ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಚಿನ್ನ ಹೊರತೆಗೆದ ವಿಜ್ಞಾನಿಗಳು, ಇದೀಗ ಇ ವೇಸ್ಟ್‌ಗೆ ಭಾರಿ ಬೇಡಿಕೆ!

By Suvarna News  |  First Published Mar 5, 2024, 6:06 PM IST

ಇಷ್ಟು ದಿನ ಎಲೆಕ್ಟ್ರಾನಿಕ್ ತ್ಯಾಜ್ಯ ಯಾರಿಗೂ ಬೇಡ. ಆದರೆ ವಿಜ್ಞಾನಿಗಳ ಸಂಶೋಧನೆ ಬೆನ್ನಲ್ಲೇ ಇ ವೇಸ್ಟ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಾರಣ ಇದೇ ಇ ತ್ಯಾಜ್ಯದಿಂದ ವಿಜ್ಞಾನಿಗಳು ಚಿನ್ನ ಶೋಧಿಸಿ ಹೊರತೆಗೆದಿದ್ದಾರೆ. 83 ರೂಪಾಯಿ ಖರ್ಚು ಮಾಡಿ,  4,145 ರೂಪಾಯಿ ಲಾಭ ಪಡೆಯಬಹುದು ಅನ್ನೋ ಮಾರ್ಗ ಇದೀಗ ಬಯಲಾಗಿದೆ.
 


ಝ್ಯೂರಿಚ್(ಮಾ.05) ಇ ವೇಸ್ಟ್ ಅಥವಾ ಎಲೆಕ್ಟ್ರಾನಿಕ್ ತ್ಯಾಜ್ಯ ಎಲ್ಲಾ ದೇಶಕ್ಕೂ ಅತೀ ದೊಡ್ಡ ತಲೆನೋವು. ಹಳೇ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇನ್ನಿತರ ವೇಸ್ಟ್ ಮರುಬಳಕೆಯಾಗುವ ಪ್ರಮಾಣ ತೀರಾ ಕಡಿಮೆ. ಹೀಗಾಗಿ ಇ ವೇಸ್ಟ್ ಜಗತ್ತಿಗೆ ಅತೀ ದೊಡ್ಡ ಸವಾಲಾಗಿದೆ. ಆದರೆ ಈ ಸವಾಲಿಗೆ ಇದೀಗ ವಿಜ್ಞಾನಿಗಳ ಸಂಶೋಧನೆ ಉತ್ತರ ಜೊತಗೆ ಬಂಪರ್ ಲಾಭವನ್ನೂ ತಂದುಕೊಟ್ಟಿದೆ. ಝ್ಯೂರಿಚ್ ಪ್ರೊಫೆಸರ್ ಹಾಗೂ ಅವರ ತಂಡ ನಡೆಸಿದ ಸಂಶೋಧನೆಯಲ್ಲಿ ಹಳೇ ಕಂಪ್ಯೂಟರ್‌ಗಳ ಮದರ್‌ಬೋರ್ಡ್‌ನಿಂದ 440 ಮಿಲಿಗ್ರಾಂ ಚಿನ್ನ ಶೋಧಿಸಿ ಹೊರತೆಗಿದ್ದಾರೆ. 

ಝ್ಯೂರಿಚ್‌ನ ಇಟಿಎಚ್ ವಿಶ್ವವಿದ್ಯಾಲಯದ ಪ್ರೊಫೆಸರ್ ರಾಫೆಯೆಲೆ ಮೆಝೆಂಗಾ ಹಾಗೂ ಅವರ ತಂಡ ಈ ಸಂಶೋಧನೆಯನ್ನು ನಡೆಸಿ ಯಶಸ್ವಿಯಾಗಿದೆ.  ಎಲೆಕ್ಟ್ರಾನಿಕ್ ಇ ತ್ಯಾಜ್ಯದಿಂದ ಚಿನ್ನ ಶೋಧಿಸಲು ಮೊದಲು ಮದರ್‍‌ಬೋರ್ಡ್‌ಗಳನ್ನು ಕಂಪ್ಯೂಟರ್‌ನಿಂದ ಹೊರತೆಗೆದಿದ್ದಾರೆ. ಬಳಿಕ ಆ್ಯಸಿಕ್ ಮೂಲಕ ಈ ಮದರ್‌ಬೋರ್ಡ್‌ಗಳನ್ನು ಸ್ವಚ್ಚಗೊಳಿಸಿದ್ದಾರೆ. ಇತ್ತ  ಪ್ರೊಟಿನ್ ಸ್ಪಂಜು, ಚೀಸ್ ತಯಾರಿಕೆಯಲ್ಲಿನ ಉಪ ಉತ್ಪನ್ನಗಳನ್ನು ರೆಡಿ ಮಾಡಿದ್ದಾರೆ.

Latest Videos

undefined

ಚಂದ್ರನ ಮೇಲೆ ಹೊಸ ಇತಿಹಾಸ: ಚಂದಿರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಖಾಸಗಿ ಕಂಪನಿ

ಬಳಿಕ ಇ ತ್ಯಾಜ್ಯವನ್ನು ಹೆಚ್ಚಿನ ತಾಪಮಾನದಲ್ಲಿಟ್ಟು ಆಮ್ಲೀಯ ಪರಿಸ್ಥಿತಿಯಲ್ಲಿ ಪ್ರೋಟಿನ್ ಡಿನೇಚರ್ ಮಾಡಲಾಗಿದೆ. ಬಳಿಕ ಪ್ರೋಟಿನ್ ಸ್ಲರಿಯನ್ನು ರಚಿಸಲು ನೆರವಾಗಲು ಪ್ರೊಟಿನ್ ಸ್ಪಂಚುಗಳ ಬಳಸಿದ್ದಾರೆ. ತ್ಯಾಜ್ಯದಲ್ಲಿರುವ ಚಿನ್ನದ ಕಣಗಳನ್ನು ಆಕರ್ಷಿಸಲು ಪ್ರೋಟಿನ್ ಫೈಬರ್ ಸ್ಪಾಂಜ್‌ನ್ನ ದ್ರಾವಣದಲ್ಲಿ ಇರಿಸಿದ್ದಾರೆ. ಈ ವೇಳೆ ಚಿನ್ನದ ಕಣಗಳು ಈ ಪ್ರೋಟಿನ್ ಸ್ಪಂಜಿನಲ್ಲಿ ಅಂಟಿಕೊಳ್ಳಲು ಆರಂಭಿಸಿದೆ. ಈ ಪ್ರಕ್ರಿಯೆ ಬಳಿಕ ಪ್ರೋಟಿನ್ ಸ್ವಾಂಜುಗಳನ್ನು ಬಿಸಿ ಮಾಡಲಾಗಿದೆ. ಈ ವೇಳೆ ಇದರಲ್ಲಿ ಅಂಟಿಕೊಂಡ ಚಿನ್ನದ ಕಣಗಳು ಕರಗಿ ಗಟ್ಟಿಯಾಗಿ ಪರಿವರ್ತಿಸಲಾಗಿದೆ.

20 ಕಂಪ್ಯೂಟರ್‌ಗಳ ಮದರ್‌ಬೋರ್ಡ್‌ನಿಂಜ 450 ಮಿಲಿಗ್ರಾಂ ಚಿನ್ನ ಶೋಧಿಸಿ ತೆಗೆಯಲಾಗಿದೆ. ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಹೊರತೆಗೆದ ಚಿನ್ನದ ಮೌಲ್ಯಕ್ಕೆ ಹೋಲಿಸಿದರೆ, ಈ ಶೋಧನೆಗೆ ಬೇಕಾಗುವ ಖರ್ಚು ಅತೀ ಕಡಿಮೆಯಾಗಿದೆ. ಹೀಗಾಗಿ ಇಡೀ ವಿಶ್ವವೇ ಎದುರಿಸುತ್ತಿರುವ ಎಲೆಕ್ಟ್ರಾನಿಕ್ ತಾಜ್ಯದಿಂದ ಚಿನ್ನ ಶೋಧಿಸಿ ಮತ್ತಷ್ಟು ಆದಾಯಗಳಿಕೆಯ ಮಾರ್ಗವೊಂದು ಪತ್ತೆಯಾಗಿದೆ. 

28 ವರ್ಷಗಳ ಹಿಂದೆ ಇದೆ ದಿನ ನಡೆದಿತ್ತು ಅಚ್ಚರಿ, AI ಕಂಪ್ಯೂಟರ್ ಜೊತೆ ಚೆಸ್ ಚಾಂಪಿಯನ್ ಕಾದಾಟ!

ಈ ಸಂಶೋಧನೆ ಬೆನ್ನಲ್ಲೇ ಇದೀಗ ಇ ತ್ಯಾಜ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕೆಲ ದೇಶಗಳು ಇ ತ್ಯಾಜ್ಯವನ್ನು ವಿಲೇವಾರಿ ಮಾಡಲು ನಾನಾ ಕಸರತ್ತು ನಡೆಸುತ್ತಿತ್ತು. ಇದೀಗ ಚಿನ್ನ ಶೋಧನೆ ಮಾರ್ಗ ಹಲವು ದೇಶಗಳಿಗೆ ವರವಾಗಿದೆ.

click me!