಮೇರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿಯಿಂದ ಹೆಲೆನ್ ಬಿ. ವಾರ್ನರ್ ಪ್ರಶಸ್ತಿ, 2002 ರಲ್ಲಿ ಜಾನ್ಸ್ಕಿ ಪ್ರಶಸ್ತಿ ಮತ್ತು 2017 ರಲ್ಲಿ ಡಾನ್ ಡೇವಿಡ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. 2015 ರಲ್ಲಿ ಅವರು ನೆದರ್ಲೆಂಡ್ಸ್‌ನ ರಾಡ್‌ಬೌಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು.

click me!