Chandrayan 4: ಚಂದ್ರನ ನೆಲದಿಂದ ಮಣ್ಣನ್ನು ಭೂಮಿಗೆ ವಾಪಾಸ್‌ ತರಲಿದೆ ಇಸ್ರೋ!

By Santosh Naik  |  First Published Nov 21, 2023, 3:23 PM IST

Chandrayaan 4 upcoming lunar mission ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡುವ ಮೂಲಕ ಚಂದ್ರಯಾನ-3 ಯೋಜನೆಯಲ್ಲಿ ದೊಡ್ಡ ಯಶಸ್ಸು ಸಂಪಾದನೆ ಮಾಡಿರುವ ಇಸ್ರೋ ತನ್ನ ಮುಂದಿನ ಚಂದ್ರಯಾನ - 4 ಯೋಜನೆಯ ಮಾಹಿತಿಯನ್ನು ಹಂಚಿಕೊಂಡಿದೆ.


ನವದೆಹಲಿ (ನ.21): ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಈ ವರ್ಷದ ದೇಶದ ಅತಿದೊಡ್ಡ ಸಕ್ಸಸ್‌. ಇದರ ಖುಷಿಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮುಂದಿನ ಪ್ರಾಜೆಕ್ಟ್‌ ಅಗಿರುವ ಚಂದ್ರಯಾನ-4 ಬಗ್ಗೆ ಗುರಿ ನೆಟ್ಟಿದೆ. ಚಂದ್ರಯಾನ-4 ಯೋಜನೆಯ ವೇಳೆ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿ, ಸಂಶೋಧನೆ ಮಾಡುವುದು ಮಾತ್ರವಲ್ಲದೆ, ಚಂದ್ರನ ಮಣ್ಣನ್ನು ಭೂಮಿಗೆ ವಾಪಾಸ್‌ ತರುವ ಪ್ರಯತ್ನವನ್ನೂ ಮಾಡಲಾಗುತ್ತದೆ. ಹಾಗೇನಾದರೂ ಆದಲ್ಲಿ ಭಾರತದ ಈ ಸಾಧನೆ ದೇಶವನ್ನು ಬಾಹ್ಯಾಕಾಶ ಪರಿಶೋಧನೆಯಲ್ಲಿ ಮತ್ತಷ್ಟು ಮುಂಚೂಣಿಯಲ್ಲಿ ನಿಲ್ಲಿಸಲಿದೆ. ಪುಣೆಯಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯೊರಾಲಜಿಯ 62 ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಬಾಹ್ಯಾಕಾಶ ಅಪ್ಲಿಕೇಶನ್‌ಗಳ ಕೇಂದ್ರದ (ಎಸ್‌ಎಸಿ/ಇಸ್ರೋ) ನಿರ್ದೇಶಕ ನಿಲೇಶ್ ದೇಸಾಯಿ ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ. ಇಸ್ರೋದ ಮುಂದಿನ ಚಂದ್ರಯಾನಸ-4 ಪ್ರಾಜೆಕ್ಟ್‌ನಲ್ಲಿ ಚಂದ್ರನ ನೆಲದಿಂದ ಸ್ಯಾಂಪಲ್‌ಅನ್ನು ಭೂಮಿಗೆ ಮರಳಿ ತರುವ ಗುರಿಯನ್ನು ಹೊಂದಿರಲಿದೆ ಎಂದಿದ್ದಾರೆ.

ಚಂದ್ರಯಾನ-4 ಯೋಜನೆಯ ವೇಳೆ ಲ್ಯಾಡಿಂಗ್‌ ಚಂದ್ರಯಾನ-3 ಯೋಜನೆಯಲ್ಲಿ ಇದ್ದ ರೀತಿಯಲ್ಲಿಯೇ ಇರುತ್ತದೆ. ಇದರಲ್ಲಿ ಸೆಂಟ್ರಲ್‌ ಮಾಡ್ಯುಲ್‌ ಚಂದ್ರನ ಬಳಿ ಇರುವ ಆರ್ಬಿಟಿಂಗ್ ಮಾಡ್ಯುಲ್‌ಗೆ ವಾಪಾಸ್‌ ಬಂದು ಕೂಡಿಕೊಳ್ಳಲಿದೆ. ಈ ಆರ್ಬಿಟಿಂಗ್‌ ಮಾಡ್ಯುಲ್‌ ಭೂಮಿಯ ವಾತಾವರಣದವರೆಗೂ ಬಂದು ಸಪರೇಟ್‌ ಆಗಲಿದೆ. ಚಂದ್ರನ ನೆಲದ ಮಣ್ಣನ್ನು ಹೊತ್ತ ರೀ ಎಂಟ್ರಿ ಮಾಡ್ಯುಲ್‌ ಭೂಮಿಗೆ ಇಳಿಯಲಿದೆ. ಇದು ಅತ್ಯಂತ ಮಹತ್ವಾಕಾಂಕ್ಷೆಯ ಮಿಷನ್ ಆಗಿದ್ದು, ಮುಂದಿನ ಐದರಿಂದ ಏಳು ವರ್ಷಗಳಲ್ಲಿ ನಾವು ಚಂದ್ರನ ಮೇಲ್ಮೈಯಿಂದ ಮಾದರಿಯನ್ನು ತರುವ ಈ ಸವಾಲನ್ನು ಪೂರ್ಣ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ಮಿಷನ್ ಅದರ ಚಂದ್ರಯಾನ-4ಗಿಂತ ಹೆಚ್ಚು ಸಂಕೀರ್ಣವಾಗಿದೆ. ಅಲ್ಲಿ ಚಂದ್ರಯಾನ-3 ತನ್ನಲ್ಲಿ 30 ಕೆಜಿ ರೋವರ್ ಹೊಂದಿತ್ತು, ಚಂದ್ರಯಾನ-4 ಬೃಹತ್ 350 ಕೆಜಿ ರೋವರ್ ಅನ್ನು ಇಳಿಸಲು ಯೋಜಿಸಿದೆ. ಚಂದ್ರನ ಅಂಚಿನಲ್ಲಿ ನಿಖರವಾದ ಲ್ಯಾಂಡಿಂಗ್ ಮಾಡುವ ಗುರಿಯನ್ನು ಹೊಂದಿರುವಂತೆ ಸವಾಲು ಹೆಚ್ಚಾಗುತ್ತದೆ, ಈ ಪ್ರದೇಶವನ್ನು ಇನ್ನೂ ಅನ್ವೇಷಿಸಬೇಕಾಗಿದೆ. ರೋವರ್ 1 ಕಿಮೀ x 1 ಕಿಮೀ ಪರಿಶೋಧನಾ ಪ್ರದೇಶವನ್ನು ಹೊಂದಿರುತ್ತದೆ, ಇದು ಚಂದ್ರಯಾನ-3 ರ 500 ಮೀಟರ್ x 500 ಮೀಟರ್‌ಗಿಂತ ಗಮನಾರ್ಹವಾಗಿ ದೊಡ್ಡ ಪ್ರಮಾಣದ್ದಾಗಿದೆ.

ಚಂದ್ರಯಾನ-4ರ ಯಶಸ್ಸು ಚಂದ್ರನ ಮಣ್ಣಿನ ಮಾದರಿಗಳನ್ನು ಭೂಮಿಗೆ ಹಿಂದಿರುಗಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಈ ಪ್ರಕ್ರಿಯೆಯು ಲ್ಯಾಂಡರ್ ಮಾಡ್ಯೂಲ್ ಅನ್ನು ಬಾಹ್ಯಾಕಾಶದಲ್ಲಿ ಪರಿಭ್ರಮಿಸುವ ಮಾಡ್ಯೂಲ್ನೊಂದಿಗೆ ಡಾಕಿಂಗ್ ಮಾಡುವುದನ್ನು ಒಳಗೊಂಡಿರುತ್ತದೆ, ನಂತರ ಮಾದರಿಗಳೊಂದಿಗೆ ಕೇಂದ್ರ ಮಾಡ್ಯೂಲ್ ಅನ್ನು ಹಿಂತಿರುಗಿಸುತ್ತದೆ. ಈ ಕಾರ್ಯಾಚರಣೆಯು ಎರಡು ಉಡಾವಣಾ ವಾಹನಗಳನ್ನು ಒಳಗೊಂಡಿರುತ್ತದೆ, ಇದು ಕಾರ್ಯಾಚರಣೆಯ ಪ್ರಮಾಣ ಮತ್ತು ಸಂಕೀರ್ಣತೆಯನ್ನು ಸೂಚಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

Chandrayaan 3: ಕೊನೆಗೂ ಚಂದ್ರನ ಮೇಲೆ ಇಳಿಯಿತು ಪ್ರಗ್ಯಾನ್‌ ರೋವರ್‌, ಮೂಡಿತು ಇಸ್ರೋ ಚಿತ್ರ!

ಇಸ್ರೋ ಮತ್ತೊಂದು ಚಂದ್ರನ ಮಿಷನ್ ಲುಪೆಕ್ಸ್‌ನಲ್ಲಿ ಜಪಾನಿನ ಬಾಹ್ಯಾಕಾಶ ಸಂಸ್ಥೆ JAXA ನೊಂದಿಗೆ ಸಹಕರಿಸುತ್ತಿದೆ, ಇದು ಚಂದ್ರನ ಗಾಢ ಭಾಗವನ್ನು ಅನ್ವೇಷಿಸುತ್ತದೆ. ಈ ಕಾರ್ಯಾಚರಣೆಯು 350 ಕೆಜಿ ತೂಕದ ರೋವರ್ ಚಂದ್ರನ ಮೇಲ್ಮೈಯಲ್ಲಿ 90 ಡಿಗ್ರಿಗಳವರೆಗಿನ ಪ್ರದೇಶಗಳನ್ನು ಅನ್ವೇಷಿಸುತ್ತದೆ.

Chandrayaan 3: ಮುಂದಿನ ಮೂನ್‌ ಮಿಷನ್‌ ಚಂದ್ರಯಾನ-4, ಮಾಹಿತಿ ನೀಡಿದ ಇಸ್ರೋ ವಿಜ್ಞಾನಿ!

click me!